ವಿಶೇಷ ವರದಿ :
ಎನ್. ರಾಜಕುಮಾರ್
ಸಿರಿಗೇರಿ ವರದಿ ಏ, 19: ಗರ್ಭದ ಗುಡಿಯಲ್ಲಿ ಲಿಂಗ. ಎಡ ಭಾಗದಲ್ಲಿ ನಾಗಲಿಂಗ. ಬರ ಬಿದ್ದಾಗ ಮಳೆ ತರಿಸುವ ದೈವ ಲಿಂಗ. ಅವರೇ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಕುಂಬಾರು ಓಣಿಯ ಆರಾಧ್ಯ ದೈವ ಶ್ರೀ ಶಂಭುಲಿಂಗೇಶ್ವರ.
ಇತಿಹಾಸ:
ಮೂಲತಃ ಈ ದೇವಸ್ಥಾನ ವಾಯುವ್ಯ ಭಾಗದಲ್ಲಿ ಪೂರ್ವಾಭಿಮುಖವಾಗಿದೆ. ಇತ್ತೀಚಿಗೆ ಸುತ್ತಲೂ ನಿರ್ಮಿಸಿದ ಪ್ರಕಾರದ ಮಧ್ಯದಲ್ಲಿ ಮೂರು ಅಂಕಣದ ಸಭಾ ಮಂಟಪ, ಅದಕ್ಕೆ ಹೊಂದಿಕೊಂಡಂತೆ ತೆರೆದ ಸುಕನಾಸಿ, ಸುಖನಾಸಿಗೆ ಹೊಂದಿಕೊಂಡು 10/10 ಅಳತೆಯ ಗರ್ಭಗೃಹ. ಅದರ ಮಧ್ಯಭಾಗದಲ್ಲಿ ಒಂದು ಅಡಿ ಎತ್ತರದ ವೃತ್ತಾಕಾಯದ ಪೀಠದ ಮೇಲೆ ಶಿವಲಿಂಗವಿದೆ. ಗರ್ಭಗೃಹದ ಚೆತ್ತಿನಲ್ಲಿ ಭುವನೇಶ್ವರಿ ಇದ್ದಾಳೆ. ಗರ್ಭಗೃಹದ ದ್ವಾರ ಸರಳವಾದ ಐದು ಪಟ್ಟಿ ಗಳನ್ನು ಹೊಂದಿದ್ದು, ಮಂಗಲ ಪರಕದಲ್ಲಿ ಗಜಲಕ್ಷ್ಮಿಯ
ಉಬ್ಬು ಶಿಲ್ಪವಿದೆ. ಗರ್ಭಗೃಹ ಮತ್ತು ಸುಕನಾಸಿಯ ಆಜು ಬಾಜಿನಲ್ಲಿ ಶೈವ ಆಯುಧಗಳನ್ನು ಧರಿಸಿರುವ ಇಬ್ಬರು ದ್ವಾರಪಾಲಕರಿದ್ದು, ಅವರ ಪಕ್ಕದಲ್ಲಿ ಚೋರಿ ಹಿಡಿದಿರುವ ಇಬ್ಬರು ಮಹಿಳೆಯರ ಮೂರ್ತಿಗಳಿವೆ. ತೆರೆದ ಸಭಾ ಮಂಟಪದ ಮಧ್ಯದಲ್ಲಿ ಒಂದು ಅಡಿ ಎತ್ತರದ ರಂಗಮಂಟಪವಿದೆ. ಅದರ ನಾಲ್ಕು ಬದಿಗಳಲ್ಲಿ ವೃತ್ತಾಕಾರದ ಸ್ತಂಭಗಳು, ಬೂದುಗೆಗಳು ಕಾಣಲ್ಪಡುತ್ತವೆ. ಈ ದೇವಸ್ಥಾನ ಬಹುತೇಕವಾಗಿ 16ನೇ ಶತಮಾನದಲ್ಲಿ ಉದ್ಭವವಾಗಿದೆ ಎಂದು ಹೇಳಲಾಗುತ್ತದೆ.

