ಗುಡಿಬಂಡೆ ಮಾರ್ಚ್ 15 ರಂದು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ.ಅವಧಿಯಲ್ಲಿ ಎಸೆಸೆಲ್ಸಿ ಪ್ರಮುಖ ತಿರುವು ಎಂದು ಹೇಳಬಹುದು ವಿದ್ಯಾರ್ಥಿಗಳು ಪರೀಕ್ಷೆ ಹೇಗೆ ಬರೆಯಬೇಕೆಂಬುದು ಚಿಂತೆ ಬಿಟ್ಟು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸುವುದೇ ವಿದ್ಯಾರ್ಥಿಗಳ ಲಕ್ಷಣವಾಗಿರುತ್ತದೆ ಎಂದು ಉರ್ದು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಮೊಹಮ್ಮದ್ ನಾಸಿರ್ ಸಲಹೆ ನೀಡಿದರು

ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆ ಎಂದು ಕೂಡಲೇ ಅನೇಕ ವಿದ್ಯಾರ್ಥಿಗಳು ಭಯಪಡುತ್ತಾರೆ
ಭಯದಿಂದ ಪರೀಕ್ಷೆಯನ್ನು ಸಮಯಕ್ಕೆ ಸರಿಯಾಗಿ ಬರೆಯುವುದಿಲ್ಲ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಭಯಪಡದೆ ಕಠಿಣ ಪರಿಶ್ರಮದಿಂದ ಓದಬೇಕು ಮನಸಿಟ್ಟು ಓದಿದರೆ ಮಾರ್ಗ ಎಂದು ಓದುವ ಸಮಯದಲ್ಲಿ ಮೊಬೈಲ್ ಟಿವಿ ಗಳಿಗೆ ದಾಸರಾಗಬಾರದು ಇದೀಗ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆದು ರಾಜ್ಯಮಟ್ಟದಲ್ಲಿ ಹೆಸರು ಗಳಿಸಬೇಕೆಂದು ವಿಶ್ವಾಸ ವ್ಯಕ್ತಪಡಿಸಿದರು
ಮೊಬೈಲ್ ಟಿವಿ ವಿದ್ಯಾಭ್ಯಾಸಕ್ಕೆ ಎಷ್ಟು ಅನುಕೂಲವೇ ಅಷ್ಟೇ ಬಳಕೆ ಮಾಡಿ ಅನುವಶ್ಯಕವಾಗಿ ಸಮಯ ವ್ಯರ್ಥ ಮಾಡಿ ಬೇಡಿ ಒಳ್ಳೆಯ ಫಲಿತಾಂಶ ಪಡೆದು ಕೊಂಡು ಊರಿಗೆ ಶಾಲೆಗೆ ತಾಲೂಕು ಜಿಲ್ಲಾ ಮಟ್ಟಕ್ಕೆ ಒಳ್ಳೆ ಹೆಸರು ತಂದು ಕೊಡಬೇಕೆಂದು ಸಲಹೆ ನೀಡಿದರು ಈ ಸಂದರ್ಭದಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.






