ಬೆಂಗಳೂರು, ಮಾ.08: ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 369 ವಾರ್ಡ್‌ಗಳ ಪೈಕಿ 176 ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದ್ದು, ಇದು ಸುಮಾರು ಶೇ.47ರಷ್ಟು ಸ್ಥಾನಗಳನ್ನು ಒಳಗೊಂಡಿದೆ.
ಪ್ರಕಟನೆಯ ಪ್ರಕಾರ, ಒಟ್ಟು ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿಗೆ 43, ಪರಿಶಿಷ್ಟ ಪಂಗಡಕ್ಕೆ 7, ಹಿಂದುಳಿದ ವರ್ಗಗಳಿಗೆ 121 ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಉಳಿದ ವಾರ್ಡ್‌ಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ:
ಒಟ್ಟು 63 ವಾರ್ಡ್‌ಗಳಿದ್ದು, ಪರಿಶಿಷ್ಟ ಜಾತಿಗೆ 11 (ಮಹಿಳೆ 5), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ-ಎಗೆ 15 (ಮಹಿಳೆ 7), ಹಿಂದುಳಿದ ವರ್ಗ-ಬಿಗೆ 4 (ಮಹಿಳೆ 2) ಮತ್ತು ಸಾಮಾನ್ಯ ವರ್ಗಕ್ಕೆ 32 (ಮಹಿಳೆ 16) ವಾರ್ಡ್‌ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ:
ಒಟ್ಟು 50 ವಾರ್ಡ್‌ಗಳಿದ್ದು, ಪರಿಶಿಷ್ಟ ಜಾತಿಗೆ 7 (ಮಹಿಳೆ 3), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ-ಎಗೆ 14 (ಮಹಿಳೆ 7), ಹಿಂದುಳಿದ ವರ್ಗ-ಬಿಗೆ 3 (ಮಹಿಳೆ 1) ಮತ್ತು ಸಾಮಾನ್ಯ ವರ್ಗಕ್ಕೆ 25 (ಮಹಿಳೆ 12) ವಾರ್ಡ್‌ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ:
ಒಟ್ಟು 112 ವಾರ್ಡ್‌ಗಳಿದ್ದು, ಪರಿಶಿಷ್ಟ ಜಾತಿಗೆ 9 (ಮಹಿಳೆ 4), ಪರಿಶಿಷ್ಟ ಪಂಗಡಕ್ಕೆ 2 (ಮಹಿಳೆ 1), ಹಿಂದುಳಿದ ವರ್ಗ-ಎಗೆ 30 (ಮಹಿಳೆ 15), ಹಿಂದುಳಿದ ವರ್ಗ-ಬಿಗೆ 7 (ಮಹಿಳೆ 3) ಮತ್ತು ಸಾಮಾನ್ಯ ವರ್ಗಕ್ಕೆ 64 (ಮಹಿಳೆ 32) ವಾರ್ಡ್‌ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ:
ಒಟ್ಟು 72 ವಾರ್ಡ್‌ಗಳಿದ್ದು, ಪರಿಶಿಷ್ಟ ಜಾತಿಗೆ 9 (ಮಹಿಳೆ 4), ಪರಿಶಿಷ್ಟ ಪಂಗಡಕ್ಕೆ 2 (ಮಹಿಳೆ 1), ಹಿಂದುಳಿದ ವರ್ಗ-ಎಗೆ 19 (ಮಹಿಳೆ 9), ಹಿಂದುಳಿದ ವರ್ಗ-ಬಿಗೆ 5 (ಮಹಿಳೆ 2) ಮತ್ತು ಸಾಮಾನ್ಯ ವರ್ಗಕ್ಕೆ 37 (ಮಹಿಳೆ 18) ವಾರ್ಡ್‌ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ:
ಒಟ್ಟು 72 ವಾರ್ಡ್‌ಗಳಿದ್ದು, ಪರಿಶಿಷ್ಟ ಜಾತಿಗೆ 7 (ಮಹಿಳೆ 3), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ-ಎಗೆ 19 (ಮಹಿಳೆ 9), ಹಿಂದುಳಿದ ವರ್ಗ-ಬಿಗೆ 5 (ಮಹಿಳೆ 2) ಮತ್ತು ಸಾಮಾನ್ಯ ವರ್ಗಕ್ಕೆ 40 (ಮಹಿಳೆ 20) ವಾರ್ಡ್‌ಗಳನ್ನು ಮೀಸಲಿಡಲಾಗಿದೆ.
ಈ ಮೀಸಲಾತಿ ಪಟ್ಟಿಯ ಪ್ರಕಟಣೆಯೊಂದಿಗೆ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣಾ ಸಿದ್ಧತೆಗಳಿಗೆ ವೇಗ ಸಿಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.





