ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ, ಉಳಿಸುವ, ಪರಿಚಯಿಸುವ ವಿಶಿಷ್ಟ ಕೆಲಸವನ್ನು ಚಿತ್ರಕಲಾವಿದರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಇದರ ಜೊತೆಗೆ ನಾಡಿನ ಎಲ್ಲಾ ಕಲಾವಿದರು ಒಂದೆಡೆ ಸೇರಬೇಕು, ನೆಲೆಯನ್ನು ಕಟ್ಟಿಕೊಳ್ಳಬೇಕು, ಎಂಬ ಮಹದಾಸೆಯನ್ನು ಹೊತ್ತು ಕಲಾಗ್ರಾಮವನ್ನು ನಿರ್ಮಿಸಲು ಹೊರಟ ನಿಮ್ಮ ಈ ಕೆಲಸ ಶ್ಲಾಘನೀಯ ಎಂದು..
ಪ್ರವಾಸೋದ್ಯಮ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾದ *”ಸನ್ಮಾನ್ಯ ಶ್ರೀ ಹೆಚ್. ಕೆ. ಪಾಟೀಲ್”*
ಮಾತನಾಡಿದರು.
ಬೆಂಗಳೂರು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ,
ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್(ರಿ) ನ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಖುಷಿಯಾಯಿತು.
ನಾಡಿನ ಖ್ಯಾತ ಹಿರಿಯ ಚಿತ್ರಕಲಾವಿದರನ್ನು ಗುರ್ತಿಸಿ, ಜೀವಮಾನದ ಶ್ರೇಷ್ಠ ಕಲಾ ಸಾಧಕರ ಪ್ರಶಸ್ತಿಯನ್ನು ನೀಡುತ್ತಿರುವುದು ಅತ್ಯಂತ ಸಂತೋಷ.ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಎಲ್ಲಾ ಸಾಧಕರಿಗೆ ಹೃದಯ ಪೂರ್ವಕ ಅಭಿನಂದನೆಗಳು.
ಇದರ ಜೊತೆಗೆ ನಾಡಿನ ಎಲ್ಲಾ ಚಿತ್ರಕಲಾವಿದರು, ಸಾಧಕರು ಸೇರಿ, ಬೆಂಗಳೂರಿನಂತಹ ನಗರಗಳಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಇಂತಹ ಒಳ್ಳೆಯ ಕೆಲಸ ಮಾಡಲು ಹೊರಟಿದ್ದು ನಿಜಕ್ಕೂ ಮೆಚ್ಚುವಂತದ್ದು.
ಎಲ್ಲರಿಗೂ ಒಂದು ನೆಲೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕುತ್ತಿರುವ ನಿಮ್ಮ ಗುರಿ, ಕನಸು ಈಡೇರಲಿ.
ಖಂಡಿತ ನಾನು ಕೂಡ ನಿಮ್ಮ ಒಳ್ಳೆಯ ಕೆಲಸ ಮತ್ತು ಯೋಜನೆಗೆ ಕೈ ಜೋಡಿಸುವೆ.
ಸರ್ಕಾರದಿಂದ ಏನು ಸಹಾಯ, ಸಹಕಾರ, ಪ್ರೋತ್ಸಾಹ ಬೇಕೋ ಖಂಡಿತ ಸಾಧ್ಯವಾದಷ್ಟು ಮಟ್ಟಿಗೆ ಮಾಡಿಕೊಡುವೆ, ನಿಮಗೆ ಶುಭವಾಗಲಿ ಎಂದು ಭರವಸೆಯ ನುಡಿಗಳನ್ನಾಡಿದರು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾಸಾಧಕರಿಗೆ ಜೀವಮಾನದ ಶ್ರೇಷ್ಠ ಕಲಾ ಸಾಧಕರ ಪ್ರಶಸ್ತಿಯನ್ನು ಪ್ರದಾನ ಮಾಡಿದ, ನಿವೃತ್ತ ಜಿಲ್ಲಾಧಿಕಾರಿಗಳು, ಸಾಂಸ್ಕೃತಿಕ ಚಿಂತಕರು ಹಾಗೂ ಹಿರಿಯ ಬರಹಗಾರರಾದ *”ಡಾ.ಸಿ.ಸೋಮಶೇಖರ್”*
ರವರು ಮಾತನಾಡಿ…
ಇವರೆಲ್ಲ ಕಲಾ ತಪಸ್ವಿಗಳು.
