ಸಿರಿಗೇರಿ : ಫೆ23
ವಿವೇಕಾನಂದ ವಿದ್ಯಾ ಸಂಸ್ಥೆ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಗಳಿಂದ ಅತಿಹೆಚ್ಚಿನ ಫಲಿತಾಂಶ ಹೊರಬರಲಿ. ಈ ಶಾಲೆಯ ಅಚ್ಚುಕಟ್ಟಾದ ಕಾರ್ಯಕ್ರಮ ನೋಡಿ ಸಂತೋಷವಾಗುತ್ತಿದೆ. ಇದೇ ರೀತಿ ಮಕ್ಕಳು ಶಾಲೆಗೆ ಕೀರ್ತಿಯನ್ನು ತರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಗುರಪ್ಪರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯೆಯೆಂಬುದು ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸುವ ಮಾರ್ಗದರ್ಶಿಯಾಗಬೇಕು. ವಿದ್ಯೆಯೆಂಬುದಿದ್ದರೆ ಜಗತ್ತನ್ನೇ ಗೆಲ್ಲಬಹುದು. ವಿದ್ಯೆ ಇಲ್ಲದೇ ಹೋದರೆ ಜೀವನ ನಶ್ವರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಲೆಯ ಮುಖ್ಯಗುರುಗಳಾದ ಎಸ್.ಎನ್. ಪಂಪಾಪತಿ ಮಾತನಾಡಿ ಇಂದಿನ ಕನ್ನಡ ಮಾಧ್ಯಮ ಶಾಲೆ ನಡೆಸುವುದು ಮುಳ್ಳಿನ ಹಾಸಿಗೆ ಮೇಲೆ ನಡೆದಂತೆ, ನಮ್ಮ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ, ಇಂಗ್ಲಿಷ್ ಮಾಧ್ಯಮ ಜೊತೆ ಪೈಪೋಟಿ ಕೊಟ್ಟು ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಪಡೆದು ನಮ್ಮ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಅವರನ್ನು ಹಿಂದೆ ಹಾಕಿ ಉನ್ನತ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ಕನ್ನಡ ತಾಯಿ ಭಾಷೆಯನ್ನು ಕೊಂಡಾಡಿದರು.
ತದನಂತರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಉಪ ಕಾರ್ಯದರ್ಶಿ ಸಿ.ಎಂ. ಚನ್ನಯ್ಯಸ್ವಾಮಿ 35 ವರ್ಷಗಳಿಂದ ಈ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದರು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳೊಂದಿಗೆ ವಿವಿಧ ಸಾಂಸ್ಕೃತಿಕ, ನೃತ್ಯ ಕನ್ನಡ ಗೀತೆ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಹೆಚ್. ದುರ್ಗಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕ ಎಸ್.ಎಂ ನಾಗರಾಜಸ್ವಾಮಿ, ಬಸವ ಬಳಗ ಅಧ್ಯಕ್ಷ ಕೆ. ಶಶಿಧರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಬಿ .ಆರ್. ಶಿವಕುಮಾರ್, ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹೊಳಗುಂದಿ ಲಕ್ಷ್ಮಿ ದ್ಯಾವಣ್ಣ, ಗ್ರಾಮದ ಮುಖಂಡರಾದ ಎಸ್. ಎನ್ ವಿರುಪಾಕ್ಷಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಸೋಮಶೇಖರಪ್ಪ, ಉಪಾಧ್ಯಕ್ಷ ಡಿ. ಚಿನ್ನಪ್ಪ, ಶಂಭಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹೂಗಾರ್ ಬಸವರಾಜ್, ಸಂಸ್ಥೆಯ ಖಜಾಂಚಿ ಗೋಡೆ ವಿರೇಶಪ್ಪ, ಸದಸ್ಯ ,ಗೋಡೆ ಪಂಪಾಪತಿ, ದರೂರು ಬಸವರಾಜ್,
ಹಳೆಯ ವಿದ್ಯಾರ್ಥಿ ಜೆ. ಚಂದ್ರಶೇಖರ್, ದಾನಿಗಳಾದ ಅಮರೇಶ್ ಹಾಗೂ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಮತ್ತು ಬಿ. ಅಜ್ವಾನ್ ಹುಸೇನ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಕೆಇಬಿ ಅಂಬರೀಶ್ ಧರ್ಮಪತ್ನಿ ಆರೋಗ್ಯ ಇಲಾಖೆಯ ಲಕ್ಷ್ಮಿ , ಹಾಗೂ ಎಚ್. ದುರ್ಗಪ್ಪ, ಬಿ ಆರ್ ಶಿವಕುಮಾರ್, ಜೆ. ಚಂದ್ರಶೇಖರ್, ಬಿ. ಅಜ್ವಾನ್ ಹುಸೇನ್, ಇವರುಗಳಿಗೆ ಹಾಗೂ ಹಾಗೂ 2024- 25ನೇ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳಾದ ಪ್ರಥಮ: ಬಿ. ನಂದಿನಿ, ದ್ವಿತೀಯ: ಎಂ. ದೊಡ್ಡಬಸವ ಇವರುಗಳಿಗೆ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಬಿ. ಶಿವಕುಮಾರ್ ಸ್ವಾಗತಿಸಿ ನಿರ್ವಹಿಸಿದರು.






