ಸಿರಿಗೇರಿ ಆ:15″ ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಗಣ್ಯ ಮಾನ್ಯರು ಸೈನಿಕರು ಸೇರಿದಂತೆ ಅನೇಕ ಜನ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಅವರನ್ನು ನಾವೆಂದಿಗೂ ಕೂಡ ಮರೆಯಬಾರದು ಎಂದು ಇಲ್ಲಿನ ಉರ್ದು ಶಾಲೆಯ ನಿವೃತ್ತ ಶಿಕ್ಷಕಿ ಕಾತ್ಯಯಿನಿ ತಿಳಿಸಿದರು. ವ್ಯಾಪಾರದ ನೆಪದಲ್ಲಿ ಬಂದಂತಹ ಬ್ರಿಟಿಷರು ಇಡೀ ಭರತ ಖಂಡವನ್ನು ಎಲ್ಲಿ ಮೀರಿ ಬೆಳೆಸಿಕೊಂಡು ಭಾರತ ದೇಶದ ಮೌಲ್ಯತೆಯನ್ನು ಹಾಳು ಮಾಡಿದರು.
ಇದರ ವಿರುದ್ಧವಾಗಿ ಹೋರಾಡಿದ ಭಗತ್ ಸಿಂಗ್ ರಾಜಗುರು ಸುಖದೇವ್ ಎಂತಹ ಕ್ರಾಂತಿಕಾರಿ ಹೋರಾಟಗಾರರು ಗಲ್ಲಿಗೇರಿದರು. ಸುಭಾಷ್ ಚಂದ್ರ ಬೋಸ್ ರವರ ನೇತೃತ್ವದಲ್ಲಿ ನಡೆದ ನೌಕಯಾನ ಸೈನಿಕರ ಹೋರಾಟ ಬ್ರಿಟಿಷರ ಗುಂಡಿಗೆ ನಡುಗಿಸಿತ್ತು.
ಆದರೆ ಬೋಸ್ ರವರು ಎಲ್ಲಿದ್ದಾರೆ ಎಂಬುದು ಇಂದಿನವರೆಗೂ ಪತ್ತೆ ಇಲ್ಲ. ಇತ್ತೀಚಿನ ವಿದ್ಯಮಾನಗಳನ್ನು ನೋಡುವುದಾದರೆ ಬ್ರಿಟಿಷರಿಗಿಂತಲೂ ಭಾರತ ದೇಶದ ಜನಪ್ರತಿನಿಧಿಗಳ ಅಟ್ಟಹಾಸ ಎಲ್ಲೆ ಮೀರಿ ಹೋಗಿದೆ. ಪ್ರತಿಯೊಂದು ಕಚೇರಿಯಲ್ಲಿಯೂ ಕೂಡ ಭ್ರಷ್ಟಾಚಾರದ ಹೊಗೆ ಆಡುತ್ತಿದೆ. ಸಮಾಜ ಬಡತನದಿಂದ ದೂರವಾಗಬೇಕೆಂಬ ಹೆಬ್ಬಯಕೆ ಹೊಂದಿದ್ದ ಗಾಂಧೀಜಿಯವರ ಕನಸು ಗ್ರಾಮೀಣ ಪ್ರದೇಶದಲ್ಲಿ ನುಚ್ಚುನೂರಾಗಿದೆ.
ಮುಂದೊಂದು ದಿನ ಬ್ರಿಟಿಷರ ಆಳ್ವಿಕೆ ಪುನಹ ಮರುಕಳಿಸಿದರು ತಪ್ಪೇನಿಲ್ಲ ಎಂದು ತಮ್ಮ ಅಸಹಾಯಕ ತೆ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಸಿರಿಗೇರಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಂದ ಮುಖ್ಯ ಗುರುಗಳು ಹಾಗೂ ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಚಿಣ್ಣರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ವಂದೇ ಮಾತರಂ, ಏನೇ ಬರಲಿ ಒಗ್ಗಟ್ಟಿರಲಿ, ಜೈ ಜವಾನ್ ಜೈ ಕಿಸಾನ್, ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆಗಳೊಂದಿಗೆ ಗ್ರಾಮದ ಇಡೀ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಾರತಾಂಬೆಯ ಹಿರಿಮೆನ್ನು ತಿಳಿಯಪಡಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಶಾಲೆಯ ಮುಖ್ಯ ಗುರುಗಳಾದ ರಿಜ್ವಾನ ಬೇಗಂ, ಬಾಲಕಿಯರ ಪ್ರೌಢಶಾಲೆಯ ಶಿವಲೀಲಾ, ತಾತನ ಶಾಲೆಯ ಶೇಕ್ಷಾ ವಲಿ ಟಿ, ಬಸವನಪೇಟೆಯ ಮುಖ್ಯ ಗುರು ಪಂಚಾಕ್ಷರಯ್ಯ, ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಾಗಭೂಷಣ, ಎಸ್ ಡಬ್ಲ್ಯೂ ಎಸ್ ಶಾಲೆಯ ಗೋವಿಂದರಾಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿವಕುಮಾರ್, ಎಸ್ ಡಿ ಎಂ ಸಿ ಪ್ರಮುಖರಾದ ಲಿಂಗಪ್ಪ, ಅನ್ವರ್ ಭಾಷ, ಮಹಮ್ಮದ್ ರಫೀಕ್, ರಜಾಕ್, ಮೌಲಾನಾ ಸೇರಿದಂತೆ ಸುಮಾರು ನೂರಾರು ಜನ ವಿದ್ಯಾರ್ಥಿಗಳು ಇದ್ದರು.