ಇಂತಹ ಮೇರು ವ್ಯಕ್ತಿತ್ವದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಮಾಜದ ಕೃತಜ್ಞತೆಯ ಸಂಕೇತ.
ನನಗೆ ಇಂತಹ ಸಮಾರಂಭದಲ್ಲಿ ಭಾಗವಹಿಸಿದ್ದು ಹೆಮ್ಮೆ ಅನಿಸುತ್ತದೆ.
ಇಂದಿನ ವಿಶೇಷ ಗೌರವ ಪ್ರಶಸ್ತಿಯನ್ನು ಪಡೆದ ಮಹನೀಯರೆಲ್ಲ ದೊಡ್ಡ ಸಾಧಕರು.
ಇವರು ನೀಡಿದ ಸೇವೆ ನಮ್ಮ ನಾಡಿಗೆ, ವಿಶ್ವಕ್ಕೆ ದೊಡ್ಡ ಕೊಡುಗೆ.
ಕಲಾವಿದರ ಅಂತರಂಗದ ಭಾವನೆಗಳ ಅಭಿವ್ಯಕ್ತಿಯಲ್ಲಿ ಅರಳಿದ ಚಿತ್ರ ಕಲೆಗೆ ಅಪಾರ ಮಹತ್ವವಿದೆ.
ಇಂದಿನ ಪೀಳಿಗೆಗೆ ನಿಮ್ಮ ವಿಶೇಷ ಸಾಧನೆ ಮಾದರಿಯಾಗಲಿ.
ನಿಮ್ಮಂತಹ ಸಹೃದಯ ಕಲಾವಿದರಿಂದ ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ.
ನೀವು ಕಲಾವಿದರಿಗಾಗಿ ಕಲಾಗ್ರಾಮವನ್ನು ಮಾಡಲು ಹೊರಟಿದ್ದು ನಿಜಕ್ಕೂ ಮೆಚ್ಚುವಂತದ್ದು.
ನಿಮ್ಮ ಕನಸು ನನಸಾಗಲಿ.
ಶುಭವಾಗಲಿ ಎಂದು ಹಾರೈಸಿದರು.
ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್ ನ ವೆಬ್ಸೈಟ್ ಉದ್ಘಾಟನೆ ಮಾಡುವುದರ ಜೊತೆಗೆ, ಜೀವಮಾನದ
*”ಶ್ರೇಷ್ಠ ಕಲಾ ಸಾಧಕರ ಪ್ರಶಸ್ತಿ”*
ಯನ್ನು ಸ್ವೀಕರಿಸಿದ ನಾಡಿನ ಖ್ಯಾತ ಚಿತ್ರ ಕಲಾವಿದರು, ಕೇಂದ್ರ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ
*”ಶ್ರೀ ಚಿ.ಸು.ಕೃಷ್ಣಶೆಟ್ಟಿಯವರು”*
ಮಾತನಾಡಿ….
ನಿಜಕ್ಕೂ ತಮಗೆಲ್ಲರಿಗೂ ಚಿರಋಣಿ.
ನನ್ನಂತಹ ಸಾಧಕನನ್ನು ಗುರುತಿಸಿ, ವಿಶೇಷ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಅತ್ಯಂತ ಸಂತೋಷ ಮತ್ತು ಹೆಮ್ಮೆ ಅನಿಸುತ್ತದೆ.
ತಮಗೆಲ್ಲರಿಗೂ ಮನದಾಳದ ವಂದನೆಗಳು.
