ADVERTISEMENT
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
Karunada Nidhi
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
No Result
View All Result
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
No Result
View All Result
Karunada Nidhi
No Result
View All Result
ADVERTISEMENT
ADVERTISEMENT
Home ಲೈಫ್ ಸ್ಟೈಲ್

ಗೆಲುವು…….

Karunada Nidhi by Karunada Nidhi
February 2, 2026
in ಲೈಫ್ ಸ್ಟೈಲ್
Reading Time: 1 min read
116 2
0
97
SHARES
346
VIEWS
Share on FacebookShare on Twitter
ADVERTISEMENT
ADVERTISEMENT
ADVERTISEMENT
ADVERTISEMENT

ಹೌದು ನಾನು ತುಂಬಾ ಸುಂದರಿ,ಆದರೂ ಯಾಕೆ ನನಗೆ ಮೂವತ್ತೆಂಟು ಆದರೂ ಹುಡುಗ ಸಿಗಲಿಲ್ಲ.ಅಮ್ಮಾ ಅಪ್ಪ ನನಗಾಗಿ ಎಷ್ಟು ಚಿಂತೆ ಮಾಡುತ್ತಿದ್ದಾರೆ.ಯಾವತ್ತೋ ಕೆಲಸದ ಮೇಲೆ ದೆಹಲಿಗೆ ಹೋಗುವ ಪ್ರಸಂಗ ಬಂದಿತ್ತು.ವಿಮಾನದಲ್ಲಿ ನನ್ನ ಪಕ್ಕದಲ್ಲಿ ಕುಳಿತವನು, ಹೇಗೋ ಮಾತಾಡಲು ಶುರು ಮಾಡಿದ.ಬೆಂಗಳೂರಿನಿಂದ ದೆಹಲಿ ಎರಡೂವರೆ ಗಂಟೆ ಪ್ರಯಾಣ.ಅವನು ಜೊತೆಗೆ ಇದ್ದುದರಿಂದ ಸಮಯ ಹೋದದ್ದೇ ಗೊತ್ತಾಗಲಿಲ್ಲ.ಇಬ್ಬರ ಹೆಸರು,ಎಲ್ಲಿ ಕೆಲಸ ಮಾಡುವುದು,ಎಲ್ಲಾ ಮಾತು ಆದಮೇಲೆ, ಫೋನ್ ನಂಬರ್ ತೆಗೆದುಕೊಂಡದ್ದೂ ಆಯ್ತು.ಸರಿ ಬಾಯ್ ಹೇಳಿ ಇಬ್ಬರೂ ಇಳಿದು,ನಮ್ಮ ನಮ್ಮ ಹೋಟೆಲ್ ರೂಮ್ ಗೆ ಹೊರಟು
ಹೋದೆವು.ಆಮೇಲೆ ನಮ್ಮ ನಮ್ಮ ಕೆಲಸದಲ್ಲಿ ತೊಡಗಿ ಕೊನೆಗೆ ಇಬ್ಬರೂ ಬೆಂಗಳೂರು ತಲುಪಿದ್ದೂ ಆಯ್ತು ಮರೆತೇ ಹೋಗಿತ್ತು ನಮ್ಮಿಬ್ಬರ ಭೇಟಿ. ಒಂದು ದಿನ ಇದ್ದಕ್ಕಿದ್ದಂತೆ ಫೋನ್ ಬಂತು” ಹೆಲೋ ನಾನು ರಿ ಫೈಟ್ ಫ್ರೆಂಡ್ ನವೀನ್” ಓಹೋ ನೆನಪಾಯಿತು ತುಂಬಾ ಸಂತೋಷವಾಯಿತು” ಹೆಲೋ ನವೀನ್ ತುಂಬಾ ಖುಷಿಯಾಯಿತು ನಿಮ್ಮ ಧ್ವನಿ ಕೇಳಿ, ಹೇಗೆ ಇದ್ದೀರಾ ಕೆಲಸದ ಒತ್ತಡ ತುಂಬಾ ಇತ್ತು ಮರೆತು ಹೋಗಿದ್ದೆ” ” ಏನಿಲ್ಲಾ ಸವಿತಾ ಯಾಕೋ ಇವತ್ತು ನಿಮ್ಮ ನೆನಪು ತುಂಬಾ ಬಂತು ನೋಡೋಣ ಅಂತ ಫೋನ್ ಮಾಡಿದೆ.ಬಿಡುವು ಆಗಿದ್ದರೆ ಬರ್ತೀರಾ ಹೊರಗೆ ನಾನು ನಿಮ್ಮ ಆಫೀಸ್ ಹೊರಗಡೆ ನಿಂತಿದ್ದೇನೆ ” ಯಾಕೋ ಸವಿತಾಗೆ ನವೀನ್ ಧ್ವನಿ ಕೇಳಿ ಏನೋ ಒಂಥರಾ ಸಮಾಧಾನ ಆಯ್ತು ” ಬಂದೆ, ನವೀನ್ ” ಹೊರಟಳು.ಇವತ್ತು ತುಂಬಾ ತಡ ಆಗಿದ್ದರಿಂದ ಊಟ ತಂದಿರಲಿಲ್ಲ ಹೇಗೋ ನವೀನ್ ಜೊತೆಗೆ ಊಟ ಮಾಡಿದರಾಯಿತು ಎಂದು ಹೊರಟಳು.ಇಬ್ಬರೂ ಸೇರಿ ಅಲ್ಲೇ ಪಕ್ಕದಲ್ಲಿ ಇದ್ದ ಹೋಟೇಲಿನಲ್ಲಿ ಹೋಗಿ ಕುಳಿತು ಊಟಕ್ಕೆ ಆರ್ಡರ್ ಮಾಡಿದರು.ಆಫೀಸ್ ವಿಷಯ, ಮನೆ ವಿಷಯ,ಅದೂ ಇದೂ ಅಂತ ಮಾತು ಶುರು ಆಯ್ತು ಅಷ್ಟರಲ್ಲಿ ಊಟ ಬಂತು.ಇದೇಲ್ಲರ ಮಾತಿನಲ್ಲಿ ನವೀನ್ ಗೆ ಮದುವೆ ಆಗಿಲ್ಲ ಅಂತ ತಿಳಿದು ಬಂತು ಯಾಕೆ ಮದುವೆ ಮಾಡಿಕೊಂಡಿಲ್ಲಾ ಅಂತ ಕೇಳೋಕೆ ಮನಸ್ಸು ಬರಲಿಲ್ಲ ನಮಗೆ ಯಾಕೆ ಬೇಕು ಇಲ್ಲದ್ದು ಉಸಾಬರಿ.ಅವನು ನನ್ನ ಮದುವೆ ವಿಚಾರ ಕೇಳಿದರೇ, ಏನು ಹೇಳಬೇಕು.ಊಟ ಮುಗಿಸಿ,ಇಬ್ಬರೂ ಹೊರಟರು,ಹೋಗುವಾಗ,” ಮತ್ತೆ ಬಿಡುವು ಆದಾಗ