ಬರ ಬಿದ್ದಾಗ ವರುಣರಾಯ
ಹಿರಿಯರ ಕಾಲದಿಂದ ತೀವ್ರಗತಿಯಲ್ಲಿ ಬರ ಬಿದ್ದಾಗ ಆಹಾಕಾರ ಉಂಟಾದಾಗ ಇಲ್ಲಿನ ಗ್ರಾಮಸ್ಥರು ಮಳೆ ಬೆಳಗಾಗಿ ಪ್ರಾರ್ಥಿಸಿ ಮಡಿ ಸ್ನಾನ ಮಾಡಿ ಸುಮಾರು 11 ದಿನಗಳ ಕಾಲ ಹಗಲು-ರಾತ್ರಿ ಸಪ್ತ ಭಜನೆ ನಡೆಸುತ್ತಾರೆ. ಆದ್ಯಾವ ಕೃಪೆಯೋ ಗೊತ್ತಿಲ್ಲ. ಧಾರಾಕಾರವಾಗಿ ಮಳೆ ಸುರಿಯುವುದಂತೂ ಸತ್ಯ. ಈ ನಂಬಿಕೆಗೆ ಹೆಸರಾದವರು ಶ್ರೀ ಶಂಭುಲಿಂಗೇಶ್ವರ ದೇವರು. ಅಲ್ಲದೆ ಪ್ರತಿವರ್ಷ ಶಿವರಾತ್ರಿ ಯಂದು ವಿಶೇಷವಾಗಿ ರಥೋತ್ಸವವನ್ನು ಆಚರಿಸುತ್ತಾರೆ. ಎಲ್ಲಾ ರಥೋತ್ಸವದಲ್ಲಿ ಭಕ್ತಾದಿಗಳು ಹೂ ಹಣ್ಣು ರಥಕ್ಕೆ ತೂರಿದರೆ, ಶಂಭುಲಿಂಗೇಶ್ವರನ ರಥಕ್ಕೆ ದಾರಿಯುವುದಕ್ಕೂ ಉತ್ತುತ್ತಿ ತೂರಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆ ಕಾರಣಕ್ಕಾಗಿ ಸಿರಿಗೇರಿ ಗ್ರಾಮಸ್ಥರಲ್ಲಿ ಸೇರಿ ಇಂದು ಮತ್ತು ನಾಳೆ ಭಾನುವಾರದಂದು ದೇವಸ್ಥಾನಕ್ಕೆ ಕಳಸರೋಹಣ, ರಾತ್ರಿ ಪೂರ್ತಿ ಭಜನೆ, ಸೋಮವಾರ ನೂರಾರು ಮಹಿಳೆಯರಿಂದ ಕುಂಭೋತ್ಸವ, ಸೇರಿದಂತೆ ಡೊಳ್ಳು ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವುದು ವಿಶೇಷವಾಗಿದೆ.

ಈ ದೇವಸ್ಥಾನ ಯಾರು ಹೊತ್ತು ಕೂಡ ಅಲ್ಲ ಸುಮಾರ್ 15, 16 ಶತಮಾನದ ಕಾಲದಲ್ಲಿ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ಹತ್ತಾರ ಹಳ್ಳಿಯ ಜನರಿಗೆ, ಭಕ್ತಾದಿಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಇನ್ನಷ್ಟು ಉನ್ನತೀಕರಿಸಲು ಅನೇಕ ಜನ ಭಕ್ತಾದಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಸಹಕಾರ ನೀಡುತ್ತಲೇ ಬಂದಿದ್ದಾರೆ. ಇದು ನಮ್ಮ ಅಳಿಲು ಸೇವೆ ಅಷ್ಟೇ ಎಂದು ದೇವಸ್ಥಾನ ಕಮಿಟಿಯ ಪ್ರಮುಖರಾದ ಹೂಗಾರ್ ಬಸವರಾಜ್ ಹಾಗೂ ಕುಂಬಾರ ಬಸವ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಂತಹ ಇತಿಹಾಸ ಪ್ರಸಿದ್ಧ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಎಲ್ಲರೂ ಭಾಗವಹಿಸೋಣ ಎಂಬುದು ಸಿರಿಗೆ ಗ್ರಾಮಸ್ಥರ ಆಶಯವಾಗಿದೆ.