ನಾನು ಹಲವಾರು ರಾಷ್ಟ್ರಗಳನ್ನು ಸುತ್ತಿ ಬಂದಿದ್ದೇನೆ
ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ದೊಡ್ಡ ಚಿತ್ರಕಲಾ ಗ್ಯಾಲರಿಗಳನ್ನು, ಚಿತ್ರ ಸಂಗ್ರಹಾಲಯಗಳನ್ನು,
ಚಿತ್ರಕಲಾ ಪ್ರದರ್ಶನಗಳನ್ನು ನೋಡಿ ಬೆರಗಾಗಿದ್ದೇನೆ.
ಅವೆಲ್ಲ ಚಿತ್ರಕಲಾ ಸಮಾರಂಭದಲ್ಲಿ ಭಾಗವಹಿಸಿ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ.
ಆದರೆ, ಇವತ್ತು ನಿಮ್ಮ ವಿಶೇಷ ಸಾಧನೆ, ದೂರ ದೃಷ್ಟಿಕೋನದಿಂದ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನಂತಹ ನಗರದಲ್ಲಿ ಕಲಾಗ್ರಾಮ ಮಾಡಲು ಹೊರಟಿದ್ದು ನಿಜಕ್ಕೂ ಮೆಚ್ಚುವಂತದ್ದು, ಅಷ್ಟೇ ಸಂತೋಷ ಕೂಡ ಆಗುತ್ತಿದೆ.
ಕಲೆಯೇ ಉಸಿರಾಗಿ,ಕಲೆಯ ಪ್ರಸಾರಕರಾಗಿ, ಕಲಾವಿದರನ್ನು ಒಂದೆಡೆ ಸೇರಿಸಿ, ಅವರಿಗೊಂದು ನೆಲೆ ಕಲ್ಪಿಸುವ ನಿಮ್ಮ ಗುರಿ, ಕನಸು ಈಡೇರಲಿ.
ಶುಭವಾಗಲಿ ಎಂದು ಹಾರೈಸಿದರು.
ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ..
ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ *”ಶ್ರೀ ಪ. ಸು. ಕುಮಾರ್”* ಅವರು…
ಇದೊಂದು ಅತ್ಯಂತ ಅವಿಸ್ಮರಣೀಯ ಕಾರ್ಯಕ್ರಮ.
ನಾಡಿನ ಖ್ಯಾತ ಹಿರಿಯ ಚಿತ್ರಕಲಾವಿದರಿಗೆ ಸಾಧಕರಿಗೆ ಗೌರವ ಪ್ರಶಸ್ತಿಯನ್ನು ನೀಡುವುದರ ಜೊತೆಗೆ,
ನಾಡಿನ ಹಲವಾರು ಚಿತ್ರ ಕಲಾವಿದರ ವಿಶೇಷ ಚಿತ್ರಕಲಾ ಪ್ರದರ್ಶನವನ್ನು ಮಾಡುತ್ತಿರುವುದು ನೋಡಿ ಆನಂದವಾಯಿತು.
ನಿಜಕ್ಕೂ ತಮಗೆಲ್ಲರಿಗೂ ಅಭಿನಂದನೆಗಳು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣಗೊಂಡ ಕಲಾವಿದರ ಗ್ಯಾಲರಿ, ಕಲಾವಿದರ ಕಲಾ ಗ್ರಾಮಗಳ ಹಾಗೆ, ನೀವು ಕೂಡ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ಮಾಡುವ ದೂರ ದೃಷ್ಟಿಕೋನದ ಹೆಜ್ಜೆಗಳು ಸಫಲವಾಗಲಿ.
ನಾಡಿನ ಕಲಾವಿದರ ಬದುಕಿಗೆ ಆಸರೆಯಾಗಲಿ ಎಂಬುದೆ ನಮ್ಮ ಹಾರೈಕೆ.ಶುಭವಾಗಲಿ.