ಭೇಟಿ ಮಾಡೋಣ” ಸರಿ ಫೋನ್ ಮಾಡ್ತಾ ಇರ್ತೀನಿ”ಎಂದು ಹೇಳಿ ನವೀನ್ ಬೈಕ್ ಏರಿ ಹೊರಟನು.ಸವಿತಾ ಆಫಿಸ್ ಕಡೆಗೆ
ಹೊರಟಳು.ಯಾಕೊ ಸವಿತಾಗೆ ನವೀನ್ ಕಂಡರೆ ಏನೋ ಸಂತೋಷ ಆಗುತ್ತದೆ.ಅವನ ಜೊತೆಗೆ ಸುತ್ತಾಡಬೇಕು,ಅವನ ಮಾತು ಕೇಳ್ತಾ ಇರಬೇಕು, ಏನೇನೋ ಕನಸು.ಯಾಕೆ ಹೀಗೆ ನವೀನ್ ಮೇಲೆ ಪ್ರೀತಿ ಆಗ್ತಾ ಇದೆಯಾ?. ಛೇ ಹಾಗೇನಿಲ್ಲ ಅವನು ಬಹುಶಃ ನನ್ನಕಿಂತ ಚಿಕ್ಕವನು ಇರಬಹುದು.ಹಾಗೆಲ್ಲಾ ಆಲೋಚನೆ ಮಾಡುವುದು ತಪ್ಪು.ಅವನು ನನ್ನನ್ನು ಸ್ನೇಹಿತೆ ಎಂದು ಭಾವಿಸಿರಬಹುದು.ಹೋಗಲಿ ಸುಮ್ಮ ಸುಮ್ಮನೆ ಯಾಕೆ ತಲೆ ಕೆಡಿಸಿಕೊಳ್ಳಬೇಕು. ಕೆಲಸ ಮುಗಿಸಿ ಮನೆಗೆ ಹೊರಟಳು.ಅಮ್ಮನ ಧ್ವನಿ ಕೇಳಿ,”ಏನು ಅಮ್ಮಾ ಕರೆದೆಯಾ” ” ಹೌದು ಸವಿತಾ,ಇವತ್ತು ಒಬ್ಬರು ಫೋನ್ ಮಾಡಿದ್ದರು,ಹುಡುಗ ಒಳ್ಳೇ ಕೆಲಸದಲ್ಲಿ ಇದ್ದಾನೆ ಇಲ್ಲೇ ಬೆಂಗಳೂರಿನಲ್ಲೇ ಇರುತ್ತಾನೆ.ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇದ್ದಾರೆ.ಬೇರೆ ಯಾರೂ ಇಲ್ಲವಂತೆ ಫೋನ್ ಮಾಡಿ ನಿನ್ನ ಜಾತಕ, ಫೋಟೋ ಕಳಿಸಲಾ?” ಇಷ್ಟು ದಿನ ಹುಡುಗನ ಕಡೆಯವರದು ಫೋನ್ ಬಂದಿದೆ ಎಂದರೆ ತುಂಬಾ ಖುಷಿ ಆಗ್ತಾ ಇತ್ತು.ಆದರೆ, ಇವತ್ತು ಯಾಕೋ ಅಷ್ಟೊಂದು ಖುಷಿ ಅನಿಸಲಿಲ್ಲ. ಯಾಕೆ ಇರಬಹುದು ನವೀನ್..?ಮತ್ತೇ ಅಮ್ಮಾ ಕರೆದಳು, ಏನು ಹೇಳಲಿ ಅಮ್ಮನಿಗೆ ಸರಿ ಅಮ್ಮಾ ಕಳುಹಿಸು ಎಂದು ಹೇಳಿ ಹೊರಟಳು.ಹೀಗೆ ಎಷ್ಟೋ ಫೋನ್ ಬರುತ್ತವೆ ಆಮೇಲೆ ಏನೂ ಹೇಳುವುದಿಲ್ಲ ಇದೂ ಹೀಗೆ ಆಗಬಹುದು, ನೋಡೋಣ ಎಂದು ಊಟಕ್ಕೆ ಅಣಿ ಮಾಡಲು ಅಡಿಗೆ ಮನೆ ಕಡೆಗೆ
ಹೊರಟಳು.
ಸವಿತಾ ಗೆ ಯಾಕೋ ಜೀವನ ಬೇಸರ ಬರ್ತಾ ಇತ್ತು ಏನು ನನ್ನ ಜೀವನ ವಯಸ್ಸಾಯಿತು ಮದುವೆ ಇಲ್ಲಾ,ಗೆಳತಿಯರು ಮದುವೆ ಮಾಡಿಕೊಂಡು ದೊಡ್ಡ ದೊಡ್ಡ ಮಕ್ಕಳಾಗಿದ್ದಾರೆ ಅವರು ಈಗ ಯಾರೂ ನನ್ನ ಜೊತೆ ಬೆರೆಯುವುದಿಲ್ಲ,ಅವರ ಮಾತೇ ಬೇರೆ,ಗಂಡ ಮಕ್ಕಳು,ಅವರ ಜೊತೆ ಬೆರೆಯಲು ನನಗೂ ಸಾಧ್ಯ ಆಗಲಿಲ್ಲ.ಇನ್ನೂ ಎಷ್ಟು ದಿನ ಹೀಗೆ ಯಾಕೋ ಕಣ್ಣೀರು
ಹರಿಯಿತು . ಹತಾಶೆಯಿಂದ ಬಂದಿರಬಹುದು.ನಾನು ಜೀವನದಲ್ಲಿ ಸೋತು ಹೋದೆ ಅನಿಸುತ್ತದೆ ಎಲ್ಲಿ ತಪ್ಪಿದೆ ತಿಳಿಯಲಿಲ್ಲ.ಯಾಕೋ ಇತ್ತೀಚೆಗೆ ನವೀನ್ ತುಂಬಾ ಹತ್ತಿರವಾಗುತ್ತಿದ್ದಾನೆ ಅಂತ ಅನಿಸುತ್ತದೆ.ಅದು ಪ್ರೀತಿ ಇರಬಹುದೇ ಈ ವಯಸ್ಸಿನಲ್ಲಿ ಎಂಥಾ ಪ್ರೀತಿ ಯಾಕೋ ಬರೀ ಗೊಂದಲ, ಫೋನ್ ಸದ್ದು ಕೇಳಿ
ಎಚ್ಚತ್ತಳು.”ಹೆಲೋ” ಓಂ ಕಡೆಯಿಂದ ನವೀನ್ ಧ್ವನಿ ಕೇಳಿ,ಏನೋ ಒಂಥರಾ ಸಂತಸವಾಯಿತು. ” ಹೆಲೋ ನವೀನ್ ಹೇಗೆ ಇದ್ದೀರಾ ಏನು ನೆನಪು ಮಾಡಿಕೊಂಡು ಫೋನ್ ಮಾಡಿದ್ದು?”ಸವಿತಾ, ನಾನು ಆಫೀಸ್ ಕೆಲಸದ ಮೇಲೆ ಗುಜರಾತ್
ಹೊರಟಿದ್ದೇನೆ.ಬರೋಕೆ ಬಹುಶಃ ಒಂದು ತಿಂಗಳು ಆಗುತ್ತದೆ.ನಿಮಗೆ ಸಮಯ ಸಿಕ್ಕಾಗ ನಮ್ಮ ಮನೆ ಕಡೆಗೆ ಹೋಗಿ, ಅಮ್ಮಾ ಅಪ್ಪನ ವಿಚಾರಿಸಿಕೊಂಡು ಬರ್ತೀರಾ ” ” ಸರಿ ನವೀನ್ ಚಿಂತೆ ಬಿಟ್ಟು ಹೋಗಿ ಬನ್ನಿ ನಾನು ಹೋಗಿ ಬರ್ತಾ ಇರುತ್ತೇನೆ ” ಇನ್ನೊಂದು ವಿಷಯ ಸವಿತಾ ನಿಮ್ಮ ಎದುರು ಹೇಳಲು ಧೈರ್ಯ ಬರ್ತಾ ಇಲ್ಲಾ ತಪ್ಪು ತಿಳಿಯಬೇಡಿ ನಿಮ್ಮನ್ನು ತುಂಬಾ ಇಷ್ಟ ಪಡುತ್ತೇನೆ, ನಿಮಗೆ ಇಷ್ಟ ಇಲ್ಲಾಂದ್ರೆ ಹೇಳಿ ಪರವಾಗಿಲ್ಲ ನಾನು ಬೇಸರ ಮಾಡಿಕೊಳ್ಳುವುದಿಲ್ಲ ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ, ನಿಮಗೆ ಬೇಡಾ ಅಂದರೆ ಬೇಡ ನನ್ನ ನಿಮ್ಮ ಸ್ನೇಹ ಹೀಗೆ ಇರುತ್ತದೆ, ಒಂದು ತಿಂಗಳು ಬಿಟ್ಟು ಭೇಟಿ ಮಾಡುವೆ.