ಗುಡಿಬಂಡೆ:- ಕಸಬಾ ಹೋಬಳಿ ಸೋಮಲಾಪುರ ಗ್ರಾಮದ ಸರ್ವೆ ನಂಬರ್ 1ರಲ್ಲಿ163ಎಕರೆ ವಿಸ್ತೀರ್ಣ ಸರ್ಕಾರಿ ಗೋಮಾಳ ಜಮೀನಿದ್ದು ಈ ಜಮೀನು ಬೆಟ್ಟ ಗುಡ್ಡಗಳಿಂದ ಆವರಿಸಿದ್ದು ಶಾಸಕ ಸುಬ್ಬಾರೆಡ್ಡಿ ಅಕ್ರಮವಾಗಿ ಸರ್ಕಾರಿ ಜಮೀನನ್ನು ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡು ಇದರ ಸೂತ್ತಮುತ್ತಾ ಬೃಹತ್ ಆಗಿ ತಡೆಗೋಡೆ ನಿರ್ಮಿಸಿಕೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ ಇದರಲ್ಲಿ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಈ ಬಗ್ಗೆ ಬೃಹತ್ ಹೋರಾಟ ಮಾಡುವುದಾಗಿ ಹಿರಿಯ ರಾಜಕೀಯ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಗಂಭೀರವಾಗಿ ಆರೋಪ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದು ಈ ರಸ್ತೆಗಳಿಗೆ ಕಾಯಕಲ್ಪ ಅಭಿವೃದ್ಧಿ ಮಾಡುವಲ್ಲಿ ಶಾಸಕರು ವಿಫಲರಾಗಿ ಸರ್ಕಾರದ ಸಿಎಂಜಿಎಸ್ ವೈ 3054 ಯೋಜನೆ 20,41000 ಅನುದಾನವನ್ನು ಶಾಸಕ ಸುಬ್ಬಾರೆಡ್ಡಿ ತನ್ನ ಮಾಲಿಕತ್ವದ ಜಮೀನೀನ ಬಳಿ ಟಾರ್ ರಸ್ತೆಯನ್ನು ಮಾಡಿಸಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಸ್ವಾರ್ಥ ರಾಜಕಾರಣಿಯಾಗಿದ್ದು ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಇವರು ಈ ಕೂಟದ ಅಧ್ಯಕ್ಷರಾಗಿದ್ದಾರೆ ಇವರ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಮದ್ಯದ ಮಳಿಗೆಗಳು ಹೆಚ್ಚಾಗಿವೆ ಇದರಲ್ಲಿ ಪಾಲುದಾರಿಕೆ ಬರುತ್ತದೆ ಕ್ಷೇತ್ರದಲ್ಲಿ ಹಾಲಿ ಶಾಸಕರು ಸಾಕಷ್ಟು ಅಕ್ರಮಗಳನ್ನು ಮಾಡಿದ್ದಾರೆ.
ಅವರ ವಿರುದ್ದ ನಾನು ಹೋರಾಟ ಮಾಡುತ್ತೇನೆ. ಅವರು ಯಾವುದೇ ಅಕ್ರಮಗಳನ್ನು ಮಾಡಿಲ್ಲ ಎಂದು ಸಾಬೀತು ಮಾಡಲಿ ಅಥವಾ ಒಂದೇ ವೇದಿಕೆಗೆ ಬರಲಿ ನಾನು ಚರ್ಚೆ ಮಾಡಲು ಸಿದ್ದನಿದ್ದೇನೆ. ಅವರ ವಿರುದ್ದ ಸಿಬಿಐ ತನಿಖೆ ಮಾಡಲು ನಾನು ಒತ್ತಾಯಿಸುತ್ತೇನೆ. ಕ್ಷೇತ್ರದಲ್ಲಿ ಸಾಕಷ್ಟು ಎಕರೆಗಳು ಜಮೀನನ್ನು ಅಕ್ರಮವಾಗಿ ಖರೀದಿ ಮಾಡಿದ್ದಾರೆ ಅವರ ವಿರುದ್ದ ಅಕ್ರಮಗಳನ್ನು ಹಂತ ಹಂತವಾಗಿ ಬಯಲು ಮಾಡುತ್ತೇನೆ. ನಾನು ಸ್ವಚ್ಚ ರಾಜಕಾರಣ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ ಹೊರತು ಹಣ ಅಥವಾ ಆಸ್ತಿ ಸಂಪಾದನೆ ಮಾಡುವುದಕ್ಕಲ್ಲ ಎಂದರು. ಸುಬ್ಬಾರೆಡ್ಡಿ ವಿರುದ್ಧ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಬಾಗೇಪಲ್ಲಿ-ಗುಡಿಬಂಡೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ, ಸದಾ ಜನರ ಬಳಿಯಿರುವ ನಾನು ಜನರ ಬಳಿಗೆ ಹೋಗಿ ಮತ ಹಾಕುವಂತೆ ಕೇಳಿಕೊಳ್ಳುತ್ತೇನೆ.
