ಈಗಿನ ಕಾಲದಲ್ಲಿ ಯಾರಿಗೂ ನೆಮ್ಮದಿ ಇಲ್ಲ ಅಲ್ಲವೇ ಸ್ನೇಹಿತರೇ.ಹೌದು ನಿಜ ಇದಕ್ಕೆಲ್ಲಾ ಕಾರಣ ಹಣ.ಪ್ರತಿಯೊಬ್ಬರ ಮನದಲ್ಲೂ ಇರುವುದು ಏನೆಂದರೆ, ಹಣ ಇದ್ದರೆ ಮಾತ್ರ ಸುಖ ಸಂತೋಷದಿಂದ ಜೀವಿಸಬಹುದು ಎಂದು. ಹೀಗಾಗಿ ಹಣಕ್ಕಾಗಿ ಏನು ಮಾಡಲೂ ಹಿಂದೆ ಮುಂದೆ ನೋಡುವುದಿಲ್ಲ.ಆದರೇ , ಕೋಟಿ ಕೋಟಿ ಹಣ ಇದ್ದವರಿಗೆ ಸುಖ ಎಂಬುದು ಇರುವುದೇ ಇಲ್ಲ. ಹಣ ಇದ್ದಷ್ಟು ಸಾವಿರ ಚಿಂತೆ ಅವರ ಸುತ್ತ ಮುತ್ತ ತಿರುಗುತ್ತಾ ಇರುತ್ತವೆ.ಆದರೆ ನೋಡುಗರ ಕಣ್ಣಿಗೆ ಅವರ ಚಿಂತೆ ಕಾಣುವುದಿಲ್ಲ.ಬರೀ ಅವರ ಕಾರು, ಅವರು ಧರಿಸಿರುವ ಬಟ್ಟೆ, ಒಡವೆ ಇದನ್ನು ಕಂಡು ಅವರಂತ ಸುಖಿಗಳು ಯಾರೂ ಇಲ್ಲ ಎಂದು ತಿಳಿದುಕೊಳ್ಳುತ್ತಾರೆ.
ನಮ್ಮ ಕಣ್ಣೆದುರೇ ಸಮಾಜದಲ್ಲಿ ನೋಡುತ್ತಾ, ಓದುತ್ತಾ ಇರುತ್ತೇವೆ.ಕೆಲವು ಶ್ರೀಮಂತರು ನೆಮ್ಮದಿಯಿಂದ ನಿದ್ದೆ ಮಾಡುವುದಿಲ್ಲ.ಅವರಿಗೆ ಸದಾ ಜೀವದ ಭಯ ಇದ್ದೇ ಇರುತ್ತದೆ. ಸಾಮಾನ್ಯ ಜನರ ಹಾಗೆ ಸ್ವತಂತ್ರವಾಗಿ ಓಡಾಡಲು ಆಗುವುದಿಲ್ಲ. ಸುತ್ತಲೂ ಅಂಗರಕ್ಷಕರು ಬೇಕು.ಕೆಲವೊಮ್ಮೃ ಊಟ ಕೂಡಾ ಹೇಗೆ ಬೇಕೋ ಹಾಗೆ ಮಾಡಲು ಸಾಧ್ಯವಿಲ್ಲ.ಅವರು ಸೇವಿಸುವ ಆಹಾರ ಕೂಡಾ ಪರೀಕ್ಷೆ ಮಾಡಿ ತಿನ್ನಬೇಕು.ಆಗದವರು “ಏನಾದರೂ ಬೆರಸಿದ್ದರೆ”, ಎಂಬ ಭಯ ಕಾಡುತ್ತದೆ ಅವರಿಗೆ ಕೆಲವರು ಯಾವುದೇ ಭೀತಿಯಿಂದ ಆತ್ಮಹತ್ಯೆ ಕೂಡಾ ಮಾಡಿಕೊಳ್ಳುತ್ತಾರೆ.ಆದರೆ ಸಾಮಾನ್ಯ ಮನುಷ್ಯನಿಗೆ ಈ ತರದ ಭಯ, ಭೀತಿ ಇರುವದಿಲ್ಲ. ಎಲ್ಲಿ ಬೇಕೋ ಅಲ್ಲಿ ಹೋಗಬಹುದು, ಏನು ಬೇಕು ಅದನ್ನು ತಿನ್ನಬಹುದು.ನಮ್ಮ ಮನಸ್ಸಿಗೆ ಹೇಗೆ ಬೇಕೋ ಹಾಗೆ ಜೀವನ ಸಾಗಿಸಬಹುದು.ಹಣ ಇದ್ದಷ್ಟೂ ಇನ್ನೂ ಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುವುದು ಸಹಜ.ಆದರೆ ಹಣ ಇದ್ದಲ್ಲಿ ಸುಖವಾಗಿ ಇರಬಹುದು ಎನ್ನುವುದು ತಪ್ಪು.ನಮಗೆ ನೆಮ್ಮದಿ ಜೀವನ ಎಂದರೆ, ಇರಲು ಪುಟ್ಟ ಮನೆ, ತಂದೆ ತಾಯಿ, ಹೆಂಡತಿ, ಮಕ್ಕಳು, ಮಧ್ಯೆ ಮಧ್ಯೆ ಹೋಗಿ ಬರುವ ನೆಂಟರು, ಅತಿಯಾಗಿ ಪ್ರೀತಿಸುವ ಸ್ನೇಹಿತರು ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು.ಜೀವನ ನಡೆಸಲು ಹಣ ಖಂಡಿತ ಬೇಕೇ ಬೇಕು.ಆದರೆ ನಮ್ಮ ಹತ್ತಿರ ಎಷ್ಟು ಹಣ ಇದೆ ಅದರಲ್ಲಿ ಸುಖದಿಂದ ಬಾಳುವದನ್ನು ಸ್ವಲ್ಪ ಅರಿತುಕೊಂಡು ಜೀವನ ಸಾಗಿಸಬೇಕು.ಯಾಕೆಂದರೆ, ಆಸೆಗೆ ಮಿತಿ ಇಲ್ಲ.”ದೂರದ ಬೆಟ್ಟ ಕಣ್ಣಿಗೆ ಚೆಂದ” ಎನ್ನುವ ಹಾಗೆ ತುಂಬಾ ಆಡಂಬರದ ಜೀವನ ಸಾಗಿಸುವರಲ್ಲಿ ಸುಖ, ನೆಮ್ಮದಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ.ನಮ್ಮ ಪಾಲಿಗೆ ಏನು ದೇವರು ಕೊಟ್ಟಿದ್ದಾನೆ ಅದರಲ್ಲಿಯೇ ಸಂತೋಷ ಪಟ್ಟು, ಆರೋಗ್ಯಕರವಾ ಹಾಗೂ ನೆಮ್ಮದಿಯಿಂದ ಜೀವನ ನಡೆಸಲು ಪ್ರಯತ್ನಿಸಬೇಕು.
ಶ್ರೀದೇವಿ ಓಂಕಾರ್

Interested candidates visit shri mudhra academy Basaveshwara nagar