ನಿಧಾನಕ್ಕೆ ಆಲೋಚನೆ ಮಾಡಿ ತಿಳಿಸಿ”ಎಂದು ಫೋನ್ ಕಟ್ ಮಾಡಿದನು.ಸವಿತಾಗೆ ಸ್ವರ್ಗ ಮೂರೇ ಗೇಣು, ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಅದೇ ಇನ್ನು ನನ್ನ ಅಮ್ಮ ಅಪ್ಪನಿಗೆ ನನ್ನ ಚಿಂತೆ ಬಿಟ್ಟು ಹೋಯಿತು, ಸವಿತಾಳಿಗೆ ನಿರಾಳ ಎನಿಸಿತು.
ಸವಿತಾ ಪ್ರತಿ ದಿನ ನವೀನ್ ಮನೆಗೆ ಹೋಗಿ ಅವನ ತಂದೆ ತಾಯಿಯ ಆರೋಗ್ಯ ವಿಚಾರಿಸಿ, ಏನಾದರೂ ಮನೆ ಸಾಮಾನು ಬೇಕಾದರೆ ತಂದು ಕೊಡುತ್ತಿದ್ದಳು, ಜೀವನದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು.ನವೀನ್ ಬಂದರೆ ಸಾಕು ಮನೆಯಲ್ಲಿ ಎಲ್ಲಾ ವಿಷಯ ತಿಳಿಸಿ ಮದುವೆ ಮಾಡಿಕೊಂಡು ಆರಾಮಾಗಿ ಇರಬಹುದು, ಸಾಧ್ಯವಾದರೆ ನವೀನ್ ಮನೆ ಪಕ್ಕ ಒಂದು ಬಾಡಿಗೆ ಮನೆ ತೆಗೆದುಕೊಂಡು ಅಮ್ಮ ಅಪ್ಪನಿಗೆ ಅಲ್ಲೇ ಇರಿಸಬೇಕು.ಏನೇನೊ ಆಲೋಚನೆಗಳು ಬಂದು ಮನ ರೋಮಾಂಚನಗೊಳ್ಳುತ್ತಿತ್ತು.ಏನೇನೊ ಕನಸುಗಳು.ಹೆಚ್ಚು ಕಡಿಮೆ ಪ್ರತಿ ದಿನ ನವೀನ್ ಫೋನ್ ಬರ್ತಾ ಇತ್ತು ಹರಟೆ, ನಗು, ಹುಸಿ ಕೋಪ, ಎಂಥಾ ಸುಂದರ ಜೀವನ.ಹೋಗಲಿ ವಯಸ್ಸಾದರೂ ಗುಣವಂತ ಹುಡುಗನೇ ಸಿಕ್ಕಿದ್ದು ಅವಳ ಅದೃಷ್ಟಕ್ಕೆ ದೇವರನ್ನು ಹಾಡಿ ಹೊಗಳಿದ್ದಳು.
ಇನ್ನೇನು ನಾಡಿದ್ದು ನವೀನ್ ಬರುತ್ತಾನೆ ಅವನನ್ನು ಹೇಗೆ ನೋಡುವುದು ನಾಚಿಕೆ ಆಗಬಹುದು.ಯಾಕೋ ಫೋನ್ ಬಂದಿಲ್ಲಾ.ಅವರ ಮನೆಗೂ ಫೋನ್ ಮಾಡಿಲ್ಲವಂತೆ, ಬಹುಶಃ ಅಲ್ಲಿಂದ ಹೊರಡುವ ರಭಸದಲ್ಲಿ ಪ್ಯಾಕಿಂಗ್, ಆಫೀಸ್ ಕೆಲಸ ಇರಬಹುದು.ಹೇಗೊ ಬಂದೇ ಬರುತ್ತಾನೆ.ನವೀನ್ ಬರುವ ದಿನ ಬಂದೇ ಬಿಟ್ಟಿತು.ಸಾಯಂಕಾಲ ಆರು ಘಂಟೆಗೆ ಬರ್ತೀನಿ ಅಂತ ಹೇಳಿದ್ದಾ ಇನ್ನೇನು ಸಮಯ ಆಗ್ತಾ ಇದೆ.ಆಫೀಸ್ನಿಂದ ಸೀದಾ ಅಲ್ಲಿಗೆ ಹೋಗಿ ನವೀನ್ ಭೇಟಿ ಮಾಡಿ ಮನೆಗೆ ಹೋದರಾಯಿತು.ಆಫೀಸ್ ಕೆಲಸ ಮುಗಿಸಿ ಮುಖವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡು, ಬ್ಯಾಗ್ ಹೆಗಲಿಗೆ ಏರಿಸಿಕೊಂಡು ಹೊರಟಳು.ಅವರ ಮನೆ ತಲುಪಿದಾಗ ಆರೂವರೆ ನವೀನ್ ಇನ್ನೂ ಬಂದಿರಲಿಲ್ಲ.ಯಾಕೆ ತಡ ಆಗಿರಬಹುದು., ಫೋನ್ ಏನಾದರೂ ಬಂದಿತ್ತಾ ನವೀನ್ ಅವರಿಂದ ಇಲ್ಲಾ ಸವಿತಾ ಎರಡು ದಿನ ಆಯಿತು ಫೋನ್ ಮಾಡಿಲ್ಲಾ. ಸವಿತಾ ತಾನೇ ಫೋನ್ ಮಾಡಿದಳು. ಆ ಕಡೆಯಿಂದ ಏನೂ ಉತ್ತರವಿಲ್ಲ, ಯಾಕೋ ಸವಿತಾಳಿಗೆ ಭಯ ಶುರುವಾಯಿತು ಯಾಕೆ ಏನಾಯ್ತು ಎರಡು ದಿನಗಳಿಂದ ಫೋನ್ ಇಲ್ಲಾ, ಇವತ್ತು ಫೋನ್ ಹೋಗ್ತಾ ಇಲ್ಲಾ, ವಯಸ್ಸಾದ ತಂದೆ ತಾಯಿಗೆ ಏನು ಹೇಳಬೇಕು.ಮತ್ತೇ ಮತ್ತೇ ಫೋನ್ ಮಾಡಿದಳು . ಊಹೂಂ ಇಲ್ಲಾ, ಯಾಕೆ ದೇವರು ಹೀಗೆ ನನ್ನನ್ನು
ಪರೀಕ್ಷೆ ಮಾಡುತ್ತಾನೆ,ನನ್ನ ಸುಖ ದೇವರು ಯಾಕೆ ಕಸಿದುಕೊಳ್ಳುತ್ತಾನೆ.ಏನೂ ತೋಚಲಿಲ್ಲ.ಯಾರಿಗೆ ಕೇಳಲಿ, ಅಷ್ಟರಲ್ಲಿ ನವೀನ ತಂದೆ” ಯಾಕಮ್ಮ ಏನಾದರೂ ವಿಷಯ ತೀಳಿತಾ “ಇಲ್ಲಾ ಎಂದು ಹತಾಶೆಯಿಂದ ಕಿತ್ತು ಅಲ್ಲಾಡಿಸಿದಳು.ಯಾಕೋ ಕಣ್ಣೀರು ನಿಲ್ಲದೇ ಹೋಗ್ತಾ ಇತ್ತು ಅವರಿಬ್ಬರಿಗೂ ಕಾಣಬಾರದು ಎಂದು.ಮುಖ ತಿರುಗಿಸಿ
