ಅಬ್ಬಾ ಈ ಫೋನ್ ಒಂದು ನಿಮಿಷ ಕೂಡಾ ಕಾಣದಿದ್ದರೆ ಮನವು ಅಲ್ಲೋಲಕಲ್ಲೋಲ ಆಗುವದಂತೂ ಖಂಡಿತ.ಹುಟ್ಟಿದ ಮಕ್ಕಳಿಗೂ ಅಳು ನಿಲ್ಲಿಸಲು ಫೋನ್ ಬೇಕು ಬೇಕು.ಇನ್ನು ಪ್ರತಿ ಮನುಷ್ಯನಿಗೂ ಫೋನ್ ಇಲ್ಲದಿದ್ದರೆ, ಹುಚ್ಚು ಹಿಡಿದ ಹಾಗೆ ಆಗುತ್ತದೆ. ಪ್ರತಿ ಕ್ಷಣ ಕೈಯಲ್ಲಿ ಫೋನ್ ಬೇಕು.ಈ ಫೋನಿನಿಂದ ಚಿಕ್ಕ ಮಕ್ಕಳು ಕಥೆ, ಹಾಡು ಇದರಿಂದ ವಂಚಿತರಾಗಿದ್ದಾರೆ.ತಮ್ಮ ಕೆಲಸ ಸುಲಭವಾಗಲು ತಾಯಿಯರು ಫೋನ್ ಮುಂದೆ ಕೂಡಿಸುತ್ತಾರೆ.ಇದು ತಪ್ಪು ಎಂದು ನನ್ನ ಅನಿಸಿಕೆ.
ಸ್ಮಾರ್ಟ್ಫೋನ್ ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯವೂ ಇದೆ.ಇದು ಚಿಕ್ಕ ಮಕ್ಕಳಿಗಂತೂ ತುಂಬಾ ಅಪಾಯಕಾರಿ ಆಗಿದೆ.ಹಾಗೂ ಇದು ಪ್ರತಿಕೃತಿಯನ್ನು ಹಾಳು ಮಾಡಿದೆ ಎಂದರೆ ತಪ್ಪಾಗಲಾರದು.ಹಾಗೆಯೇ ಉಪಯೋಗ ಕೂಡಾ ತುಂಬಾ ಇದೆ.ಈ ಫೋನ್ ಕೈಯಲ್ಲಿ ಇದ್ದರೆ ಜಗತ್ತೇ ನೋಡಬಹುದು.ಒಳ್ಳೆಯ ಹಾಗೂ ಬೇಡದ ಸಮಾಚಾರವೂ ಇದೆ.ಒಳ್ಳೆಯದನ್ನು ಕಲಿಯಲು ಅವಕಾಶ ಇದೆ.ಮಿತವಾಗಿ ಬಳಸಿದರೆ,ಇದರಂತ ಉಪಯೋಗ ವಸ್ತು ಯಾವುದೂ ಇಲ್ಲ.
ಆದರೆ ಕೆಲವು ಜನರು ಒಳ್ಳೆಯದನ್ನು ಬಿಟ್ಟು ಬೇಡದ ಕೆಲಸವನ್ನು ಮಾಡುತ್ತಾರೆ.ಚಿಕ್ಕ ಮಕ್ಕಳಿಗೆ ಇದು ಖಂಡಿತ ಒಳ್ಳೆಯದಲ್ಲ. ಮಕ್ಕಳಿಗೆ ಕೈಯಲ್ಲಿ ಕೊಟ್ಟರೂ ಕೂಡಾ ಅವರ ಕಡೆಗೆ ಗಮನ ಕೊಡಬೇಕು.ಅವರು ಏನು ನೋಡುತ್ತಾರೆ ಎಂದು.ಯಾಕೆಂದರೆ, ಮಕ್ಕಳು ಕೆಟ್ಟ ಚಟಕ್ಕೆ ಬೇಗ ಹೊಂದಿಕೊಂಡು ಅದರಿಂದ ಹೊರಗೆ ಬರಲು ತುಂಬಾ ಕಷ್ಟವಾಗುತ್ತದೆ. ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.ಒಳ್ಳೆಯದು ಕಲಿಯಲು ತುಂಬಾ ಇದೆ.
ಮೊದಲಿನ ಕಾಲದಲ್ಲಿ ಫೋನ್ ಇರಲಿಲ್ಲ ಆದರೂ ಜಗತ್ತು ಎಲ್ಲಾ ರೀತಿಯ ವ್ಯವಹಾರಗಳು ಸರಾಗವಾಗಿ ನಡೆಯುತ್ತಿದ್ದವು.ಆದರೆ ತುರ್ತು ಸಮಾಚಾರ ಕೂಡಲು ಆಗುತ್ತಿರಲಿಲ್ಲ.ಈಗ ಥಟ್ಟನೇ ಎಲ್ಲಾ ವಿಷಯಗಳನ್ನು ಒಂದು ನಿಮಿಷದಲ್ಲಿ ತಿಳಿಸಲು ಅನುಕೂಲ ಆಗಿದೆ.ದೂರ ದೇಶದಲ್ಲಿ ಮಕ್ಕಳು ಇದ್ದರೆ ಅವರನ್ನು ನೋಡುತ್ತಾ ಮಾತನಾಡಲು ಅವಕಾಶ ಇದೆ. ಸ್ಮಾರ್ಟ್ಫೋನ್ ಮಿತವಾಗಿ ಬಳಸಿದರೆ ತುಂಬಾ ಒಳ್ಳೆಯದು.ಅದು ನಮ್ಮ ನಿಮ್ಮ ಕೈಯಲ್ಲಿದೆ.