ಜೀವಮಾನದ ಶ್ರೇಷ್ಠ ಕಲಾ ಸಾಧಕರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ,
ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರು,ಹಿರಿಯ ಕಲಾವಿದರಾದ ನಾಡೋಜ *”ಡಾ.ವಿ.ಟಿ.ಕಾಳೆಯವರು”*
ಗುರು ಹಿರಿಯರ ಕೃಪೆಯಿಂದ ಸರ್ಕಾರವು ನೀಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ವರ್ಣ ಶಿಲ್ಪಿ ಕೆ ವೆಂಕಟಪ್ಪ ಪ್ರಶಸ್ತಿ, ಅಲ್ಲದೆ, ಸರ್ಕಾರೇತರ ಸಂಸ್ಥೆಗಳು ನೀಡಿದ ಹಲವಾರು ಗೌರವ ಪ್ರಶಸ್ತಿಗಳನ್ನು ಪಡೆದಿದ್ದೇನೆ, ಆದರೆ, ಇಂದು ನೀವು ನೀಡಿದ ಗೌರವ ಪ್ರಶಸ್ತಿ ನನಗೆ ಅತ್ಯಂತ ಸಂತೋಷವನ್ನು ತಂದಿದೆ.
ಮನಸ್ಸಿಗೆ ಮುದ ನೀಡಿದೆ.
ಇದು ಅಲ್ಲದೆ, ಹಿರಿಯ ಕಲಾವಿದರನ್ನು, ಸಾಧಕರನ್ನು ಗುರುತಿಸಿ ಗೌರವಿಸಿ, ಪ್ರಶಸ್ತಿ ಪ್ರದಾನ ಮಾಡಿದ ನಿಮಗೆಲ್ಲರಿಗೂ ಅಭಿನಂದನೆಗಳು.
ನಿಮ್ಮ ವಿಶೇಷ ಸಾಧನೆ, ಯೋಚನೆ,ಯೋಜನೆಗಳು ಸಫಲವಾಗಲಿ.ಮುಂದಿನ ಯುವ ಪೀಳಿಗೆಗೆ,ಯುವ ಕಲಾವಿದರಿಗೆ ಸ್ಫೂರ್ತಿಯಾಗಲಿ.. ಎಂದು ಶುಭ ಹಾರೈಸಿದರು.
ಅದೇ ರೀತಿಯಾಗಿ ಸಾಧಕರ ಶ್ರೇಷ್ಠ ಕಲಾ ಸಾಧಕರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಕಲಾವಿದರು, ವರ್ಣ ಶಿಲ್ಪಿ ಕೆ ವೆಂಕಟಪ್ಪ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ
*”ಶ್ರೀ ಮಹಾವೀರ.ರಾಯಪ್ಪ. ಬಾಳಿಕಾಯಿ “*
ಮಾತನಾಡಿ…
ಈ ಸಮಾರಂಭದಲ್ಲಿ ಭಾಗವಹಿಸಿ, ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದ ನನಗೆ ಅತ್ಯಂತ ಸಂತೋಷವನ್ನು ನೀಡಿದೆ.ಖುಷಿಯಾಗಿದೆ.
ಏನು ಹೇಳಬೇಕು ಗೊತ್ತಾಗುತ್ತಿಲ್ಲ.ಸಂತೋಷಕ್ಕೆ ಮಾತುಗಳು ಬರುತ್ತಿಲ್ಲ.
ನಾಡಿನ ಸಂಸ್ಕೃತಿ ,ಪರಂಪರೆ ಉಳಿಯಲು ಕಲಾವಿದರ ಕೊಡುಗೆ ಬಹು ಮುಖ್ಯ.
ಅಂತಹ ಶ್ರೇಷ್ಠ ಆಲೋಚನೆಯಿಂದ ನೀವೆಲ್ಲ ಕಲಾವಿದರು ಸೇರಿ ಬೆಂಗಳೂರಿನಂತಹ ನಗರಗಳಲ್ಲಿ ಕಲಾಗ್ರಾಮ ಮಾಡಲು ಹೊರಟಿದ್ದು ಸಂತೋಷ, ಅದು ಒಳ್ಳೆಯ ಆಲೋಚನೆ ಕೂಡ ಹೌದು.
ಹಲವಾರು ಕಲಾವಿದರ ನೆಲೆಗೆ ದಾರಿ ಕಲ್ಪಿಸುವ ನಿಮ್ಮ ಗುರಿ ಕನಸು ಈಡೇರಲಿ.
