ಬಹುಮುಖ ಪ್ರತಿಭೆಯ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಮತಿ ಮಹಾಲಕ್ಷ್ಮಿ ಎಂ ಎಸ್ ರವರು ತುಮಕೂರು ಜಿಲ್ಲೆಯ ನಿಟ್ಟೂರಿನಲ್ಲಿ 1976ನೇ ಡಿಸೆಂಬರ್ 13ರಂದು ಎನ್ಆರ್ ಶಾಮಣ್ಣ ಮತ್ತು ಶ್ರೀಮತಿ ಜಯಲಕ್ಷ್ಮಿ ಅವರ ಕಿರಿಯ ಸುಪುತ್ರಿಯಾಗಿ ಜನಿಸಿದರು .
ಶ್ರೀಯುತರು 1994 ರಲ್ಲಿ ಬೆಂಗಳೂರಿಗೆ ಆಗಮಿಸಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇವರು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಸಮಾಜದ ಒಳಿತಿಗಾಗಿ ದುಡಿಯಲು ಪ್ರಾರಂಭಿಸಿದರು.

1995ರಲ್ಲಿ ಚಿತ್ರರಂಗಕ್ಕೆ ತಮ್ಮ ಪಾದಾರ್ಪಣೆ ಗೈದರು. 2007ರಿಂದ ರಾಜಕೀಯ ಕ್ಷೇತ್ರದಲ್ಲೂ ತಮ್ಮ ಕಾರ್ಯ ಹಸ್ತ ಚಾಚಿದರು, ಅನೇಕ ಗಣ್ಯ ವ್ಯಕ್ತಿಗಳ ಪರಿಚಯ, ಅವರ ಮಾರ್ಗದರ್ಶನದಲ್ಲಿ ಯಾವ ಪಕ್ಷಬೇಧಗಳು ಇಲ್ಲದೆ ಅವರೊಂದಿಗೆ ಕೈಜೋಡಿಸಿ ತಮ್ಮ ಕೆಲಸ ನಿರ್ವಹಿಸಿಕೊಂಡು ಬಂದಿರುತ್ತಾರೆ.
ಅಷ್ಟೇ ಅಲ್ಲದೆ ಶ್ರೀಮತಿ ಮಹಾಲಕ್ಷ್ಮಿಯವರು ತಮ್ಮದೇ ಆದ ಮಹಾಲಕ್ಷ್ಮಿ ಎಂಟರ್ಪ್ರೈಸಸ್ ಎಂಡಿ ಆಗಿ, ಎಸ್‌ಬಿಐ ಗ್ಯಾರಿಸನ್ ಸೆಕ್ಯೂರಿಟಿ ಏಜೆನ್ಸಿಸ್ನ ಎಂ ಡಿ ಆಗಿ, ಎಂ ಆರ್ ಎಸ್ ಬೋರ್ವೆಲ್ ತಮಿಳುನಾಡು, ಹಾಗೂ ಮಹಾಲಕ್ಷ್ಮಿ ಫೈನಾನ್ಸ್ ನ ಎಂ ಡಿ ಯಾಗಿ ಮತ್ತು ಅಹಲ್ಯ ಪೌಂಡೇಶನ್ ಹಾಗೂ ರಾಜಲಕ್ಷ್ಮಿ ಕ್ರಿಯೇಶನ್ಸ್ ಪ್ರಡ್ಯೂಸರ್ ಆಗಿ ತಮ್ಮ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ .
ಶ್ರೀಯುತರು ಕನ್ನಡ,ತಮಿಳು, ಹಿಂದಿ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುತ್ತಾರೆ,
ತಾಯಿಯಂತೆ ಮಗಳು ನೂಲಿನಂತೆ ಸೀರೆ ಎಂಬ ಗಾದೆಯ ಮಾತಿನಂತೆ ಇವರ ಮಗಳಾದ ಕಂಪನ
ಪೈಲೆಟ್, ನ್ಯಾಷನಲ್ ಶೂಟರ್, ನ್ಯಾಷನಲ್ ಇಂಟೀರಿಯರ್ ಡೆಕೋರೇಟರ್ ಹಾಗೂ ಒಳ್ಳೆಯ ವ್ಯಾಪಾರೋದ್ಯಮದಲ್ಲಿ ಆಸಕ್ತಿವುಳ್ಳವರು ಆಗಿರುತ್ತಾರೆ.ಇವರು ಜನಕ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿರುತ್ತಾರೆ.
ಶ್ರೀಮತಿ ಮಹಾಲಕ್ಷ್ಮಿ ಅವರಿಗೆ ಶ್ರೀಮಾನ್ ಶ್ರೀ ಹರಿ ಕೋಡೆಯವರು, ಶ್ರೀಮಾನ್ ಶಂಕರ ಬಿದರೆ ಪೊಲೀಸ್ ಕಮಿಷನರ್, ಶ್ರೀಮಾನ್ ಮುರುಗೇಶ್ ನಿರಾಣಿಯವರು, ಶ್ರೀಮನ್ ಈಶ್ವರಪ್ಪನವರು, ದಿವಂಗತ ಉಮೇಶ್ ಕತ್ತಿಯ ವರು, ಶ್ರೀಮಾನ್ ಹೊರಟ್ಟಿಯವರು, ಹಾಗೂ ಐಎಎಸ್ ಅಧಿಕಾರಿಯಾದ ಶ್ರೀಮಾನ್ ವಿಠ್ಠಲ್ ಮೂರ್ತಿಯವರು ಈ ಗಣ್ಯ ವ್ಯಕ್ತಿಗಳೆಲ್ಲ ಇವರ ಜೀವನದ ದಾರಿದೀಪವಾಗಿ ಒಳ್ಳೆಯ ಮಾರ್ಗದರ್ಶನವನ್ನು ನೀಡಿರುತ್ತಾರೆ. ಇವರೆಲ್ಲರೊಂದಿಗೆ ಒಳ್ಳೆಯ ಬಡನಾಟ ಅವರ ಪ್ರೀತಿಗೆ ಪಾತ್ರರಾಗಿ ಶ್ರೀಯುತರು ತಮ್ಮ ಕಾರ್ಯದಲ್ಲಿ ಉತ್ತಮ ಸಾಧನೆಯನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಇವರ ಈ ಸೇವೆ ನಿರಂತರವಾಗಿ ಸಾಗಿ ತಮ್ಮ ಕೀರ್ತಿಪತಾಕೆಯನ್ನು ಉನ್ನತ ಮಟ್ಟದಲ್ಲಿ ರಾರಾಜಿಸಿಕೊಳ್ಳಲಿ ಎಂದು ಆಶಿಸೋಣ.
ಗೀತಾ ಕೈಲ್ಕೆರೆ, ಹವ್ಯಾಸಿ ಬರಹಗಾರ್ತಿ. ಬೆಂಗಳೂರು.





