ಸಿರಿಗೇರಿ ಹೋಬಳಿ ಮಟ್ಟದ ಕೊಂಚಿಗೇರಿ, ಸಿರಿಗೇರಿ,ಮುದ್ದಟನೂರು, ನಡವಿ ಹಾಗೂ ಶಾನವಸಪುರ ಸೇರಿದಂತೆ ಸಿರಿಗೇರಿ ಗ್ರಾಮದ ಬಹುತೇಕ ಶಾಲೆಗಳಲ್ಲಿ ರೇಣುಕಾಚಾರ್ಯರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿರಿಗೇರಿ ಪಿಡಿಒ ಪೀರಾಹುಸೇನ್ ಸಾಬ್ ಆದಿ ಜಗದ್ಗುರು ರೇಣುಕಾಚಾರ್ಯರು ಮಾನವ ಕುಲದ ಉದ್ಧಾರಕರಾಗಿ ಅವತರಿಸಿದ ಮಹಾಮಹಿಮರು. ಅವರ ವಿಚಾರಗಳು ದೇಶ ಭಾಷೆ ಜಾತಿ ಮತವನ್ನು ಮೀರಿದವಗಳಾಗಿ ಮಾನವ ಕುಲಕ್ಕೆ ಸರ್ವಧರ್ಮದ ಆದರ್ಶ ಪ್ರಿಯರಾಗಿದ್ದರು. ಅವರ ಮಾನವೀಯತೆಯ ಮೌಲ್ಯವನ್ನು ನಾವುಗಳು ಅನುಸರಿಸಿಕೊಂಡು ಹೋಗಬೇಕಾಗಿದೆ ಎಂದರು.
ತದನಂತರ
ಬಳ್ಳಾರಿ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್ಎಂ ನಾಗರಾಜಸ್ವಾಮಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಸಾವಿರಾರು ವರ್ಷಗಳ ಹಿಂದೆಯೇ ಸಮಾನತೆಯ ಹರಿಕಾರರಾಗಿ “ಮಾನವ ಧರ್ಮಕ್ಕೆ ಜಯವಾಗಲಿ” “ಧರ್ಮದಿಂದಲೇ ವಿಶ್ವಕ್ಕೆ ಶಾಂತಿ”ಎನ್ನುವ ಶಾಂತಿ ಸಮಾನತೆಯ ಮಂತ್ರವನ್ನು ಇಡೀ ಸಮಾಜಕ್ಕೆ ಸಾರಿದವರು. ಅವರು ಬಿಟ್ಟು ಹೋಗಿರುವ ಆದರ್ಶ ಸಮಾನತೆ, ಸಂಸ್ಕಾರ, ಧರ್ಮ, ಇವುಗಳನ್ನು ಅನುಸರಿಸಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಚ್ ಎಮ್ ಮಲ್ಲಿಕಾರ್ಜುನ ಸ್ವಾಮಿ, ಮಾತನಾಡಿ ಇಂತಹ ಶರಣರು ಕಟ್ಟಿದ ಸಮ ಸಮಾಜವನ್ನು ಉಳಿಸಿ ಬೆಳೆಸುವ ಕೆಲಸ ಮಾಡೋಣ ಎಂದರು, ಪತ್ರಕರ್ತ ವಿ. ಶಿವರಾಂ ಮಾತನಾಡಿ, ಇಂತಹ ಮಹಾತ್ಮರ ಜಯಂತಿಯ ಆದರ್ಶ ಗುಣಗಳನ್ನು ಸಮಾಜದ ಹಿರಿಯರು ಇಂದಿನ ಯುವ ಪೀಳಿಗೆಯ ಮಕ್ಕಳಿಗೆ ಬೋಧಿಸುವ ಸಂಸ್ಕಾರ ಕಲಿಸುವ ಕೆಲಸ ಆಗಬೇಕು ಎಂದು ಮಾತನಾಡಿದರು.
ಜಯಂತಿಯಲ್ಲಿ ಗ್ರಾಮದ ಹಿರಿಯ ಮುಖಂಡರಾದ ಸಿಎಂ ನಾಗರಾಜಸ್ವಾಮಿ, ಎಸ್. ಎಮ್. ಅಡಿವೆಯ್ಯ ಸ್ವಾಮಿ, ಬಿ. ಸೋಮಶೇಖರಪ್ಪ, ಬಿ ನಾಗೇಂದ್ರ, ಬಕಾಟೆ ಈರಯ್ಯ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ಧರಾಮಪ್ಪ. ಕುಂಬಾರ್ ಬಸವರಾಜ್, ಸದ್ದಾಂ, ವಿ. ರೇಣುಕಪ್ಪ, ಸಿಎಂ ನಟರಾಜ, ರಾಜಶೇಖರ ಶಾಸ್ತ್ರಿ, ಕೆ ಹೇಮಣ್ಣ, ಅಜಾತ ಮೂರ್ತಿ, ವಿ .ಹನುಮೇಶ್, ಪಂಚಾಯತಿ ಸಿಬ್ಬಂದಿಯವರಾದ ಬಿ. ರುದ್ರೇಶ್, ನಾಗರಾಜ್, ಹುಲಗಪ್ಪ, ಹುಲಿಯಪ್ಪ, ಹಾಗೂ ಎಲ್ಲಾ ಸಮಾಜದ ಸಾರ್ವಜನಿಕರು ಉಪಸ್ಥಿತರಿದ್ದರು.