ಜನ ನನಗೆ ಆರ್ಶೀವಾದ ಮಾಡುತ್ತಾರೆ ನಾನು ಕ್ಷೇತ್ರದಲ್ಲಿ ನಿರಂತರವಾಗಿ ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಜನರ ಸಂಪರ್ಕ ಒಡನಾಟದೊಂದಿಗೆ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದೇನೆ. ಜನರಿಗೆ ನನ್ನ ಮೇಲೆ ಪ್ರೀತಿ ವಿಶ್ವಾಸ ಇದೆ . ಕಳೆದ ಚುನಾವಣೆಯಲ್ಲೂ ಸಹ ನಾನು ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದೆ. ಆದರೆ ಕೆಲವೊಂದು ಕಾರಣಗಳಿಂದ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾಯ್ತು. ಇದೇ ರೀತಿ ಪ್ರತಿ ಚುನಾವಣೆಯಲ್ಲೂ ನನಗೆ ಅನ್ಯಾಯವಾಗುತ್ತಿದೆ.
ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸ್ಥಳೀಯ ಮಟ್ಟದಿಂದ ಸಂಘಟನೆ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದು ನಿಷ್ಟಾವಂತ ಕಾರ್ಯಕರ್ತನಾದ ನಾನು ಪಕ್ಷಕ್ಕಾಗಿ ದುಡಿದಿದ್ದೆ, ಆದರೆ ಚುನಾವಣೆಯ ಕೊನೆಯ ಕ್ಷಣದಲ್ಲಿ ನನಗೆ ಟಿಕೆಟ್ ಕೈ ತಪ್ಪಿತ್ತು. ಆದ ಕಾರಣ ನಾನು ಚುನಾವಣೆಯಿಂದ ಹಿಂದೆ ಸರಿಯಬೇಕಾಯ್ತು. ಈ ಬಾರಿ ನಾನು ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಇನ್ನೂ ಈ ಬಾರಿ ನಾನು ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡುವುದಿಲ್ಲ. ಬದಲಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುತ್ತೇನೆ.
ಕೆಲವೊಂದು ವೈಯುಕ್ತಿಕ ಕಾರಣಗಳಿಂದ ನಾನು ಕ್ಷೇತ್ರದಲ್ಲಿ ಸರಿಯಾಗಿ ಕಾಣಿಸಿಕೊಂಡಿಲ್ಲ, ಇನ್ನೂ ಸದಾ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆನೆ ಎಂದರು.
.ಬೆಂಬಲಿಗರಾದ ಸೀತಾರಾಮಪ್ಪ, ವರ್ಲಕೊಂಡ ದೇವರಾಜು .ಕೆ.ಎ.ನರಸಿಂಹರೆಡ್ಡಿ, ಸುಜಾತಮ್ಮ,ಸುರೇಶ್ ರೆಡ್ಡಿ.ಸೇರಿದಂತೆ ಮತ್ತಿತರರು ಹಾಜರಿದ್ದರು.






