ಬೆಂಗಳೂರು ನಗರದ ಕಲಾ ವಾತಾವರಣವನ್ನು ಮತ್ತೊಮ್ಮೆ ಕಂಗೊಳಿಸಿದ ಅದ್ದೂರಿ ಸಮಾರಂಭವು Reality Book of World Records ಹಾಗೂ Karnataka Youth Welfare Association ಸಂಯುಕ್ತ ಆಶ್ರಯದಲ್ಲಿ Symfony Art Space ನಲ್ಲಿ ಭವ್ಯವಾಗಿ ನೆರವೇರಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಮಂದಿ ಸಾಧಕರಿಗೆ ವಿಶ್ವದಾಖಲೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಸೇವಾ ಮನೋಭಾವದಿಂದ ಜನಮನ ಗೆದ್ದವರಿಗೆ “ಸೇವಾ ಯೋಧರತ್ನ” ಹಾಗೂ “ಪ್ರತಿಭಾ ರತ್ನ” ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಗಣೇಶ ಗೌಡ್ರು ಹಾಗೂ ಕುಮಾರಿ ರಚನಾ ಅವರಿಗೆ ವಿಶೇಷ ಸನ್ಮಾನ ನೀಡಿ, ಅವರ ಸಾಧನೆಗಳನ್ನು ಎಲ್ಲರ ಮುಂದೂ ಪ್ರಸ್ತಾಪಿಸಲಾಯಿತು. ಜೊತೆಗೆ “ಭಾರತ ಐಕಾನಿಕ್ ಅಟಲ್ ಬಿಹಾರಿ ವಾಜಪೇಯಿ” ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳಿಗೆ ಸಾಧಕರನ್ನು ನಾಮನಿರ್ದೇಶನ ಮಾಡಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ .
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿನಿಧಿಗಳಾದ ಡಾ. ಕರಾಟೆ ಎ.ಪಿ. ಶ್ರೀನಾಥ್ ಅವರು ಮಾತನಾಡಿ, “ಕಾರ್ಯಕ್ರಮವು ಚಿಕ್ಕದಾದರೂ ಚೊಕ್ಕದಾಗಿದೆ. ಸಾಧಕರಿಗೆ ನೀಡುವ ಪ್ರೋತ್ಸಾಹವೇ ನಮ್ಮ ಸಂಸ್ಥೆಯ ಉದ್ದೇಶ. ಪ್ರತಿಯೊಬ್ಬರೂ ಸಮಾಜಕ್ಕೆ ಕೊಡುಗೆ ನೀಡಬೇಕು” ಎಂದು ಹೇಳಿದರು.
ಈ ಸಮಾರಂಭದಲ್ಲಿ ಗೌರವಿಸಲ್ಪಟ್ಟ ಸಾಧಕರಲ್ಲಿ ಶ್ರೀಮತಿ ಪದ್ಮಾ ಕೆ.ಎಸ್.ಡಾ.ಓಂ ಸತೀಶ್, ಡಾ.ಸುನೀಲ್ ಕುಂಬಾರ್, ಶ್ರೀಮತಿ ಸುಶೀಲಾ ಗೌಡ, ಡಾ. ಲೇಖಾ ವಿಶ್ವನಾಥ್, ಶ್ರೀ ಕಾರ್ತಿಕ್ ರಾಮ್, ಮಾಯಾ ದೀಕ್ಷಿತ್, ಶ್ರೀಮತಿ ಹೈಮಯ್ಲಿಯಾ ಎಸ್, ತಿಪ್ಪಣ್ಣ ಗೌಡ ಬಿ.ಎಸ್., ಡಾ. ಶರಣಬಸಯ್ಯ ಎಸ್. ಹಿರೇಮಠ, ನಾಗೇಂದ್ರ ಬಾಬು ಎ.ಟಿ. ಹಾಗೂ ಎ. ಪ್ರಸನ್ನ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಾಧಕರ ಸಹಕಾರ, ಪ್ರೋತ್ಸಾಹ ಹಾಗೂ ಸಂಘಟಕರ ಸಮರ್ಪಣಾ ಮನೋಭಾವದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸಮಾಜ ಸೇವೆ, ಕಲೆ, ಶಿಕ್ಷಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವುದು ಈ ಸಮಾರಂಭದ ಮುಖ್ಯ ಉದ್ದೇಶವಾಗಿತ್ತು ಎಂದು ಸಂಸ್ಥೆಯ ಪ್ರತಿನಿಧಿಗಳು ಹೇಳಿದರು.