ಒರೆಸಿಕೊಂಡು “ಅಂಕಲ್ ನಿಮ್ಮ ಹತ್ತಿರ ಅವರ ಆಫೀಸ್ ನಂಬರ್ ಇದೆಯೇ, ಅಥವಾ ಅವರ ಸ್ನೇಹಿತರ ನಂಬರ್ ಇದೆಯೇ’ ಇರು ಸವಿತಾ ನೋಡ್ತೀನಿ ಎಂದು ಎಲ್ಲಾ ಕಡೆ ಹುಡುಕಿ, ಒಂದು ನಂಬರ್ ಕೊಟ್ಟು, ಇದಕ್ಕೆ ಫೋನ್ ಮಾಡು ನೋಡೋಣ, ಎಂದರು ಅವರೂ ಸ್ವಲ್ಪ ಗಾಬರಿ ಪಟ್ಟಿದ್ದರು.ಸರಿ ಭಯ ಪಟ್ಟರೆ ಆಗುವುದನ್ನು ತಡೆಯಲು ಸಾಧ್ಯವಿಲ್ಲ.ಸರಿತಾಗೂ ಒಳಗೊಳಗೇ ಭಯ ಆವರಿಸಿಕೊಂಡಿತ್ತು.ಆದರೆ ವಯಸ್ಸಾದವರ ಮುಂದೆ ತೊರಿಸಿ ಕೊಳ್ಳಲಿಲ್ಲ.ಸವಿತಾ ತಡ ಮಾಡದೆ ಆ ನಂಬರ್ ಗೆ ಫೋನ್ ಮಾಡಿದಳು.ಆ ಕಡೆಯಿಂದ ‘ಹೆಲೋ ಯಾರು ” “ನಾನು ಸವಿತಾ ಅಂತ ನವೀನ್ ಅವರು ಇವತ್ತು ಬರಬೇಕಾಗಿತ್ತು ಇನ್ನೂ ಬಂದಿಲ್ಲಾ ಅವರ ಫೋನ್ ಕನೆಕ್ಟ್ ಆಗ್ತಾ ಇಲ್ಲ ನಿಮಗೆ ಏನಾದರೂ ಗೊತ್ತಾ? ಆ ಕಡೆಯಿಂದ ಇಲ್ಲಾ ಇನ್ನೂ ಬಂದಿಲ್ಲವೇ ನನಗೂ ಎರಡು ದಿನದಿಂದ ಫೋನ್ ಮಾಡಿಲ್ಲ ಅವನು ಇರಿ ನನಗೆ ಇನ್ನೊಬ್ಬರ ಪರಿಚಯ ಇದೆ ಅವರಿಗೆ ಫೋನ್ ಮಾಡಿ ವಿಚಾರಿಸುತ್ತೆನೆ”ಆ ಕಡೆಯಿಂದ ಫೋನ್ ಕಟ್ ಆಯ್ತು.ಎಲ್ಲರೂ ಗಾಬರಿಯಿಂದ ಊಟ ಮಾಡದೇ ಕುಳಿತಿದ್ದರು.ಊಟ ಹೇಗೆ ಇಳಿಯುತ್ತದೆ ಗಂಟಲಿನಲ್ಲಿ.ನವೀನ್ ಅಮ್ಮಾ ಅಂತೂ ಅಳೋಕೆ ಶುರು ಮಾಡಿದರು.ಅವರಿಗೆ ಹೇಗೆ ಸಮಾಧಾನ ಮಾಡಬೇಕೋ ಗೊತ್ತಾಗಿಲ್ಲ
ಸವಿತಾಳಿಗೆ.ಮತ್ತೇ ಫೋನ್ ಸದ್ದು ಕೇಳಿ ತಕ್ಷಣ ಎತ್ತಿಕೊಂಡಳು ನವಿನ್ ಅಪ್ಪ ಅಮ್ಮ ಇವಳನ್ನೇ ನೋಡತೊಡಗಿದರು.ಏನು ಸುದ್ದಿ ಬರುವುದೋ ಎಂದು. ಹೆಲೋ ನಾನು ನವೀನ್ ಮನೆಯಿಂದ ಮಾತಾಡ್ತಾ ಇದ್ದೇನೆ.ನವೀನ್ ಅವರದು ಏನಾದರೂ ವಿಷಯ ಗೊತ್ತಾಯ್ತಾ ಇವತ್ತು ಅವರು ಬೆಂಗಳೂರಿಗೆ ಬರಬೇಕಾಗಿತ್ತು ಇನ್ನೂ ಬಂದಿಲ್ಲ ಆ ಕಡೆಯಿಂದ ಹೌದು, ನಾವು ಫೋನ್ ಮಾಡ್ತಾ ಇದ್ದೀವಿ.ಈವಾಗ ಬಂದ ಸುದ್ದಿ, ಏನೆಂದರೆ, ನವೀನ್ ಹೊರಟಾಗ,ಅವರ ಮುಂದೆ ಇರುವ ದೊಡ್ಡ ವ್ಯಾನ್ ನಲ್ಲಿ ತುಂಬಾ ಜನರು ಇದ್ದರಂತೆ, ಎಲ್ಲರೂ ಕುರುಡರು, ಡ್ರೈವರ್ ಗೆ ತುಂಬಾ ಪೆಟ್ಟು ತಗುಲಿ ಎಚ್ಚರ ತಪ್ಪಿದ್ದನಂತೆ ಕೆಲವು ಮಕ್ಕಳಿಗೆ
ಚಿಕ್ಕ ಪುಟ್ಟ ಗಾಯ ಆಗಿ ಎಲ್ಲಾ ಮಕ್ಕಳು ಗಾಬರಿಯಿಂದ ಅಳ್ತಾ ಇದ್ದರು.ಹೀಗಾಗಿ ನಾನು ಅವರಿಗೆ ಸಹಾಯ ಮಾಡಲು ಅಲ್ಲೇ ಇರಬೇಕಾಯಿತು.ಈ ಗಲಾಟೆಯಲ್ಲಿ ಫೋನ್ ಕಳೆದು ಹೋಗಿ, ಏನು ಮಾಡಬೇಕು ತಿಳಿಯದೇ, ಮೊದಲು ಕರ್ತವ್ಯದ ಕಡೆಗೆ ಗಮನ ಕೊಟ್ಟೆ.ಇಲ್ಲಿ ಎಲ್ಲಾ ಸೇರಿ ಮಾಡಿ, ಆಮೇಲೆ ಬೆಂಗಳೂರಿಗೆ
ಹೋಗುತ್ತೇನೆ.”ಎಂದು ಹೇಳಿದ್ದಾರೆ, ಅಂತ ಅವರ ಆಫೀಸಿನವರು ಹೇಳಿದ್ದು ಕೇಳಿ, ಎಲ್ಲರಿಗೂ ಸ್ವಲ್ಪ ಸಮಾಧಾನ ಆಯ್ತು.ಹೋಗಲಿ ವಿಷಯ ಅಂತೂ ಗೊತ್ತಾಯ್ತಲ್ಲ ಸಾಕು ಎಂದು, ನಿಟ್ಟುಸಿರು ಬಿಟ್ಟರು. ಸವಿತಾ ಇಬ್ಬರಿಗೂ ಸಮಾಧಾನ ಹೇಳಿ ಮನೆಗೆ ಹೊರಟಳು.
ನವೀನ್ ಫೋನ್ ಇಲ್ಲದೆ ಯಾಕೋ ತುಂಬಾ ಬೇಸರವಾಗುತ್ತಿತ್ತು ಸವಿತಾಳಿಗೆ.ಮತ್ತೆ ತಾನೇ ಸಮಾಧಾನ ಮಾಡಿಕೊಂಡಳು.ಹೋಗಲಿ ಒಂದು ಒಳ್ಳೆಯ ಕೆಲಸ ಮಾಡಿದ್ದಾನೆ, ನವೀನ್ ಬಗ್ಗೆ ಇನ್ನೂ ಹೆಚ್ಚು ಹೆಮ್ಮೆ ಉಂಟಾಯಿತು.ಪಾಪ ಕುರುಡರು ನವೀನ್ ಇಲ್ಲದಿದ್ದರೆ ಏನಾಗುತ್ತಿತ್ತು ಅವರ ಸ್ಥಿತಿ.ಇರಲಿ ಅಲ್ಲಿ ಎಲ್ಲಾ ಸರಿ ಮಾಡಿ ಬರುತ್ತಾನೆ.ಅಮ್ಮಾ ಬಿಸಿ ಬಿಸಿ ಅನ್ನ ಸಾರು ಮಾಡಿದ್ದು ಮೂರೂ ಜನ ಬಡಿಸಿಕೊಂಡು ಊಟ ಮಾಡಿ ಮಲಗಿದರು.ಏನೇನೋ ಕನಸುಗಳು.ನವೀನ್ ಜೊತೆಗೆ ಎಲ್ಲೆಲ್ಲೂ ಸುತ್ತಾಡಿದ
