ಗುಡಿಬಂಡೆ ಜೂನ್ 6 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೃಷಿ ಇಲಾಖೆ ವತಿಯಿಂದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್ಎನ್ ಸುಬ್ಬಾರೆಡ್ಡಿ ಮಾತನಾಡಿ ಕೃಷಿ ಇಲಾಖೆಯಿಂದ ಸಹಾಯಧನ ರೂಪದಲ್ಲಿ ಬಿತ್ತನೆ ಬೀಜಯಾಗಲಿ, ರಸಗೊಬ್ಬರ ವಾಗಲಿ ಪ್ರತಿಯೊಬ್ಬ ರೈತರಿಗೂ ಅನುಕೂಲವಾಗುವಂತೆ ಮಾಡಿದ್ದು
ಪ್ರತಿ ರೈತರು ರಸಗೊಬ್ಬರಗಳನ್ನು ಪಡೆಯುವುದಕ್ಕೆ ನೂಕು ನುಗ್ಗಾಟಗಳನ್ನು ಬಿಟ್ಟು ತಾಳ್ಮೆಯಿಂದ ಸಹಕರಿಸಿ ಪಡೆಯುವಂತೆ ಸೂಚಿಸಿದರು ಸಿಗದಿದ್ದಲ್ಲಿ ಅಧಿಕಾರಿಗಳಿದ್ದಾರೆ ನಾನಿದ್ದೇನೆ ನಮ್ಮ ಗಮನಕ್ಕೆ ತನ್ನಿ ನಿಮಗೆ ಕೊಡಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದರು ಇನ್ನು ರಾಗಿ ಬೆಂಬಲ ಬೆಲೆ ಹಿಂದಿನ ವರ್ಷ 4 860 ರೂಗಳಿದ್ದು ಈಗ 5205 ರೋಗಗಳು ನಿಗದಿಪಡಿಸಿ 365 ರೂಗಳು ಹೆಚ್ಚಿಗೆ ಮಾಡಿ
ಬೆಂಬಲ ಬೆಲೆ ಪ್ರತಿ ರೈತರಿಗೂ ನೀಡುವ ನಿಟ್ಟಿನಲ್ಲಿ ಮುಂದಾಗಿದ್ದು ರೈತರು ದಲ್ಲಾಳಿಗಳ ಮರೆಹೋಗದೆ ಸರ್ಕಾರ ಬೆಂಬಲ ಘೋಷಿಸಿದ್ದು ಬೆಂಬಲ ಬೆಲೆಗೆ ಹಾಕಲು ರೈತರು ಮುಂದಾಗಬೇಕೆಂದು ತಿಳಿಸಿ ರೈತರನ್ನು ಕೆಲವು ದಳ್ಳಾಳಿಗಳು ಯಾಮಾರಿಸುವ ನಿಟ್ಟಿನಲ್ಲಿ 2500 ಯಿಂದ 3000 ತನಕ ರೈತರಿಂದ ಪಡೆದು ಅರ್ಧಕ್ಕೆ ಅರ್ಧ ಲಾಭ ಪಡೆಯುವ ನಿಟ್ಟಿನಲ್ಲಿ ದಲ್ಲಾಳಿಗಳು ಮುಂದಾಗುತ್ತಿದ್ದು ಇದನ್ನು ಕಡಿವಾಣ ಹಾಕಲು ಪ್ರತಿಯೊಬ್ಬ ರೈತರು ಕೈಜೋಡಿಸುವಂತೆ ಕೋರಿದರು
ಬೆಂಬಲ ಬೆಲೆಗೆ ಹಾಕಿರುವ ರಾಗಿಯನ್ನು ಹಣ ಬರುವುದು ವಿಳಂಬವಾದರೆ ನಮ್ಮ ಅಧಿಕಾರಿಗಳಿದ್ದಾರೆ ನಾವಿದ್ದೇವೆ ನಿಮ್ಮ ಹಣವನ್ನು ಕೊಡಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಇದೇ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಅಬೀದ್ ಮತ್ತು ತಾಸಿಲ್ದಾರರು ಸಹಾಯಕ ನಿರ್ದೇಶಕರಾದ ಕೇಶವ ರೆಡ್ಡಿ ತೋಟಗಾರಿಕೆ ಇಲಾಖೆ ದಿವಾಕರ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಬ್ರಮಣಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಕೃಷ್ಣಪ್ಪ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರಾದ ಆದಿ ರೆಡ್ಡಿ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ರೆಡ್ಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವಿಕಾಸ್ ನೌಕರರ ಸಂಘದ ಅಧ್ಯಕ್ಷರಾದ ಮುನಿಕೃಷ್ಣಪ್ಪ ಎಂ ಸಿ ಚಿಕ್ಕನರಸಿಂಹಪ್ಪ ಎಲ್ಲ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಮುಖಂಡರು ರೈತ ಮುಖಂಡರು ಹಾಜರಿದ್ದರು.