ಶುಭವಾಗಲಿ ಎಂದು ಹಾರೈಸಿದರು.
ಜೀವಮಾನದ ಶ್ರೇಷ್ಠ ಕಲಾ ಸಾಧಕರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಕಲಾವಿದರು ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ
*”ಶ್ರೀಮತಿ ಪ್ರಭಾ ಮಲ್ಲೇಶ್”*
ಅವರು…
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನನಗೆ ವಿಶೇಷ ಗೌರವ ಪ್ರಶಸ್ತಿಯನ್ನು ನೀಡಿದ್ದು,
ತುಂಬಾ ಸಂತೋಷ ನೀಡಿದೆ.
ಅಷ್ಟೇ ಹೆಮ್ಮೆ ಅನಿಸುತ್ತದೆ.
ತಮಗೆಲ್ಲರಿಗೂ ಚಿರಋಣಿ.
ಈ ಸಂಸ್ಥೆಯ ಕನಸು ಈಡೇರಲಿ, ಶುಭವಾಗಲಿ.ಎಂದು ಹಾರೈಸಿದರು.
ಸಮಾರಂಭದಲ್ಲಿ ಭಾಗವಹಿಸಿ,ಗೌರವ ಸ್ವೀಕರಿಸಿದ, ಪ್ರಮೋಷನ್ ಆಫ್ ಹೌಸಿಂಗ್ ಮತ್ತು
ಕನ್ಸ್ಟ್ರಕ್ಷನ್ ಮಾಲಿಕರಾದ
*”ಶ್ರೀ ಎ .ಎಲ್. ಮುರಳೀಧರ್”*
ಅವರು ಮಾತನಾಡಿ…
ಇಂದು ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಹಿರಿಯ ಕಲಾವಿದರನ್ನು ಗುರುತಿಸಿ, ಗೌರವಿಸಿ, ಸಾಧಕರಿಗೆ ಗೌರವ ಪ್ರಶಸ್ತಿಯನ್ನು ನೀಡುವುದರ ಮೂಲಕ, ನಿಮ್ಮ ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಿಮಗೆಲ್ಲರಿಗೂ ಅಭಿನಂದನೆಗಳು.
ನಿಜಕ್ಕೂ ನಿಮ್ಮ ದೂರ ದೃಷ್ಟಿಕೋನ ಒಳ್ಳೆಯದು.
ಕಲಾವಿದರ ಬದುಕಿಗೆ ಆಸರೆಯಾಗುವ ನಿಮ್ಮ ವಿಶೇಷ ಗುರಿ, ಕನಸು ಈಡೇರಲಿ.
ನೀವು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಬನ್ನಿ, ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಕಲಾ ಗ್ರಾಮವನ್ನು ನಿರ್ಮಾಣ ಮಾಡಿ ಕೊಡುವೆ,
ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ಹಾಗೂ ಪ್ರೋತ್ಸಾಹ ನೀಡುವೆ.
ನಮ್ಮೆಲ್ಲ ಕೆಲಸಕ್ಕೆ ಭಗವಂತನ ಅನುಗ್ರಹ ಬೇಕು.ನಿಮಗೆಲ್ಲರಿಗೂ ಗುರು ಹಿರಿಯರ ಹಾಗೂ ಭಗವಂತನ ಅನುಗ್ರಹ ಸದಾ ಕಾಲ ನಿಮ್ಮ ಮೇಲಿರಲಿ.ನಿಮಗೆ ಶುಭವಾಗಲಿ…ಎಂದರು.
ಚಲನಚಿತ್ರ ನಟಿ ಮತ್ತು ಭರತನಾಟ್ಯ ಕಲಾವಿದೆ *”ಕುಮಾರಿ.ಸಂಜನಾ ದ್ವಿವೇದಿ”*
ಮಾತನಾಡಿ…
ಎಲ್ಲರಿಗೂ ಮನದಾಳದ ವಂದನೆಗಳು.