ಸಂಭ್ರಮ.ಬೆಳಿಗ್ಗೆ ಕಣ್ಣು ಬಿಟ್ಟಾಗ ಮೈಮನ ಹಗುರವಾಗಿತ್ತು . ಚಿಂತೆ ಬಿಟ್ಟು ಹೋಗಿ ಏನೋ ಒಂತರ ಸಮಾಧಾನ.ಬೇಗ ಬೇಗ ರೆಡಿಯಾಗಿ ಆಫೀಸಿಗೆ ಹೊರಟಳು. ಸವಿತಾ ಗೆ ನವೀನ್ ಇಲ್ಲದೆ,ಸಮಯ ಹೋಗ್ತಾನೆ ಇರಲಿಲ್ಲಾ.ಸದಾ ಫೋನ್ ಕಡೆಗೆ ಗಮನ ನವೀನ್ ಬಂದರೆ ಫೋನ್ ಮಾಡೇ ಮಾಡುತ್ತಾನೆ.ಯಾಕೆ ಅಷ್ಟು ತಲೆ ಬಿಸಿ ಮಾಡಿಕೊಳ್ಳಬೇಕು.ಎಂದು ತನ್ನಷ್ಟಕ್ಕೆ ತಾನೇ
ಸಮಾಧಾನ ಹೇಳಿಕೊಳ್ಳುತ್ತಿದ್ದಳು.ಒಂದು ವಾರ ಕಳೆದರೂ ನವೀನ್ ಫೋನ್ ಇಲ್ಲಾ.ಇವತ್ತು
ಆಫೀಸ್ನಿಂದ ಬೇಗ ಹೊರಟು ನವೀನ್ ಮನೆಗೆ ಹೋಗಿ ಬರಬೇಕು.ಕೆಲಸ ತುಂಬಾ ಇದ್ದುದರಿಂದ ಅವರ ಮನೆ ಕಡೆಗೆ ಹೋಗಲು ಸಾಧ್ಯವಾಗಿರಲಿಲ್ಲ.ನವೀನ್ ತಿಳಿಯಬಹುದು ಎಂದು ಹೊರಟಳು. ಬಗ್ಗೆ ನವೀನ್ ಮನೆ ತಲುಪಿದಾಗ, ನವೀನ್ ಧ್ವನಿ
ಕೇಳಿಸಿತು, ಅರೆ ನವೀನ್ ಬಂದಿದ್ದಾನೆ.ಮತ್ತೇ ನನಗೆ ಯಾಕೆ ಫೋನ್ ಮಾಡಲಿಲ್ಲ.ಈಗಲೇ ಬಂದಿರಬಹುದು.ಪಾಪ ದಣಿವು ಆಗಿರಬಹುದು ಎಂದು ಮನೆಯ ಗಂಟೆ ಬಾರಿಸಿದಳು.ಬಾಗಿಲು
ತೆಗೆದದ್ದು ನವೀನ್.ಅವನನ್ನು ನೋಡಿದ ತಕ್ಷಣ ಆನಂದ ಉಕ್ಕಿ ಬಂದಿತು.ಆದರೆ ನವೀನ್ ತುಂಬಾ ಗಂಭೀರವಾಗಿದ್ದ.ಯಾಕೆ ಹೀಗೆ ಯಾವಾಗಲೂ ನಗ್ತಾ ನಗ್ತಾ ಇರುವ ನವೀನ್ ಇವತ್ತು ಯಾಕೆ ಹೀಗೆ ? ಯಾಕೋ ಸವಿತಾ ಗೆ ದುಃಖ ಉಮ್ಮಳಿಸಿ ಬಂತು ಆದರೂ ತೋರಿಸಿ ಕೊಳ್ಳದೆ, ಹೆಲೋ ನವೀನ್ ಹೇಗೆ ಇದ್ದೀರಾ ಡ್ರೈವರ್ ಗೆ ವಾಸಿ ಆಯ್ತಾ ಮನೆಗೆ ಬಂದನಾ” ಏನೇನೋ ಕೇಳಿದ್ದಕ್ಕೆ ನವೀನ್, ಗಂಭೀರವಾಗಿ ” ಸರಿ ಹೋಗಿದ್ದಾನೆ “ಎಂದು ಹೇಳಿ, ಅಮ್ಮಾ ಸವಿತಾ ಅವರಿಗೆ ಟೀ ಮಾಡು ಎಂದು ಹೇಳಿ, ಮಾತಾಡಿ ಸವಿತಾ ಎಂದು ತನ್ನ ರೂಮಿಗೆ ಹೊರಟು ಹೋದನು.ಸವಿತಾಗೆ ಏನೂ ತಿಳಿಯಲಿಲ್ಲ.” ಅಮ್ಮಾ ನನಗೆ ಟೀ ಬೇಡ ಮನೆಗೆ ಹೋಗುತ್ತೇನೆ”ಎಂದು
ಹೊರಟು ನಿಂತಳು.ಮನವೇಕೊ ಮೌನ ತಾಳಿತ್ತು.ನವೀನ್ ಬಗ್ಗೆ ಎಷ್ಟು ನಂಬಿಕೆ ಇಟ್ಟಿದ್ದೆ.ಹೋಗುವಾಗ, ಫೋನ್ ಮಾಡಿ ಎಷ್ಟೊಂದು ಹರಟೆ ಹೊಡೆದು ಹೋಗಿದ್ದಾ, ಈವಾಗ ಏನಾಯ್ತು.ಅಲ್ಲಿಗೆ ಹೋಗಿ ಬಂದಮೇಲೆ ತುಂಬಾ ಬದಲಾವಣೆ ಆಗಿದೆ.ಅಂಥದ್ದು ಏನಾಯ್ತು.ಇರಲಿ ಸಾವಕಾಶವಾಗಿ ವಿಚಾರಿಸಬೇಕು.ಅಲ್ಲಿಯ ಸ್ಥಿತಿ ನೋಡಿ ಬಹುಶಃ ಬೇಜಾರಾಗಿರಬಹುದು ಸ್ವಲ್ಪ ದಿನ ಕಳೆದ ಮೇಲೆ ಸರಿ ಹೋಗಬಹುದು ಎಂದು ತಾನೇ ಸಮಾಧಾನ ಹೇಳಿಕೊಂಡಳು. ಇತ್ತ ಸವಿತಾ ತಂದೆ ತಾಯಿ ಮಗಳ ಮದುವೆ ಚಿಂತೆಯಲ್ಲಿ ಕೊರಗುತ್ತಾ ಇದ್ದರು ವಯಸ್ಸು ಹೋಗ್ತಾ ಇದೆ ಮದುವೆ ಆಗ್ತಾ ಇಲ್ಲ ಯಾವ ಹುಡುಗನ ಜಾತಕ ಬಂದರೂ ಇವುಗಳಿಗಿಂತ ಚಿಕ್ಕವರೇ ಇರುತ್ತಾರೆ ಏನು ಮಾಡಬೇಕು.ನಾವು ಜೀವಂತ ಇರುವುದರಲ್ಲಿ ಇವಳಿಗೆ ಮದುವೆ ಅಂತ ಆದರೆ ನಾವು ನಿಶ್ಚಿಂತೆಯಿಂದ ಕಣ್ಣು ಮುಚ್ಚಬಹುದು,ಅದೇ ಚಿಂತೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡುವುದು.ದೇವರೇ ಕಾಪಾಡು ಎಂದು ಕಾಣದ ದೇವರಿಗೆ ಹರಕೆ ಹೊತ್ತರು. ಸವಿತಾ ಗೆ ಯಾವಾಗ ನಿದ್ದೆ ಹತ್ತಿತೊ ತಿಳಿಯಲಿಲ್ಲ.ಬೆಳಿಗ್ಗೆ ಬೇಗ ಬೇಗ ಎದ್ದು,ಮುಖ ತೊಳೆದು, ಕಾಫಿ ಮಾಡೋಕೆ ಹೊರಟಳು ಅಷ್ಟರಲ್ಲಿ ಅಮ್ಮಾ ಬಂದು,ತೋಗೊ ಎಂದು ಕಾಫಿ ಕೊಟ್ಟಳು.ಬಿಸಿ ಬಿಸಿ ಕಾಫಿ ಕುಡಿದು ಸವಿತಾಳಿಗೆ ಮೈ ಮನ ಹಗುರವಾದಂತಾಯಿತು.ಆದರೂ ಮನದಲ್ಲಿ ದ್ವಂದ್ವ ನಡೆದಿತ್ತು ನವೀನ್ ಪರಿಚಯ ಆಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅಮ್ಮಾ ನೋಡಿದ ಹುಡುಗನನ್ನು ನೋಡಿ ಮದುವೆ 
