ಬೆಂಗಳೂರು: ಮೂಲತಃ ಹಿಂದೂಪುರದವರಾದ ಸೌಂದರ್ಯವರ್ಧಕಿ ಶ್ರೀಮತಿ ಪದ್ಮ ಅವರು ತಮ್ಮ ಪರಿಶ್ರಮ ಮತ್ತು ಪ್ರತಿಭೆಯಿಂದ ಬೆಂಗಳೂರಿನಲ್ಲಿ ವಿಶಿಷ್ಟ ಹೆಸರು ಗಳಿಸಿದ್ದಾರೆ. ಬೆಂಗಳೂರಿಗೆ ಬರುವ ಮುನ್ನವೇ ಬ್ಯೂಟಿಷಿಯನ್ ಕೋರ್ಸ್ ಕಲಿತು ಬಂದ ಅವರು 2007–08ರಲ್ಲಿ ನಗರಕ್ಕೆ ಬಂದು ಸಂಜಯನಗರದಲ್ಲಿ ಪುಟ್ಟ ಬ್ಯೂಟಿ ಪಾರ್ಲರ್ ಆರಂಭಿಸಿದರು.
‘ಶೈನ್ ಬ್ಯೂಟಿ ಪಾರ್ಲರ್’ ಎಂಬ ಹೆಸರಿನಲ್ಲಿ ಆರಂಭವಾದ ಈ ಪಾರ್ಲರ್ ಇಂದು ಅನೇಕ ಗ್ರಾಹಕರ ವಿಶ್ವಾಸ ಮತ್ತು ಮೆಚ್ಚುಗೆ ಗಳಿಸಿದೆ. ಸೌಂದರ್ಯವರ್ಧಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಪದ್ಮ ಅವರು ತಮ್ಮ ಕೈಚಳಕದಿಂದ ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ರೀತಿಯ ಸೌಂದರ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ.

ಈ ಪಾರ್ಲರ್ನಲ್ಲಿ ಐಬ್ರೋ, ಫೇಶಿಯಲ್, ಹೇರ್ ಕಟಿಂಗ್, ವಿವಿಧ ರೀತಿಯ ವ್ಯಾಕ್ಸ್ ಸೇವೆಗಳು, ನೈಲ್ ಆರ್ಟ್, ಐಬ್ರೋ ಮೈಕ್ರೋಬ್ಲೇಡಿಂಗ್ ಸೇರಿದಂತೆ ಹಲವಾರು ಸೌಂದರ್ಯ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಿವೆ. ವಿಶೇಷವಾಗಿ ಮದುವೆಯ ವಧುಗಳಿಗೆ ಆಕರ್ಷಕ ಮೇಕಪ್ ಹಾಗೂ ಅಲಂಕಾರ ಸೇವೆಯನ್ನು ಕೂಡ ನೀಡಲಾಗುತ್ತದೆ.
ಇದಕ್ಕೆ ಜೊತೆಯಾಗಿ ‘ಸ್ತ್ರೀ ವಸ್ತ್ರ ಕ್ರಿಯೇಷನ್ಸ್’ ಎಂಬ ಬಟಿಕ್ ಅನ್ನು ಕೂಡ ಪದ್ಮ ಅವರು ನಡೆಸುತ್ತಿದ್ದಾರೆ. ಇಲ್ಲಿ ಚೂಡಿದಾರ್, ಬ್ಲೌಸ್, ಲಂಗ ದಾವಣಿ ಸೇರಿದಂತೆ ಹಲವು ಬಗೆಯ ಮಹಿಳಾ ವಸ್ತ್ರ ವಿನ್ಯಾಸಗಳನ್ನು ತಯಾರಿಸಲಾಗುತ್ತದೆ. ಗ್ರಾಹಕರ ಇಚ್ಛೆ ಹಾಗೂ ಫ್ಯಾಷನ್ಗೆ ಅನುಗುಣವಾಗಿ ಹೊಸ ವಿನ್ಯಾಸದ ಉಡುಪುಗಳನ್ನು ಸಿದ್ಧಪಡಿಸುವಲ್ಲಿ ಅವರು ಪರಿಣತಿ ಹೊಂದಿದ್ದಾರೆ.

ಪದ್ಮ ಅವರ ವಿಶೇಷತೆ ಎಂದರೆ ಗ್ರಾಹಕರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಅಗತ್ಯವನ್ನು ಅರ್ಥಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ನೀಡುವುದು. ಅವರ ಈ ಪ್ರಾಮಾಣಿಕ ಸೇವೆ ಹಾಗೂ ಪರಿಶ್ರಮದಿಂದಲೇ ‘ಶೈನ್ ಬ್ಯೂಟಿ ಪಾರ್ಲರ್’ ಇಂದು ಗ್ರಾಹಕರ ವಿಶ್ವಾಸ ಗಳಿಸಿದೆ.
ಗಂಡ ಮಕ್ಕಳ ಸಹಕಾರದೊಂದಿಗೆ ಪದ್ಮ ಅವರು ಸೌಂದರ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದು, ‘ಶೈನ್’ ಎಂಬ ಹೆಸರಿಗೆ ತಕ್ಕಂತೆ ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಕಂಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ನೀವು ಒಮ್ಮೆ ಭೇಟಿ ನೀಡಿದರೆ ‘ಶೈನ್ ಬ್ಯೂಟಿ ಪಾರ್ಲರ್’ ನ ಸೇವೆಯ ವಿಶೇಷತೆಯನ್ನು ಅನುಭವಿಸಬಹುದು.
