ಗುಡಿಬಂಡೆ ಫೆ4 ರಂದು ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಂಬಾಲಹಳ್ಳಿ ಚಿನ್ನಪ್ಪನಹಳ್ಳಿ ಯರ ಲಕ್ಕೇನಹಳ್ಳಿ ಗ್ರಾಮಗಳ ಭೂ ರಹಿತ ಕುಟುಂಬಗಳು ನಮೂನೆ 50.53.57 ಅರ್ಜಿಗಳು ತಿರುಮಣಿ ಗ್ರಾಮದ ಸರ್ವೆ ನಂಬರ್ 36 ರಲ್ಲಿ ಹಾಕಿಕೊಂಡು ಅನುಭವದಲ್ಲಿದ್ದು ಬೆಳೆ ಬೆಳೆಯುತ್ತಾ ಇರುವಂತಹ ಬಡ ಕುಟುಂಬಗಳಿಗೆ ಪಕ್ಕದಲ್ಲಿ ಜಲ್ಲಿ ಕ್ರಷರ್ ಗೆ ಮಂಜೂರಾತಿ ನೀಡಿದ್ದು ಅಕ್ಕ ಪಕ್ಕದ ಜಮೀನುಗಳಿಗೆ ಮತ್ತು ಜಾನುವಾರುಗಳಿಗೆ ಹಾಗೂ ಕಾಡು ಪ್ರಾಣಿಗಳಿಗೆ ತೊಂದರೆ ಮಾಡಲು ಹೊರಟಿರುವ ಅಧಿಕಾರಿಗಳು ಕೂಡಲೇ ಮಂಜೂರಾತಿಯನ್ನು ವಜಗೊಳಿಸಿ ಅನುಭವದಲ್ಲಿ ಇರುವಂತಹ ಭೂ ರಹಿತ ಕುಟುಂಬಗಳಿಗೆ ಜಾನುವಾರುಗಳಿಗೆ ಅನುಕೂಲವಾಗುವಂತೆ ಮಾಡಲು ಒತ್ತಾಯಿಸಿ ತಹಸಿಲ್ದಾರರವರೆಗೆ ಮನವಿ ಪತ್ರ ಸಲ್ಲಿಸಿದರು ಇದನ್ನು ನಿರಾಕರಿಸಿದ್ದಲ್ಲಿ ಜಲ್ಲಿ ಕ್ರಷರ್ ಮಾಲೀಕರನ್ನು ಸ್ಥಳಕ್ಕೆ ಆಗಮಿಸಿದರೆ ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆ ಇಲ್ಲ ಇದರ ವಿರುದ್ಧ ಉಗ್ರ ಹೋರಾಟಕ್ಕೂ ಶತಸಿದ್ಧವೆಂದು ಗ್ರಾಮಸ್ಥರು ತಿಳಿಸಿದರು ಇದೇ ಸಂದರ್ಭದಲ್ಲಿ ತಿರುಮಣಿ ಗ್ರಾಮದ ಮುಖಂಡರಾದ ಕೃಷ್ಣಾರೆಡ್ಡಿ ರಾಮಾಂಜನಪ್ಪ ವೆಂಕಟೇಶ್ ಶ್ರೀನಿವಾಸ್ ಹರೀಶ ಮಂಜುನಾಥ್ ಇನ್ನು ಇತರೆ ಮುಖಂಡರು ಹಾಜರಿದ್ದರು.