ಮಾಡಿಕೊಳ್ಳಬಹುದಿತ್ತು.ಯಾಕೋ ಈಗ ಬೇರೆ ಹುಡುಗನನ್ನು ನೋಡಲು ಮನಸ್ಸು ಒಪ್ಪುವುದಿಲ್ಲ. ಏನು ಮಾಡಬೇಕು ತಿಳಿಯದೇ ಸಾಕಾಗಿತ್ತು.ಬೇಡ ಬೇಡಾ ಎಂದರೂ ಯೋಚನೆ ಬಂದು ತಲೆ ಭಾರವಾಗುತ್ತಿತ್ತು.ಮತ್ತೇ ವಾಸ್ತವಕ್ಕೆ ಮರಳಿ, ಆಫೀಸ್ ಹೋಗಲು ರೆಡಿ ಆಗತೊಡಗಿದಳು. ಅಷ್ಟರಲ್ಲಿ ಫೋನ್ ಬಾರಿಸಿತು.”ಹೆಲೋ,ಒ ನವೀನ್ ಹೇಗಿದ್ದೀರಿ”ಆ ಕಡೆಯಿಂದ ನವೀನ್ “ಸವಿತಾ ಇವತ್ತು ಸಾಯಂಕಾಲ ಸಿಗುತ್ತಿರಾ ಸ್ವಲ್ಪ ನಿಮ್ಮ ಜೊತೆ ಮಾತಾಡಬೇಕು”ಸವಿತಾಳಿಗೆ ತುಂಬಾ ಸಂತೋಷವಾಯಿತು ಅಬ್ಬಾ ಈಗಲಾದರೂ ನವೀನ್ ಫೋನ್ ಮಾಡಿದ್ರಲ್ಲ ಬಹುಶಃ ನಮ್ಮಿಬ್ಬರ ಮದುವೆ ಬಗ್ಗೆ ಮಾತಾಡಬಹುದು, ಅಬ್ಬಾ ಈಗ ಸವಿತಾಳಿಗೆ ನಿರಾಳ ಎನಿಸಿತು ಮತ್ತೇ ಆ ಕಡೆಯಿಂದ”ಹೆಲೋ ಸವಿತಾ ಭೇಟಿ ಆಗೋಣ ತಾನೇ ನಿಮಗೆ ಕೆಲಸ ಇದ್ದರೆ ಬೇರೆ ದಿನ ಭೇಟಿ ಆಗೋಣ.ಆದರೆ ನಾನು ನಿಮಗೆ ಅರ್ಜೆಂಟ್ ಆಗಿ ಏನೋ ಹೇಳಬೇಕು.”ಖಂಡಿತ ಭೇಟಿ ಮಾಡೋಣ ನವೀನ್ ಬನ್ನಿ”ಎಂದು ಸಮಯ ಕೇಳಿಕೊಂಡು, ಹೊರಡಲು ತಯಾರಾದಳು.ಸವಿತಾ ಏನೇನೋ ಕನಸು ಕಾಣ ತೊಡಗಿದಳು.ನವಿನ್ ಏನು ಮಾತಾಡಬಹುದು.ನಾನು ಹೇಗೆ ಮಾತಾಡಬೇಕು ಎಂದು ಆಲೋಚನೆ ಮಾಡುವಷ್ಟರಲ್ಲಿ ಭೇಟಿ ಮಾಡುವ ಸಮಯ ಬಂದೇ ಬಿಟ್ಟಿತು.ಬೇಗ ಬೇಗ ಆಫೀಸಿನಲ್ಲಿ ಮುಖ ತೊಳೆದು, ಕ್ರೀಂ ಹಚ್ಚಿಕೊಂಡು, ತಲೆ ಬಾಚಿ, ಹೊರಟಳು.ಅವಳ ಆನಂದಕ್ಕೆ ಪಾರವೇ ಇರಲಿಲ್ಲ.ಇವತ್ತು ಎಲ್ಲಾ ಮಾತನಾಡಬೇಕು.ಅಮ್ಮನಿಗೆ ನಮ್ಮಿಬ್ಬರ ಮದುವೆ ವಿಚಾರ ಹೇಳಿದರೆ ಎಷ್ಟು ಸಂತೋಷ ಪಡಬಹುದು.”ಮೇಡಂ ಇಳಿದು
ಕೊಳ್ಳಿ”ಡ್ರೈವರ್ ಎಚ್ಚರಿಸಿದನು.ಬೇಗ ಬೇಗ ಇಳಿದು ಡ್ರೈವರ್ ಗೆ ದುಡ್ಡು ಕೊಟ್ಟು ಹೊರಟಳು.ದೂರದಿಂದ ನೋಡಿದಳು.ನವೀನ್ ಆಗಲೇ ಬಂದು ಕುಳಿತುಕೊಂಡಿದ್ದ. ಹೆಲೋ ನವೀನ್ ಹೇಗಿದ್ದೀರಿ ಅಮ್ಮಾ ಅಪ್ಪ ಹೇಗಿದ್ದಾರೆ”ಎಲ್ಲರೂ
ಚೆನ್ನಾಗಿದ್ದೇನೆ.ನೀವು ಹೇಗಿದ್ದೀರಿ ಎಂದು ಕೇಳಿ “ಕುಳಿತು ಕೊಳ್ಳಿ ಸವಿತಾ ನಿಮ್ಮ ಜೊತೆ ಮಾತಾಡಬೇಕು ನೀವು ಹೇಗೆ ತೋಗೋತೀರಿ ನನ್ನ ಮಾತು ಗೊತ್ತಿಲ್ಲ “ಎಂದು ಹೇಳಲು ಶುರು ಮಾಡಿದನು ಸವಿತಾ ಏನು ಹೇಳಬಹುದು ಎಂದು ಅವನ ಮುಖವನ್ನೇ ನೋಡತೊಡಗಿದಳು. ‘ಸವಿತಾ, ನಮ್ಮಿಬ್ಬರ ಭೇಟಿ ಆಗಿ ಬಹುಷಃ ನಾಲ್ಕು ತಿಂಗಳು ಆಯಿತು ಅಲ್ಲವೇ, ಯಾಕೋ ನೀವು ನನಗೆ ತುಂಬಾ ಹತ್ತಿರದರಾಗಿ ಬಿಟ್ಟಿರಿ.ಹಾಗೆ ನಿಮ್ಮ ಬಗ್ಗೆ  ತುಂಬಾ ಪ್ರೀತಿ, ಸ್ನೇಹ, ಗೌರವ
ಉಂಟಾಯಿತು.ನಿಮ್ಮನ್ನು ಮದುವೆ ಮಾಡಿಕೊಂಡು ಸುಖವಾಗಿ ಇರಬೇಕು ಅಂದು ಕೊಂಡಿದ್ದೆ, ಆದರೆ ನಾನು ಅಂಧರ ಆಶ್ರಮಕ್ಕೆ ಹೋಗಿ ಬಂದಾಗಿನಿಂದ ಈ ಮದುವೆ ಸಂಸಾರ ಯಾವ ಬಂಧನವೂ ಬೇಡಾ ಅನ್ನಿಸಿತು.ಅಮ್ಮಾ ಅಪ್ಪನನ್ನು ಅದೇ ಊರಿಗೆ ಕರೆದುಕೊಂಡು ಹೋಗಿ, ಅಲ್ಲೇ ಒಂದು ಕೆಲಸ ನೋಡಿ,ಉಳಿದ ಸಮಯದಲ್ಲಿ ಅಂಧರ ಸೇವೆ ಮಾಡಬೇಕು ಎಂದು ಅನಿಸುತ್ತದೆ.ಯಾಕೊ ಅವರನ್ನು ಭೇಟಿ ಮಾಡಿದ ಮೇಲೆ, ಯಾವುದೇ ಬಂಧನ ಬೇಡಾ ಅನ್ನಿಸಿತು.