ಸಾಧಕರನ್ನು, ಗಣ್ಯರನ್ನು, ಕಲಾವಿದರನ್ನು ಆಹ್ವಾನಿಸಿ ಗೌರವಿಸಿದ ಈ ಸಂಸ್ಥೆಯ ವಿಶೇಷ ಕಾರ್ಯ ಶ್ಲಾಘನೀಯ.
ಇಂತಹ ಮೇರು ವ್ಯಕ್ತಿತ್ವದ ಸಾಧಕರ ಜೊತೆಗೆ ಈ ಸಮಾರಂಭದಲ್ಲಿ ಭಾಗವಹಿಸಿದ್ದು,ಗೌರವ ಸ್ವೀಕರಿಸಿದ್ದು ನನಗೆ ಅತ್ಯಂತ ಸಂತೋಷವನ್ನು ತಂದಿದೆ.
ಹೆಮ್ಮೆ ಕೂಡ ಹೌದು.
ಎಲ್ಲರಿಗೂ ಶುಭವಾಗಲಿ,
ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷತೆಯ ನುಡಿಗಳನ್ನಾಡಿದ ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷರಾದ *”ಡಾ.ಬಿ.ಜಿ.ಅವಟಿ”*
ಯವರು ಮಾತನಾಡಿ…
ಇಂದು ನನಗೆ ಅತ್ಯಂತ ಸಂತೋಷವಾಗುತ್ತಿದೆ.
ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಮ್ಮ ಕನಸು ನನಸಾಗುತ್ತದೋ,ಇಲ್ಲವೋ ಎಂದು ಆತಂಕವಾಗಿತ್ತು.
ಇಂದು ಎಲ್ಲಾ ಹಿರಿಯ ಸಾಧಕರ ಕೃಪೆಯಿಂದ ಟ್ರಸ್ಟ್ ಉದ್ಘಾಟನೆ ಆಗುತ್ತಿರುವುದು ಖುಷಿ ತಂದಿದೆ.
ನಾಡಿನ ಹಲವಾರು ಚಿತ್ರ ಕಲಾವಿದರ ಬದುಕಿಗೆ ಆಸರೆಯಾಗುವ, ಬೆಳಕಾಗುವ ಕಲಾಗ್ರಾಮವನ್ನು ನಿರ್ಮಿಸಿ, ಇಡೀ ಕರ್ನಾಟಕ ಮಾತ್ರವಲ್ಲ, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಲಾಗ್ರಾಮ ಗುರುತಿಸಿಕೊಳ್ಳಬೇಕು.
ಮಾದರಿಯಾಗಬೇಕು, ಎಂಬುದು ನಮ್ಮ ದೊಡ್ಡ ಮಟ್ಟದ ಕನಸು ಮತ್ತು ಗುರಿ.
ಅಷ್ಟೇ ಅಲ್ಲ.ದೂರದೃಷ್ಟಿಕೋನ ಕೂಡ ಹೌದು.
ಎಲ್ಲಾ ಹಿರಿಯ ಕಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಆಗುವುದರ ಜೊತೆಗೆ ಮಾರಾಟವಾದರೆ ಕಲಾವಿದರ ಬದುಕಿಗೆ ಆಸರೆಯಾಗುತ್ತದೆ.ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತದೆ ಎಂಬುದು ನಮ್ಮ ಉದ್ದೇಶ.
ಆ ನಿಟ್ಟಿನಲ್ಲಿ ನನ್ನೊಂದಿಗೆ ನನ್ನ ಆತ್ಮೀಯ ಎಲ್ಲಾ ಹಿರಿಯ ಕಿರಿಯ ಕಲಾವಿದರನ್ನು, ಸಾಧಕರನ್ನು ಸೇರಿಸಿ,
ಈ ಟ್ರಸ್ಟ್ ನ ಸ್ಥಾಪಿಸಿ, ಇಂದು ಹಿರಿಯ ಸಾಧಕರನ್ನು, ಗಣ್ಯರನ್ನು, ಕಲಾವಿದರನ್ನು ಆಹ್ವಾನಿಸಿ, ಟ್ರಸ್ಟ್ ಉದ್ಘಾಟನೆ ವೆಬ್ಸೈಟ್ ಉದ್ಘಾಟನೆ ಚಿತ್ರಕಲಾ ಪ್ರದರ್ಶನ ಮಾಡುತ್ತಿರುವುದು ಅತ್ಯಂತ ಸಂತೋಷವನ್ನು ತಂದಿದೆ.ಅಷ್ಟೇ ಹೆಮ್ಮೆ ಅನಿಸುತ್ತದೆ.
