ಮನುಷ್ಯನು ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬಹುದು.ಕಲಿಯಲು ಈ ಜಗತ್ತಿನಲ್ಲಿ ಬೇಕಾದಷ್ಟು ಇದೆ. ಮನಸ್ಸನ್ನು ಸಂತೋಷಗೊಳಿಸಲು, ಪ್ರಕೃತಿ ಸೌಂದರ್ಯ ಇದೆ.ಆಟ ಆಡಲು ಬೇಕಾದಷ್ಟು ಆಟಗಳು ಇವೆ.ಮನೆಯಲ್ಲಿ ಕುಳಿತು ಆಡುವ ಆಟ, ಹೊರಗೆ ಆಡುವ ಆಟ, ಇದೆಲ್ಲವನ್ನು ಬಿಟ್ಟು, ಮಾತಿಗೆ ಬಾರದ ರೀಲ್ ಏತಕ್ಕೆ ಉಪಯೋಗ.
ರೀಲ್ ರೀಲ್ ಎಲ್ಲಿ ನೋಡಿದರೂ ರೀಲ್.ಚಿಕ್ಕವರಿಲ್ಲಾ ದೊಡ್ಡವರಿಲ್ಲ ಎಲ್ಲಿ ನೋಡಿದರೂ ರೀಲ್.ಇದರಲ್ಲಿ ಕಲಿಯುವುದು ಏನು ಇದೆ ಗೊತ್ತಿಲ್ಲ.ಯಾವುದೂ ಅತಿ ಆಗಬಾರದು ಅಲ್ಲವೇ.ಇದರಿಂದ ಸಮಾಜಕ್ಕೆ ಏನೊಂದೂ ಉತ್ತಮ ಸಂದೇಶ ಇಲ್ಲ.ಕೆಲವೊಂದು ರೀಲ್ ಗಳು ಅಸಹ್ಯ ಹುಟ್ಟಿಸುತ್ತವೆ.ಒಬ್ಬರನ್ನು ನೋಡಿ ಇನ್ನೊಬ್ಬರು ಕಲಿಯುತ್ತಾರೆ. ಹೀಗೆ ಎಲ್ಲಿ ನೋಡಿದರೂ ರೀಲ್ ಕಥೆ. ಈ ರೀಲ್ ನಿಂದ ಹದಿಹರೆಯದವರು ಅಡ್ಡ ಹಾದಿ ಕೂಡಾ ಹಿಡಿಯುತ್ತಿದ್ದಾರೆ.ಚಿಕ್ಕ ಚಿಕ್ಕ ಮಕ್ಕಳು ಕೂಡಾ ಅದಕ್ಕೆ ಹೊರತಲ್ಲ. ಯಾರಾದರೂ ಟಿವಿ, ಮೋಬೈಲ್ ನೋಡಿದರೆ ಇನ್ನೂ ನೋಡಬೇಕು ಎಂದು ಅನಿಸುವ ಹಾಗೆ ಇರಬೇಕು.ಆದರೆ ಈಗಿನ ಕಾಲದಲ್ಲಿ ಯಾವುದೂ ನೋಡುವ ಹಾಗೆ ಇರುವುದಿಲ್ಲ.ಎಲ್ಲಿ ನೋಡಿದರೂ ಕೊಲೆ, ರೇಪ್ ಇದರಿಂದ ಹೊರಗೆ ಬಂದು ಏನಾದರೂ ಮನಕ್ಕೆ ಶಾಂತಿ ನೆಮ್ಮದಿ ಸಿಗುವುದನ್ನು ನೋಡೋಣ ಎಂದರೆ, ಎಲ್ಲಿಯೂ ಸಿಗುವುದಿಲ್ಲ.ರೀಲ್ ಮಾಡಲು ಹೋಗಿ ಎಷ್ಟೋ ಹುಡುಗರು ಕಂದಕದಿಂದ ಬಿದ್ದು ಜೀವ ಕಳೆದುಕೊಂಡಿದ್ದಾರೆ.ನೇಣು ಬಿಗಿಯುವ ರೀಲ್ ಮಾಡಲು ಹೋಗಿ ಜೀವ ಕಳೆದುಕೊಂಡ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.ಇನ್ನು ಒಬ್ಬರು ಸತ್ತವರ ಹಾಗೆ ರೀಲ್ ಮಾಡಲು ಹೋಗಿ ಜೀವವನ್ನು ಕಳೆದುಕೊಂಡಿದ್ದಾರೆ.ಇಂತಹದನ್ನು ಚಿಕ್ಕ ಮಕ್ಕಳು ನೋಡಿ ಅವರೂ ಸಹ ರೀಲ್ ಶುರು ಮಾಡಿದರೆ ಮುಂದೆ ಅವರ ಭವಿಷ್ಯದ ಗತಿ ಏನು.ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದು ಖಂಡಿತ.ರಿಲ್ ಮಾಡುವರು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಎನ್ನುವುದು ವಿಷಾದದ ಸಂಗತಿ ಎಂದರೆ ತಪ್ಪಾಗಲಾರದು.ಇದರಿಂದ ಬಿಡುಗಡೆ ಗೊಳಿಸಲು ಪಾಲಕರು ಗಮನ ಹರಿಸಬೇಕು.ರೀಲ್ನಂತ ಕೆಟ್ಟ ಚಟದಿಂದ ದೂರ ಇಡಬೇಕು. ವಯಸ್ಸಿನ ಗಮನವಿಲ್ಲದೇ ಹೇಗೆ ಬೇಕೋ ಹಾಗೆ ರೀಲ್ ಮಾಡುವರಿಗೆ ಏನು ಮಾಡಬೇಕು ಗೊತ್ತಿಲ್ಲ.ರೀಲ್ ಎಂಬ ಭೂತವನ್ನು ಬುಡಸಮೇತ ಕಿತ್ತು ಬೀಸಾಕಬೇಕು.ಮಕ್ಕಳಿಗೆ ಕೆಟ್ಟ ಚಟಗಳು ಬೇಗ ಅಂಟಿಕೊಳ್ಳುತ್ತವೆ.ಒಮ್ಮೆ ಅಂಟಿಕೊಂಡರೆ ಅದರಿಂದ ಹೊರಗೆ ಬರುವುದು ತುಂಬಾ ಕಷ್ಟಕರವಾಗಿದೆ.ರೀಲ್ ಹೆಚ್ಚಾಗಿ ದೊಡ್ಡವರೇ ಮಾಡುವುದು ಸುಳ್ಳೇನಲ್ಲ.ಹಿರಿಯರು ಅರಿಯಬೇಕು.ಹಿರಿಯರೇ ಹೀಗೆ ಮಾಡಿದರೆ ಇನ್ನು ಚಿಕ್ಕವರ ಗತಿ ಏನು ಎಂದು ಅರಿತುಕೊಳ್ಳಬೇಕು
ಶ್ರೀದೇವಿ ಓಂಕಾರ್
ಬೆಂಗಳೂರು 32