ನಿಮ್ಮನ್ನು ಪ್ರೀತಿ ಮಾಡಿದ್ದು ನಿಜ,ಈವಾಗಲೂ ನಿಮ್ಮ ಬಗ್ಗೆ ತುಂಬಾ ಪ್ರೀತಿ ಇದೆ.ಹಾಗಂತ ನಿಮಗೆ ಯಾವುದೋ ಊರಿಗೆ ಕರೆದುಕೊಂಡು ಹೋಗಿ, ನಿಮ್ಮ ಸಂತೋಷ ಕಸಿದು ಕೊಳ್ಳುವ ಹಕ್ಕು ನನಗೆ ಇಲ್ಲಾ ಸವಿತಾ.ನೀವು ಬೇರೆ ಒಬ್ಬರನ್ನು ಮದುವೆ ಮಾಡಿಕೊಂಡು ಸುಖವಾಗಿ ಇರಬೇಕು ಸಮಯ ಸಿಕ್ಕಾಗ ನಿಮ್ಮನ್ನು ಭೇಟಿ ಮಾಡಲು ಬರುತ್ತೇನೆ. ದಯವಿಟ್ಟು ನನ್ನ ಬಗ್ಗೆ ತಪ್ಪು ಭಾವಿಸಬೇಡಿ”ಎಂದು ನವೀನ್ ಕೈ ಮುಗಿದು ಕೇಳಿಕೊಂಡಾಗ, ಸವಿತಾಳಿಗೆ ಅವನು ಇನ್ನೂ ದೊಡ್ಡ ವ್ಯಕ್ತಿಯಾಗಿ ಕಂಡನು’ಅಬ್ಬಾ ಎಂತಹ ದೊಡ್ಡ
ಯೋಚನೆ,’ಎಂದು ಅವನನ್ನೇ ನೋಡತೊಡಗಿದಳು.”ಸವಿತಾ ಏನು ಯೋಚನೆ ಮಾಡ್ತಾ ಇದ್ದೀರಾ.ಏನಾದರೂ ಮಾತಾಡಿ ಹೀಗೆ ಸುಮ್ಮನೆ ಕುಳಿತರೆ ಹೇಗೆ ಅಥವಾ ನಿಮಗೆ ನನ್ನ ಮೇಲೆ ಪ್ರೀತಿ ಇರಲಿಲ್ಲವೇ, ಹೇಳಿ” ನವೀನ್, ನೀವು ನಿಮ್ಮ ಮನದ ವಿಚಾರ ಹೇಳಿದಿರಿ, ನಾನು ನನ್ನ ಮನದ ವಿಚಾರ ಹೇಳಲು ಎರಡು ದಿನ ಕೊಡ್ತೀರಾ, ನೀವು ಹೇಗೋ ಮದುವೆ ಬೇಡ ಎಂದು ಹೇಳಿದ್ದೀರಿ, ಹಾಗೂ ಅಂಧರ ಸೇವೆ ಮಾಡಬೇಕು ಎಂದು ಹೇಳಿದ್ದೀರಿ.ಸರಿ ಹಾಗೆ ಮಾಡಿ,ನನ್ನ ಮೇಲೆ ನಿಮಗೆ ಪ್ರೀತಿ ಇದೆ ಅಲ್ಲವೇ ನಾನೂ ನಿಮ್ಮನ್ನು ತುಂಬಾ ಪ್ರೀತಿಸಿರುವೆ.ಈಗಲೂ ಪ್ರೀತಿ ಮಾಡುತ್ತೇನೆ.ಮದುವೆಯ ಕನಸೂ ಕಂಡಿದ್ದೆ.ಎರಡು ದಿನ ಸಮಯ ಕೊಡಿ ಮತ್ತೇ ಇದೇ ಜಾಗದಲ್ಲಿ ಭೇಟಿ ಮಾಡೋಣ “ಎಂದು ಹೇಳಿ ಹೊರಟಳು ನವೀನ್ ಗೆ ಏನು ಹೇಳಬೇಕು ತಿಳಿಯಲಿಲ್ಲ.
ಸವಿತಾಳ ತಲೆ ಸಿಡಿದುಹೋಗತಾ ಇತ್ತು ಏನೇನೋ ಕನಸು ಕಂಡಿದ್ದೆ, ಎಲ್ಲಾ ನುಚ್ಚು ನೂರಾಯಿತು.”ಏನಾಯ್ತು ಸವಿತಾ ತಲೆ ನೋವೆ ? ಕಾಫಿ ಕುಡಿದು ಸ್ವಲ್ಪ ರೆಸ್ಟ್ ಮಾಡು.ಆಮೇಲೆ ಊಟ ಮಾಡೋಣ “ಎಂದು ಕಾಫಿ ಕೊಟ್ಟರು.ಸವಿತಾಳಿಗೆ
ಏನೂ ಹೊಳೀತಾ ಇಲ್ಲಾ.ಕೊನೆಗೆ ತುಂಬಾ ಆಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದಳು.ಎರಡು ದಿನ ಎರಡು ಯುಗಗಳಂತೆ ಕಳೆದವು.ನವೀನ್ ಗೆ ಫೋನ್ ಮಾಡಿ ತಿಳಿಸಿದಳು.ಇಬ್ಬರೂ ಅದೇ ಸ್ಥಳಕ್ಕೆ ಬಂದರು.ಸವಿತಾ ಧೃಢ ಮನಸಿನಿಂದ ನವೀನ್ ಗೆ ಹೇಳಿದಳು “ನವೀನ್ ನನ್ನ ಮನದಾಳದ ಮಾತು ಕೇಳಿ, ಆಮೇಲೆ ನಿಧಾನವಾಗಿ ಯೋಚಿಸಿ ಹೇಳಿ” ಎಂದು ಹೇಳತೊಡಗಿದಳು.”ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿ ಮಾಡ್ತಾ ಇದ್ದೇವೆ, ಇಬ್ಬರಿಗೂ ವಯಸ್ಸಾದ ತಂದೆ ತಾಯಿ ಇದ್ದಾರೆ,ನನಗೂ ಅಂಧರ ಸೇವೆ ಮಾಡುವ ಮನಸ್ಸು ಇದೆ, ಯಾಕೆ ನಾವು ಇಬ್ಬರೂ ಮದುವೆ ಮಾಡಿಕೊಂಡು, ಕೈಲಾಗದವರ ಸೇವೆ ಮಾಡಿಕೊಂಡು ಅಮ್ಮಾ ಅಪ್ಪನ ನೋಡಿಕೊಂಡು, ಎಲ್ಲರೂ ಒಂದೇ ಊರಿನಲ್ಲಿ ಇರಬಹುದು ಅಲ್ಲವೇ.ಒಬ್ಬರಿಗೊಬ್ಬರು ಸುಖ ದುಃಖಗಳನ್ನು ಹಂಚಿಕೊಂಡು, ನಗ್ತಾ ನಗ್ತಾ ಇರಬಹುದು.ಮಕ್ಕಳು ಬೇಡಾ ಅಂದರೆ ಅನಾಥರಿಗೆ ತಂದೆ ತಾಯಿ ಪ್ರೀತಿ ಕೊಡಬಹುದು, ಅಲ್ಲವೇ ನನಗೆ ಅನ್ನಿಸಿದ್ದು ನಾನು ಹೇಳಿರುವೆ”ಇನ್ನು ನಿಮಗೆ ಬಿಟ್ಟಿದ್ದು ಎಂದು ನವೀನ್ ಮುಖ ನೋಡಿದಳು.ನವೀನ್ ಮುಖ ಅರಳಿತು ಎಷ್ಟು ಕಷ್ಟದ ವಿಷಯ ಎಷ್ಟು ಸರಳವಾಗಿ ಬಗೆಹರಿಸಿದಳು.ಎಂದು ಹೆಮ್ಮೆಯಿಂದ ಸರಿಯಾಗಿ
ಕಡೆಗೆ ಪ್ರೀತಿಯಿಂದ ನೋಡತೊಡಗಿದನು. ನವೀನ್ ಮುಖ ಕಂಡು ಸವಿತಾಳ ಮುಖ ಹೂವಿನ ಹಾಗೆ ಗೆಲುವಿನಿಂದ ಅರಳಿತು.
        

