ಸಿರಾ, ಫೆ.೧೭: ಡಿಜಿಟಲ್ ಯುಗಕ್ಕೆ ಕಂಪ್ಯೂಟರ್ ಶಿಕ್ಷಣ ಅತೀ ಅವಶ್ಯಕ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣದ ಸ್ವರೂಪವು ಬದಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಅಬ್ದುಲ್ಲಾ ಖಾನ್ ಕರೆ ನೀಡಿದರು.
ಸಿರಾದಲ್ಲಿ ಎ.ಎಂ.ಎಸ್.ಕಂಪ್ಯೂಟರ್ಸ್ ಶಿಕ್ಷಣ ಸಂಸ್ಥೆಯ ಎರಡನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ೨೦೨೫-೨೬ನೆ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಕಂಪ್ಯೂರ‍್ಸ್ ಕೋರ್ಸ್ಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಬಡವರು ಹಾಗೂ ಮಧ್ಯಮ ವರ್ಗಗಳ ಕುಟುಂಬಗಳ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕೊಡಲು ಶ್ರಮಿಸುತ್ತಿರುವ ಎ.ಎಂ.ಎಸ್.ಕಂಪ್ಯೂಟರ್ಸ್ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಅಗತ್ಯ ನೆರವು ಒದಗಿಸಲಾಗುವುದು ಎಂದು ಅಬ್ದುಲ್ಲಾ ಖಾನ್ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಿಕ್ಷಣ ತಜ್ಞ ಸಂಜಯ್, ವಕೀಲೆ ಅರ್ಶೀಯಾ, ನರಸಪ್ಪ, ಮೌಲಾನಾ ಬಶೀರ್, ಝಬಿ ಬರಗೂರು, ಅರ್ಶದ್, ಮಹಬೂಬ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

