ಬಾಳಿಗೆ ಬೆಳಕಾದ ಶ್ರೀ ನಾಗಲೇಖ ಗುರುವರ್ಯರು
ನಡೆ ನುಡಿಯಲಿ ಶುದ್ಧರಾಗಿ ನಡೆದವರು
ಅವಮಾನಗಳ ಸರಮಾಲೆ ಕಳಚಿದವರು
ಬದುಕಲಿ ಹೋರಾಟ ಮಾಡುತ ನಡೆದವರು
ಸದ್ದಿಲ್ಲದೇ ಅಭಿಮಾನಿ ಬಳಗ ಕಟ್ಟಿದವರು
ಎಲ್ಲಿಯೂ ತಿರಸ್ಕಾರ ಮಾಡುವ ಜನರಿಲ್ಲ
ಆತ್ಮೀಯತೆಗೆ ಸೋಲದ ಮನಸುಗಳಿಲ್ಲ
ಮಾತಿನಲಿ ಕಟು ಸತ್ಯವ ನುಡಿಯುತಿಹರಲ್ಲ
ನೇರ ನುಡಿಯಿಂದಲೇ ಮನ ಗೆದ್ದಿಹರಲ್ಲ
ಪ್ರತಿ ಹೆಜ್ಜೆಯಲಿ ಸೂಕ್ಷ್ಮತೆಯ ಹೇಳುವರು
ಅರಿವು ಮೂಡಿಸಿ ಬದುಕಿನ ಪಾಠ ಕಲಿಸುವರು
ತಂದೆಯಂತೆ ತಿದ್ದಿ ಬುದ್ಧಿ ನೀತಿ ತಿಳಿಸುವರು
ಮಾತೃ ಹೃದಯದ ಕಡಲಾಗಿ ದಾರಿ ತೋರುವರು
ಒಳಿತು ಬಯಸುವ ಸ್ನೇಹ ಜೀವಿಯಾದವರು
ಎನ್ನ ಜೀವಕೆ ಹೊಸ ಆರ್ಥ ತಂದು ಕೊಟ್ಟವರು
ಬದುಕಿಗೆ ಚೇತನವ ತುಂಬಿ ವಿವೇಕಾನಂದರಾದವರು
ತತ್ವ ಸಿದ್ಧಾಂತಗಳೊಪ್ಪಿಕೊಂಡು ಅಂಬೇಡ್ಕರರಾದವರು
ಅಪ್ಪನ ಪ್ರೀತಿ ವಾತ್ಸಲ್ಯ ಕಾಳಜಿ ತೋರಿದವರು
ಅವರ ಪ್ರತಿಬಿಂಬವಾಗಿ ಮತ್ತೆ ಎನಗೆ ಕಂಡವರು
ಆ ದೇವರು ಕೊಟ್ಟ ಅದೃಷ್ಟದ ಕೊಡುಗೆಯಾದವರು
ಇವರೇ ಬದುಕಿಗೆ ಬಂದ ಶ್ರೀ ನಾಗಲೇಖ ಗುರುವರ್ಯರು
ಕುಮಾರಿ ಭಾಗ್ಯಶ್ರೀ ಶಿ ಹುರಕಡ್ಲಿ
(ಕನ್ನಡತಿ ಭಾಗ್ಯ)
ಜನಸಿರಿ ಮನೆಮಗಳು
ಧಾರವಾಡ ಜಿಲ್ಲೆ