ಶ್ರೀದೇವಿ ಓಂಕಾರ್

Get real time update about this post categories directly on your device, subscribe now.

Unsubscribe
ADVERTISEMENT
Karunada Nidhi

Karunada Nidhi

Related Posts

No Content Available
ADVERTISEMENT
Karunada Nidhi Logo White

ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ನಿಮ್ಮ ನಂಬಿಕೆಯ ಕನ್ನಡ ನ್ಯೂಸ್ ಪೋರ್ಟಲ್. ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಸುದ್ದಿಗಳನ್ನು ನಿಖರವಾಗಿ, ವೇಗವಾಗಿ ನಿಮ್ಮ ಮುಂದೆ ತರುತ್ತೇವೆ. ಸಮಾಜದ ಸ್ಪಂದನೆಗೆ ಸ್ಪರ್ಶಿಸುವ ವರದಿಗಳು, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ, ವಿಶೇಷ ಕಾರ್ಯಕ್ರಮಗಳು, ಚರ್ಚೆಗಳು, ಸಂದರ್ಶನಗಳು ಮತ್ತು ಜನಜಾಗೃತಿ ಮೂಡಿಸುವ ಪ್ರಚಾರ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಲಭ್ಯ.

Contact Us

Contact  Number: +91 7019577058

E-mail: Syedshoeb.M1988@gmail. com | Karunadanidhi@gmail.com

Address: #16, 10ನೇ ಮುಖ್ಯ ರಸ್ತೆ, ಕರ್ನಾಟಕ ಬ್ಯಾಂಕ್ ಹಿಂಭಾಗ, ಮತ್ತಿಕೆರೆ, ಬೆಂಗಳೂರು – 560054

Newsletter

  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
  • ವಿದೇಶ
  • ಶಿಕ್ಷಣ ಉದ್ಯೋಗ
  • ನಿಮ್ಮ ಜಿಲ್ಲೆ

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ

WhatsApp us

Are you sure want to unlock this post?
Unlock left : 0
Are you sure want to cancel subscription?