ಇದಕ್ಕೆಲ್ಲ ನಿಮ್ಮಂತಹ ಸಹೃದಯರ, ಹಿರಿಯ ಕಲಾವಿದರ, ಸಾಧಕರ ಹಾರೈಕೆಗಳು, ಸಹಕಾರ ಹಾಗೂ ಪ್ರೋತ್ಸಾಹ ಬೇಕೆ ಬೇಕು.
ನನ್ನೊಂದಿಗೆ ಈ ಅದ್ಭುತವಾದ ಕೆಲಸಕ್ಕೆ ಕೈ ಜೋಡಿಸಿ, ಹಗಲು ಇರುಳು ಜೊತೆಯಲ್ಲಿರುವ ಎಲ್ಲಾ ಪದಾಧಿಕಾರಿಗಳಿಗೆ ಮನದಾಳದ ವಂದನೆಗಳು.
ಹೀಗೆ ಸದಾಕಾಲ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಹೀಗೆಯೇ ಇರಲಿ.
ಜೀವಮಾನದ
*”ಶ್ರೇಷ್ಠ ಕಲಾ ಸಾಧಕರ ಪ್ರಶಸ್ತಿ”*
ಯನ್ನು ಸ್ವೀಕರಿಸಿದ ಎಲ್ಲಾ ಸಾಧಕರಿಗೆ ಹೃದಯ ಪೂರ್ವಕ ಅಭಿನಂದನೆಗಳು.
ಈ ಪ್ರಶಸ್ತಿಯನ್ನು ಪ್ರತಿವರ್ಷ ನೀಡಬೇಕು, ನಾಡಿನ ಖ್ಯಾತ ಹಿರಿಯ ಚಿತ್ರಕಲಾವಿದರನ್ನು ಗುರುತಿಸಬೇಕು, ಗೌರವಿಸಬೇಕು ಎಂಬುದು ನಮ್ಮ ಆಶಯ.
ನಮ್ಮ ಈ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ನಮನಗಳು.
ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ
*”ಶ್ರೀ ಬಿ .ಎಸ್. ದೇಸಾಯಿ”* ಅವರು ಸ್ವಾಗತವನ್ನು ಕೋರಿದರು.
ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿಗಳಾದ *”ಡಾ.ಅಪ್ಪಾಸಾಹೇಬ್ ಗಾಣಿಗೇರ”*
ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಹಿತಿಗಳು ಮತ್ತು ಸಾಂಸ್ಕೃತಿಕ ಚಿಂತಕರಾದ *”ಡಾ.ವೆಂಕಟೇಶ್ ಆರ್ ಚೌಥಾಯಿಯವರು”* ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಟ್ರಸ್ಟಿಗಳು ಹಾಗೂ ಕಲಾವಿದರಾದ
*”ಶ್ರೀ ಅಚ್ಯುತಾನಂದ ಬಡಿಗೇರವರು”* ಪ್ರಾರ್ಥನಾ ಗೀತೆಯನ್ನು ಹಾಡಿದರು.
ವಂದನಾರ್ಪಣೆಯನ್ನು ಸಹ ಕಾರ್ಯದರ್ಶಿಗಳು ಹಾಗೂ ಕಲಾವಿದರಾದ
*” ಶ್ರೀ ಶಂಕರಾಚಾರಿ ಕೆ ಎ”* ಅವರು ಮಾಡಿದರು.
ಚಿತ್ರಕಲಾ ಪ್ರದರ್ಶನದ ಹಾಗೂ ಸಾಧಕರಿಗೆ ಗೌರವ ಪ್ರಶಸ್ತಿ,ನೆನಪಿನ ಕಾಣಿಕೆಗಳನ್ನು
ಟ್ರಸ್ಟಿಗಳು ಹಾಗೂ ಖ್ಯಾತ ಚಿತ್ರಕಲಾವಿದರಾದ
*”ಶ್ರೀ ಗೋವರ್ಧನ್ ಕೆ”* ಅವರು ಸಿದ್ಧಪಡಿಸಿದರು.
ಸಮಾರಂಭದ ವೇದಿಕೆಯನ್ನು *”ಶ್ರೀ ಎಂ ಎಂ ಜೀನೇಂದ್ರ”* ಅವರು ಸಿದ್ಧಪಡಿಸಿದರು.
ಕಾರ್ಯಕ್ರಮದ ಸರ್ವಸಿದ್ಧತೆಯಲ್ಲಿ ಭಾಗವಹಿಸಿ, ಸಹಕಾರ ನೀಡಿದವರು…
ಟ್ರಸ್ಟ್ ನ ಪದಾಧಿಕಾರಿಗಳಾದ..
ಶ್ರೀಮತಿ ಶೋಭ ಆರ್, ಶ್ರೀಮತಿ ಪ್ರತಿಭಾ ಗಣೇಶ್ ದೊಡ್ಡಮನಿ, ಶ್ರೀ ವೀರಯ್ಯ ವಂಟಿಗೋಡಿಮಠ, ಶ್ರೀ ಅಶೋಕ್ ನಾಗೇಶ್ ನಾಯಕ್, ಶ್ರೀ ರಾಜೇಶ್ ದೇವಣಗಾಂವ್.
ವಿಶೇಷ ಕಾರ್ಯಕ್ರಮದಲ್ಲಿ
ಸಾಹಿತಿಗಳು, ಕಲಾವಿದರಾದ ಶ್ರೀ ರಮೇಶ್ ಗುರುಗಳು,
ಸಮಾಜ ಸೇವಕರಾದ ಶ್ರೀ ಸಿದ್ಧಲಿಂಗಮೂರ್ತಿಗಳು,
ಚಲನಚಿತ್ರ ನಿರ್ಮಾಪಕರಾದ ಶ್ರೀ ರಂಗಸ್ವಾಮಿಯವರು,
ಖ್ಯಾತ ಚಲನಚಿತ್ರ ನಿರ್ದೇಶಕರು, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ವಿಕ್ಟರಿ ವಾಸುರವರು,
*”ಒಳಿತು ಮಾಡು ಮನುಷ”* ಗೀತೆ ರಚನೆಕಾರರು ಮತ್ತು ಕಲಾವಿದರಾದ ಶ್ರೀ ನಮ್ ಋಷಿರವರು,
ಸಾಂಸ್ಕೃತಿಕ ರಂಗದ ಅಧ್ಯಕ್ಷರಾದ ಶ್ರೀ ಡಿ.ಸಿದ್ಧರಾಜರವರು,
ಕೂಡಲಸಂಗಮ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಎಸ್ ಎಸ್ ಬಿರಾದಾರವರು, ಉಪಾಧ್ಯಕ್ಷರಾದ ಶ್ರೀ ಶರಣಬಸಪ್ಪ ಗೌಡರವರು,
ಕವಿಗಳಾದ ಶ್ರೀ ಮಾರುತಿ ವಡಗೆರೆಯವರು.
ಉತ್ತರ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುನೀಲ್ ಕುಮಾರ್ ಅವರು,
ಪತ್ರಿಕಾ ಮಾಧ್ಯಮ ಮಿತ್ರರು,
ಕರ್ನಾಟಕ ಚಿತ್ರಕಲಾ ಪರಿಷತ್ ನ ಸರ್ವ ಸದಸ್ಯರು,
ಹಿರಿಯ ಮತ್ತು ಕಿರಿಯ ಕಲಾವಿದರು,
ಕಾರ್ಯಕ್ರಮದಲ್ಲಿ ಭಾಗವಹಿಸಿ,
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.





