ಸಿರಿಗೇರಿ : ಸಮೀಪದ ಉತ್ತನೂರು ಗ್ರಾಮದ ಭಕ್ತಾದಿಗಳು ಗಾದಿಲಿಂಗಪ್ಪ ತಾತನ ಜಾತ್ರ ಪ್ರಯುಕ್ತ 11ನೇ ವರ್ಷದ ಅನ್ನ ದಾಸೋಹ ಕಾರ್ಯಕ್ರಮ ನಡೆಸಿದರು. ಜಾತ್ರೆಗೆ ಹೋಗುವ ಟ್ರ್ಯಾಕ್ಟರ್ ಬೈಕ್ ವಾಹನಗಳನ್ನು ನಿಲ್ಲಿಸಿ ಸಾವಿರಾರು ಜನರಿಗೆ ಉಗ್ಗಿ ಅನ್ನ ಸಾಂಬಾರು ಮಜ್ಜಿಗೆ ಚಟ್ನಿ ಬದನೆಕಾಯಿ ಅಚ್ಚುಕಟ್ಟಾಗಿ ಮಾಡಿ ಯಾರು ಕೂಡ ಹಾಗೆ ಹೋಗಬಾರದು. ಹಸಿದವರಿಗೆ ಹೊಟ್ಟೆ ತುಂಬ ಊಟ ಬಡಿಸಿ ವ್ಯವಸ್ಥಿತವಾಗಿ 11 ವರ್ಷದಿಂದ ಉತ್ತನೂರು ಎಲ್ಲಾ ಭಕ್ತಾದಿಗಳಿಂದ ದೇಣೆಗೆ ಪಡೆದು ಅಚ್ಚುಕಟ್ಟಾಗಿ ದಾಸೋಹ ವ್ಯವಸ್ಥೆ ಮಾಡಿರುವುದು ಮುಖ್ಯಸ್ಥರು ಶ್ರೀ ಕೆ ಶಿವಮೂರ್ತಿ ಶ್ರೀ ಉತ್ತರೇಶ ಶ್ರೀ ನಾಗರಾಜ ಶ್ರೀ ಮರಿಯಪ್ಪ ಶ್ರೀ ಗಾದಿಲಿಂಗಪ್ಪ ಶ್ರೀ ಜಡೆಪ್ಪ, ಗ್ರಾಪಂ ಕಾರ್ಯದರ್ಶಿ ಶಿವಮೂರ್ತಿ ಸೇರಿದಂತೆ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಸುಮಾರು ನೂರಾರು ಜನ ಕರ್ನಾಟಕ ಗಡಿ ಭಾಗದ ಗುಳೇವು ಗಾಲಿಂಗಪ್ಪ ಭಕ್ತಾದಿಗಳು ದಾಸೋಹ ಸೇವಿಸಿ ಗಾದಿಲಿಂಗಪ್ಪ ತಾತನ ಕೃಪೆಗೆ ಪಾತ್ರರಾದರು.






