ತೋರಣಗಲ್ ಆಗಸ್ಟ್ 18:ತೋರಣಗಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿ ಇಲ್ಲಿನ ಪ್ರಜಾಸತ್ತಾತ್ಮಕ ಯುವ ಜನರ ಸಂಘಟನೆ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಮುಖರಾದ ಸ್ವಾಮಿ ಒತ್ತಾಯಿಸಿ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವು ಹಳ್ಳಿಗಳಿಂದ ಕೂಡಿದ್ದು ಕೈಗಾರಿಕಾ ಪ್ರದೇಶವಾಗಿದೆ. ಹೋಬಳಿ ಮಟ್ಟದಲ್ಲಿ ಒಟ್ಟು ಒಂಬತ್ತು ಗ್ರಾಮ ಪಂಚಾಯತಿ ಒಂದು ಪುರಸಭೆ ವ್ಯಾಪ್ತಿಯ 41 ಹಳ್ಳಿ ಗಳಿಂದ ದಿನ ನಿತ್ಯ ಬರುವ ರೋಗಿಗಳು ಹೆಚ್ಚಾಗುತ್ತಿದ್ದು ಅನೇಕ ಹಲವು ರೋಗ ರುಜಿನಗಳು ಹೆಚ್ಚಾಗುತ್ತಿವೆ.ಆದ್ದರಿಂದ ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ 30 ರಿಂದ 50 ಬೆಡ್ ಗಳು ಹೆಚ್ಚು ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ.ಅದೇ ರೀತಿ 200 ಬೆಡ್ ಗಳಾಗಿ ಹೆಚ್ಚು ಮಾಡಿ ಮೇಲ್ದರ್ಜೆಗೇರಿಸಿ ವಿಶೇಷ ಆಸ್ಪತ್ರೆಯಾಗಿ ನಿರ್ಮಿಸಿ ಎಲ್ಲಾ ವೈದ್ಯ ತಜ್ಞರನ್ನು ನೇಮಕ ಮಾಡುವುದರ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಈಗಾಗಲೇ ಕಳೆದ ಮಾರ್ಚ್ ತಿಂಗಳಲ್ಲಿ ಪ್ರತಿಭಟನೆ ಮನವಿ ನೀಡಲಾಗಿದ್ದು ಇದರ ಭಾಗವಾಗಿ ತಾಲೂಕು ವೈಧ್ಯಾಧಿಕಾರಿಗಳು ಎಲ್ಲರ ಸಮಾಕ್ಷಮದಲ್ಲಿ ಚರ್ಚಿಸಿ ಸಮಸ್ಯೆಗಳನ್ನು 15 ದಿನಗಳಲ್ಲಿ ಇತ್ಯರ್ಥ ಮಾಡುತ್ತೇವೆ ಎಂದರುಕೂಡ ಯಾವುದೇ ರೀತಿ ಪ್ರಯೋಜನವಾಗಿಲ್ಲವೆಂಬವುದು ಬೆಸರವಾಗಿದೆ. ಆದ್ದರಿಂದ ತಾವುಗಳು ಇದನ್ನು ತಿಳಿದು ತ್ವರಿತಗತಿಯಲ್ಲಿ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು
ಬೇಡಿಕೆಗಳು
ತೋರಣಗಲ್ಲು ಹೋಬಳಿಯು ಕೈಗಾರಿಕಾ ಪ್ರದೇಶಗಳಿಂದ ಕೂಡಿದ್ದು ಒಟ್ಟು 09 ಗ್ರಾಮ ಪಂಚಾಯಿತಿ ಒಂದು ಪುರಸಭೆ ವ್ಯಾಪ್ತಿಯ 41 ಹಳ್ಳಿಗಳಿಂದ ರೋಗಿಗಳು ಬರುತ್ತಿದ್ದು ಅತಿ ಶೀಘ್ರದಲ್ಲಿ 200 ಬೆಡ್ ಗಳನ್ನು ನಿರ್ಮಿಸಿ, ವಿಶೇಷ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು
ಕುಡಿಯುವ ನೀರಿನ ಘಟಕಗಳು ಹೆಚ್ಚು ಮಾಡಿ ನಿರಂತರವಾಗಿ 24 ಗಂಟೆಗಳ ಕಾಲ ಚಲಾಯಿಸಬೇಕು.
ಆಸ್ಪತ್ರೆ ಮುಂಭಾಗ ಮತ್ತು ಸುತ್ತಮುತ್ತಲಿನ ಆವರಣದಲ್ಲಿ ಬೆಳಕಿನ ದೀಪಗಳನ್ನು ಅಳವಡಿಸಬೇಕು ಮತ್ತು ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಮುನ್ನೆಚರಿಕೆ ಕ್ರಮಗಳನ್ನು ವಹಿಸಬೇಕು
ಶವಗಾರ (ಪೋಸ್ಟ್ ಮಾರ್ಟಂ) ಕಟ್ಟಡ ನಿರ್ಮಿಸಬೇಕು ಮತ್ತು ಖಾಸಿಗೆ ಆಸ್ಪತ್ರೆಗೆ ವೈದ್ಯರು ಶವಗಾರ ಪರೀಕ್ಷೆ ಮಾಡಲು ಹೋಗುವುದನ್ನು ನಿಲ್ಲಿಸಬೇಕು
ಆಸ್ಪತ್ರೆ ಜಾಗದ ಒಟ್ಟು ಭೂಮಿಯನ್ನು ತನ್ನದೇ ಆಸ್ಪತ್ರೆ ಹೆಸರಿನಲ್ಲಿ ಸರ್ವೆ ಮಾಡಿಸಿ ಪಾಣಿ ಪಟ್ಟವನ್ನು ನೋಂದಾಯಿಸಬೇಕು
ದಿನದ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ವೈದ್ಯರು ಸೇವೆ ಸಲ್ಲಿಸಬೇಕು.
ವೈದರುಗಳಿಗೆ ಮತ್ತು ಒಟ್ಟಾರೇ ಸಿಬ್ಬಂದಿ ವರ್ಗಗಳು ಸೇರಿದಂತೆ ವಸತಿ ಗೃಹಗಳನ್ನು ಹೆಚ್ಚು ಮಾಡಬೇಕು.
ಎಲ್ಲಾ ರೋಗಿಗಳಿಗೆ ರಕ್ತ ಪರೀಕ್ಷೆಗಳನ್ನು ಉಚಿತವಾಗಿ ಮಾಡಬೇಕು ಮತ್ತು ಅಗತ್ಯ ಸಲಕರಣೆಗಳನ್ನು ಒದಗಿಸಬೇಕು
ಸಮಯಕ್ಕೆ ಸರಿಯಾಗಿ ವೈದ್ಯರುಗಳು ಮತ್ತು ಸಿಬ್ಬಂದಿ ವರ್ಗದ ಕಾರ್ಯ ತಜ್ಞರು ಬರಬೇಕು ಅದರಲ್ಲಿಯೂ ಬಿಪಿ ಮತ್ತು ಸುಗರ್ ಟೆಕ್ನಿಷಿಯನ್ ಗಳು ಕಡ್ಡಾಯವಾಗಿ ಬರುವಂತೆ ಕ್ರಮವಹಿಸಬೇಕು.
ಆಸ್ಪತ್ರೆಯ ಒಳಗೆ ಮತ್ತು ಹೊರಗೆ ನಿರಂತರವಾಗಿ ಶುಚಿಗೊಳಿಸಿ ಸ್ವಚ್ಛತೆ ಕಾಪಾಡಬೇಕು.
ಒಳರೋಗಿ , ಗರ್ಭಿಣಿಯರಿಗೆ ಮತ್ತು ಸಹಾಯಕರಿಗೆ ಊಟ ನೀಡಬೇಕು
ಆಸ್ಪತ್ರೆ, ರೋಗಿಗಳ ಮತ್ತು ವೈದ್ಯರ ಹಾಗೂ ಸಿಬ್ಬಂದಿಗಳ ಸುರಕ್ಷತೆಗಾಗಿ ಕಾವಲುಗಾರರನ್ನು ( security) ಈ ಕೂಡಲೇ ನೇಮಕ ಮಾಡಬೇಕು.
ತಾಳೂರು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಬೇಕು. ಎಲ್ಲಾ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ಆರೋಗ್ಯ ಕೇಂದ್ರಕ್ಕೆ ಮುತ್ತಿ ಹಾಕಿ ಪ್ರತಿಪಡಿಸಲಾಗುವುದು ಎಂದು ಎಚ್ಚರಿಸಿದರು. ಮನವಿ ಪತ್ರ ಸ್ವೀಕರಿಸಿದ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಹರೀಶ್ ಮನವಿ ಪತ್ರವನ್ನು ಬಿಎಚ್ಒ ಗಮನಕ್ಕೆ ತಂದು ಬೇಡಿಕೆ ಈಡೇಸಲಾಗುವುದು ಎಂಬ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ
ಈ ಸಂದರ್ಭದಲ್ಲಿ
DYFI ಜಿಲ್ಲಾ ಕಾರ್ಯದರ್ಶಿ ಸ್ಬಾಮಿ ನಾಗಭೂಷಣ DYFI ತಾಲೂಕು ಕಾರ್ಯದರ್ಶಿ , ಶರೀಪ್ ಅಧ್ಯಕ್ಷರು, ಮುಖಂಡರಾದ ಲೋಕೇಶ್,ಅನಿಲ್,ಶಂಕ್ರಮ್ಮ, ಕಲಾಂದರ್ ಬಾಷ,
A.ಸ್ವಾಮಿ ದೇವದಾಸಿ ವಿಮೋಚನಾ ಸಂಘಟನೆ, ವಿ.ದೇವಣ್ಣ Cwfi ಜಿಲ್ಲಾ ಉಪಾಧ್ಯಕ್ಷ, ಮುಖಂಡರಾದ CD.ಹಾಲ ಸ್ವಾಮಿ, N.ಅಂಬರೀಶ್, ಸಿದ್ದಪ್ಪ, *ಹೆಚ್.ತಾಯಪ್ಪ, ಕೆ.ರಾಮಚಂದ್ರ ಸೇರಿದಂತೆ ಇತರರು ಇದ್ದರು.






