ಬೆಂಗಳೂರು, ಜ.26: ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಸ್ಥಾಪಿತವಾದ ಆಚಾರ್ಯ ಪ್ರತಿಷ್ಠಾನ ಫೌಂಡೇಶನ್‌ನ ಉದ್ಘಾಟನಾ ಸಮಾರಂಭವು ಮಲ್ಲತ್ತಹಳ್ಳಿಯ ಗಾನ ಪಲ್ಲವಿ ಆಡಿಟೋರಿಯಂನಲ್ಲಿ ಅದ್ಧೂರಿಯಾಗಿ ನಡೆಯಿತು. ಗಣರಾಜ್ಯೋತ್ಸವದ ಸನ್ನಿವೇಶದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಕಂಗೊಳಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಕಲಾರತ್ನ ಡಾ. ಎಸ್. ಪಿ. ಆಚಾರ್ಯ ಅವರ ಕನಸಿನ ಸಾಕಾರ ರೂಪವೇ ಈ ಫೌಂಡೇಶನ್ ಎಂದು ಅತಿಥಿಗಳು ಶ್ಲಾಘಿಸಿದರು. ಉಪಾಧ್ಯಕ್ಷೆ ಅನುಷ ರೆಡ್ಡಿ ಹಾಗೂ ಸಂಘದ ಪದಾಧಿಕಾರಿಗಳು ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಿಜೆಪಿ ಮುಖಂಡರು ಹಾಗೂ ದಾರಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಅಂಬರೀಶ್ ಜಿ ಉಪಸ್ಥಿತರಿದ್ದರು. ಜಾನಪದ ಗಾನ ತಿಲಕ, ಚಲನಚಿತ್ರ ನಟ ಗುರುರಾಜ್ ಹೊಸಕೋಟೆ, ನಟ ಮೈಕೋ ನಾಗರಾಜ್, ನಟ ಎಸ್ಕಾರ್ಟ್ ಶ್ರೀನಿವಾಸ್, ಜ್ಯೋತಿರ್ವಿದ್ಯಾ ವಾಚಸ್ಪತಿ ಕುಮಾರವಸಿಷ್ಠ, ನಟ ಸುರೇಶ್ ಬಾಬು, ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ರಾಜ್ಯಾಧ್ಯಕ್ಷ ಗಣೇಶ್ ಗೌಡ, ಗಿನ್ನಿಸ್ ದಾಖಲೆ ಪುರಸ್ಕೃತ ಎಪಿ ಕರಾಟೆ ಶ್ರೀನಾಥ್, ಪ್ರಗತಿಪರ ರೈತ ದಯಾನಂದ ಮೂರ್ತಿ, ಚಲನಚಿತ್ರ ನಿರ್ದೇಶಕ ಲೆಮನ್ ಪರಶುರಾಮ್, ನಟ ಬದ್ರಿ, ಪತ್ರಿಕಾ ಸಂಪಾದಕರು ಕನ್ನಡ ಪರ್ವಿಜ್ ಪಾಷಾ ಹಾಗೂ ಸಲ್ಮಾನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.


ಕಾರ್ಯಕ್ರಮದಲ್ಲಿ ವೆಂಕಟರಾಜ್ ಹಾಗೂ ಶ್ರೀಮತಿ ಜ್ಯೋತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಸಮಾರಂಭಕ್ಕೆ ವಿಶೇಷ ಮೆರಗು ತಂದರು. ಒಟ್ಟಾರೆ, ಗಣರಾಜ್ಯೋತ್ಸವದ ದಿನವೇ ಬೆಂಗಳೂರಿನಲ್ಲಿ ಸಾಹಿತ್ಯ-ಸಂಸ್ಕೃತಿಯ ಹೊಸ ಅಧ್ಯಾಯಕ್ಕೆ ಚಾಲನೆ ದೊರಕಿದ ಕ್ಷಣಕ್ಕೆ ಈ ಉದ್ಘಾಟನಾ ಸಮಾರಂಭ ಸಾಕ್ಷಿಯಾಯಿತು.
ಸಾಂಸ್ಕೃತಿಕ ಭಾಗವಾಗಿ ಜಾನಪದ ಗಾನ ಹಾಗೂ ಸನ್ಮಾನ ಕಾರ್ಯಕ್ರಮಗಳು ನೆರವೇರಿದವು. ಸಭಾಂಗಣದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಆಚಾರ್ಯ ಪ್ರತಿಷ್ಠಾನದ ಮುಂದಿನ ಕಾರ್ಯಯೋಜನೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಸಾಹಿತ್ಯ, ಕಲೆ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಗಳಲ್ಲಿ ವಿಶಿಷ್ಟ ಸಾಧನೆ ಮಾಡುವವರಿಗೆ ವೇದಿಕೆ ಕಲ್ಪಿಸುವುದು ಫೌಂಡೇಶನ್‌ನ ಪ್ರಮುಖ ಉದ್ದೇಶವೆಂದು ಸಂಸ್ಥಾಪಕರು ತಿಳಿಸಿದರು.





