ಸಿರಿಗೇರಿ ಮಾ, 13: ಸಿರುಗುಪ್ಪ ತಾಲೂಕಿನ ಸಿರಿಗೇರಿ ಸಮೀಪದ ಮುದ್ಟಟನೂರು ಗ್ರಾಮ ಪಂಚಾಯತಿಯ ಜಲಜೀವನ ಮಿಷನ್ ಎಂ ಬಿ ಕೆ ಕಾರ್ಯಕರ್ತೆಯಾಗಿ ಜಲ ಸಂರಕ್ಷಣೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ವಿ.ಅನಿತಾ ಇವರಿಗೆ ರಾಷ್ಟ್ರಪತಿ ಅವರಿಂದ ನವದೆಹಲಿಯಲ್ಲಿ ಘನವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪತಿ ಗೌರವ ಪ್ರಶಸ್ತಿ ದೊರೆತಿದೆ.
ಗೌರವ ಪ್ರಶಸ್ತಿಗೆ ಆಯ್ಕೆಯಾದ ವಿ. ಅನಿತ ಮಾತನಾಡಿ ಜೆ ಜಿ ಎಮ್ ಮಿಷನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ಮನೆಮನೆಗೂ ನಲ್ಲಿಗಳನ್ನು ಹಾಕಿಸಿದೆ. ಇದರ ಬಳಕೆ, ಉಪಯೋಗ, ನೀರಿನ ಉಳಿತಾಯದ ಬಗ್ಗೆ ಜನಜಾಗೃತಿ ಮೂಡಿಸಿ ಗ್ರಾಮ ಪಂಚಾಯತಿಯ ಎಲ್ಲರ ಸಹಕಾರದೊಂದಿಗೆ ಕುಡಿ ಯುವ ನೀರನ್ನು ಸಂಪರ್ಕ ವಾಗಿ ಕಲ್ಪಿಸಿದ್ದೇವೆ.
ಇದು ನನ್ನ ಅಳಿಲು ಸೇವೆ ಅಷ್ಟೇ. ಇದನ್ನು ಗುರುತಿಸಿದ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿ ಗೌರವ ಪ್ರಶಸ್ತಿ ನೀಡಿ ಗೌರವಿಸಿರುವುದು ತುಂಬಾ ಹೆಮ್ಮೆ ಅನಿಸುತ್ತಿದೆ. ನನ್ನ ಕರ್ತವ್ಯಕ್ಕೆ ಸಹಕರಿಸಿದ ಮುದ್ದಟನೂರು ಗ್ರಾಪಂನ ಎಲ್ಲಾ ಸಾರ್ವಜನಿಕರಿಗೂ, ಪಿಡಿಒ, ಗ್ರಾಪಂ ಸಿಬ್ಬಂದಿ, ಸರ್ವ ಸದಸ್ಯರಿಗೂ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.





