ಸಿರಿಗೇರಿ ನ:13,ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಅಂಗವಾಗಿ ಶ್ರೀ ಮೌಲಾನಾ ಅಬುಲ್ ಕಲಾಂ ಆಜಾದ್ ಹಾಗು ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ
ಎಸ್ ಡಿಎಂಸಿ ಅಧ್ಯಕ್ಷ ಎನ್ ಶ್ರೀರಾಮ ವೀರ ವನಿತೆ ಓಬವ್ವ ನಾಡಿನ ಸಾರ್ವಭೌಮತೆ ಮಾತ್ರವಲ್ಲ ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳ ವಿರುದ್ಧ ಹೋರಾಡಿ ತ್ಯಾಗ ಮಾಡಿ ಅಜರಾಮರ ಒನಿತೆನಿಸಿಕೊಂಡರು. ಅವರ ಇಂತಹ ಮಹಿಳಾ ಹೋರಾಟಗಾರರ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ಕರೆ ನೀಡಿದರು.
ತದನಂತರ ಮಾತನಾಡಿದ
ಮುಖ್ಯಗುರುಗಳಾದ ಎನ್ ನಾಗಭೂಷಣ್ ಮೌಲಾನಾ ಅಬ್ದುಲ್ ರವರು ದೇಶದ ಮೊಟ್ಟ ಮೊದಲ ಶಿಕ್ಷಣ ಮಂತ್ರಿಯಾಗಿ ಸಮಾಜ ಸೇವೆಗೆ ತಮ್ಮನ್ನೇ ತಾವು ಅರ್ಪಿಸಿಕೊಂಡವರು. ಶಿಕ್ಷಣಕ್ಕೆ ಇವರು ನೀಡಿದ ಕೊಡುಗೆ ಅಪಾರ. ಪ್ರತಿಯೊಬ್ಬ ಶಿಕ್ಷಣ ಪ್ರೇಮಿಗಳಿಗೆ ಇವರು ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಶ್ರೀ ಎನ್ ರಮೇಶ ಇವರಿಬ್ಬರ ದಕ್ಷತೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಮುಂತಾದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಆಫ್ರಿನ್, ಈರಮ್ಮ, ಪಾರ್ವತಿ, ಶಂಕರಮ್ಮ,
ಹೊನ್ನೂರ್ ಬಿ, ವೀರೇಶ್ ಕುಮಾರ್, ಹಾಗೂ ಉಪಸ್ಥಿತರಿದ್ದರು.






