ಏನಿದು ಪ್ರಕರಣ ಪ್ರತಿ ದಿನ ಒಂದಿಲ್ಲೊಂದು ಭೀಕರ ಸುದ್ದಿ ಕೇಳಿ ಮನಸ್ಸು ಭಯ ಗೊಳ್ಳುವುದು ಸಹಜ.ನಮ್ಮ ಸಮಾಜ ಎತ್ತ ಹೊರಟಿದೆ.ಇದಕ್ಕೆ ಕಾರಣ ಮೋಬೈಲ್ ಒಂದು ಕಡೆ ಆದರೆ ಅದರಲ್ಲಿ ಆಡುವ ಆಟಗಳು.ಇದು ಪಾಲಕರ ತಪ್ಪು ಖಂಡಿತ. ಪಾಲಕರು ಮಕ್ಕಳಿಗೆ ಮೋಬೈಲ್ ಕೊಟ್ಟು ನಿರಾಳವಾಗಿ ತಮ್ಮ ಪಾಡಿಗೆ ತಾವು ಇರುತ್ತಾರೆ.ತಂದೆ ಆದವರಿಗೆ ಆಫೀಸ್ ಕೆಲಸ ಇರುತ್ತದೆ.ಹಾಗೆ ಕೆಲವೊಂದು ಮನೆಗಳಲ್ಲಿ ತಾಯಿ ಕೂಡಾ ಕೆಲಸಕ್ಕೆ ಹೋಗುತ್ತಾರೆ.ಮನೆಗೆ ಬಂದು ಮಕ್ಕಳ ಜೊತೆಗೆ ಆಟ ಆಡಲು ಅವರಿಗೆ ವ್ಯೆವಧಾನ ಇರುವುದಿಲ್ಲ.ಹೀಗಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರೆ ಅವರ ಕೆಲಸ ಮುಗಿಯಿತು.ನಿರಾಳವಾಗಿ ಕುಳಿತು ಕೊಳ್ಳುತ್ತಾರೆ.ಇದು ಮಕ್ಕಳಿಗೆ ಮೋಬೈಲ್ ಆಟ ಆಡಲು ಸುಲಭವಾಗಿದೆ.ಅದು ಕೂಡಾ ಚಿಕ್ಕ ವಯಸ್ಸಿನಲ್ಲೇ ಮೋಬೈಲ್ ಕೊಡುತ್ತಾ ಹೋದರೆ,ಆ ಮಕ್ಕಳಿಗೆ ಬೇರೆ ಆಟದ ಬಗ್ಗೆ ಆಸಕ್ತಿ ಇರುವುದಿಲ್ಲ, ಮೋಬೈಲ್ ಒಂದು ಇದ್ದರೆ, ಅವರಿಗೆ ಏನೂ ಬೇಡ.ಇದರ ಪರಿಣಾಮ ಎಷ್ಟು ಘೋರ ಎಂದು ಯಾಕೆ ಪಾಲಕರು ತಿಳಿದುಕೊಳ್ಳುವದಿಲ್ಲ.ಮೋಬೈಲ್ ಆಟದಿಂದ ತಮ್ಮ ಪ್ರಾಣವನ್ನು ಕಳೆದುಕೊಂಡ ಸುದ್ದಿ ಟಿವಿಯಲ್ಲಿ ನೋಡುತ್ತಾ ಇದ್ದೇವೆ.ಇನ್ನು ಪ್ರತಿಯೊಬ್ಬರಿಗೂ ರೀಲ್ಸ್ ಮಾಡುವ ಹುಚ್ಚು ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಇದೆ.ದೊಡ್ಡವರೇ ಹೀಗೆ ಮಾಡುವುದರಿಂದ ಚಿಕ್ಕವರದು ಏನು ತಪ್ಪು.ಇವತ್ತು ಇನ್ನೊಂದು ಘೋರ ಸಮಾಚಾರ ಬಂದಿದೆ.ಏನೆಂದರೆ, ನೇಣು ಹಾಕಿಕೊಳ್ಳುವ ರೀಲ್ ಮಾಡಲು ಹೋಗಿ ಜೀವವನ್ನು ಕಳೆದುಕೊಂಡಿದ್ದಾರೆ.ಎಂಥಾ ಹುಚ್ಚು ಹಿಡಿದಿದೆ ಜನರಿಗೆ.ಇದೆಲ್ಲಾ ನೋಡಿದರೆ ಮಕ್ಕಳ ಭವಿಷ್ಯದ ಬಗ್ಗೆ ಭಯ ಆವರಿಸುತ್ತದೆ.ಇದನ್ನು ಕಡಿಮೆ ಮಾಡಲು ಯಾರಾದರೂ ಕಡಿವಾಣ ಹಾಕಲೇ ಬೇಕು.ಹಾಗೂ ಮಕ್ಕಳಿಗೆ ಮೋಬೈಲ್ ಕೊಡಲೇ ಬಾರದು.ತಂದೆ ತಾಯಿ ಸ್ವಲ್ಪ ಗಮನವಿಟ್ಟು ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕು.ಮಕ್ಕಳಿಗೆ ಬೇರೆ ಬೇರೆ ಆಟ ಆಡಿಸಬೇಕು, ಕಥೆ, ಹೇಳಬೇಕು, ಚಿತ್ರ ಬರೆಯಲು ಪ್ರೋತ್ಸಾಹಿಸಬೇಕು.ಅವರೊಂದಿಗೆ ಹಿರಿಯರು ಕುಳಿತುಕೊಂಡು ಅವರಿಗೆ ಉತ್ಸಾಹ ತುಂಬುಬೇಕು.ಮಕ್ಕಳನ್ನು ಮೋಬೈಲ್ ನಿಂದ ದೂರ ಇಟ್ಟರೆ ಮಾತ್ರ ಅವರ ಭವಿಷ್ಯ ಉತ್ತಮ ಆಗಬಹುದು ಆಯ್ಕೆ ನಿಮ್ಮದು.
ಶ್ರೀದೇವಿ ಓಂಕಾರ್
ಬೆಂಗಳೂರು 32





