ಗುಡಿಬಂಡೆ:ಫೆಬ್ರವರಿ09;ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಲಗೈ ಜಾತಿಗಳ ಒಕ್ಕೂಟದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಛಲವಾದಿ ಮಹಾಸಭಾ,ವಲಯ ಒಕ್ಕೂಟ,ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳನ್ನು ಒಂದೇ ಛತ್ರದಡಿ ಒಗ್ಗೂಡಿಸುವ ಉದ್ದೇಶದಿಂದ,ಶ್ರೀ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳ ತೀರ್ಮಾನದಂತೆ“ಬಲಗೈ ಜಾತಿಗಳ ಒಕ್ಕೂಟ”ಎಂಬ ನಾಮಕರಣ ಮಾಡಲಾಗಿದೆ ಎಂದು ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ವೆಂಕಟರಮಣಪ್ಪ ಅವರು ತಿಳಿಸಿದರು.ನಂತರ ಮಾತನಾಡಿದ ಏಡು ಕೊಂಡ್ಲು ಶ್ರೀನಿವಾಸ್ ಅವರು,ಸಂಘದ ಎಲ್ಲಾ ಮುಖಂಡರು ನಿಷ್ಠೆಯಿಂದ ಶ್ರಮಿಸಬೇಕಾಗಿದೆ.ಸಂಘದ ವ್ಯಾಪ್ತಿಯಲ್ಲಿ ಇರುವ ಬಡವರಿಗೆ ವಿದ್ಯಾಭ್ಯಾಸ,ಆರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳಿದ್ದಲ್ಲಿ,ಸಂಘದ ಟ್ರಸ್ಟ್ ಮೂಲಕ ಅಗತ್ಯ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಎಂ.ಸಿ.ಚಿಕ್ಕ ನರಸಿಂಹಪ್ಪ ಅವರು, ತಾಲೂಕಿನಲ್ಲಿನ ಎಲ್ಲಾ ಸಮಸ್ಯೆಗಳನ್ನು ಗುರುತಿಸಿ ಬಡವರಿಗೆ ನೆರವು ನೀಡಲಾಗುವುದು. ಸಂಘದ ಅಭಿವೃದ್ಧಿಗೆ ಸಂಪೂರ್ಣವಾಗಿ ಬದ್ಧನಾಗಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲೇ ಬಲಗೈ ಜಾತಿಗಳ ಒಕ್ಕೂಟದ ಪದಾಧಿಕಾರಿಗಳನ್ನು ಜಿಲ್ಲಾ ಸಮಿತಿಯ ಸಮ್ಮುಖದಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ತಾಲೂಕು ಅಧ್ಯಕ್ಷರಾಗಿ ಎಂ.ಸಿ. ಚಿಕ್ಕ ನರಸಿಂಹಪ್ಪ
ತಾಲೂಕು ಗೌರವಾಧ್ಯಕ್ಷರಾಗಿ ವೆಂಕಟನಾರಾಯಣಪ್ಪ,
ತಾಲೂಕು ಕಾರ್ಯಾಧ್ಯಕ್ಷರಾಗಿ ಓ. ಶ್ರೀನಿವಾಸ,
ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ (ಬೀಚಗಾನಹಳ್ಳಿ),
ಖಜಾಂಚಿಯಾಗಿ ಕೆ.ಗಂಗರಾಜು ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರಮೇಶ್ ಬಾಬು,ರಾಮಾಂಜಿನಪ್ಪ ಎನ್, ರಾಜಗೋಪಾಲ್, ಅಶ್ವತಪ್ಪ ಹಾಗೂ ಬಾವಣ್ಣ,
ಸಂಘಟನೆಯ ಕಾರ್ಯದರ್ಶಿಗಳಾಗಿ ಶ್ರೀನಿವಾಸ್, ರಾಜು,ಶಿವರಾಂ ಹಾಗೂ ಗಂಗರಾಜು ಅವರನ್ನು ಆಯ್ಕೆ ಮಾಡಲಾಯಿತು.






