ಬೆಂಗಳೂರು: ಆ.16: ಜಯಮಹಲ್ ರಸ್ತೆಯಲ್ಲಿರುವ ಎಂ.ಕೆ.ಕೆ. ಕನ್ಸ್ಟ್ರಕ್ಷನ್ ಸಂಸ್ಥೆಯ ವತಿಯಿಂದ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಂಸ್ಥೆಯ ವತಿಯಿಂದ ಬಿಎಲ್‌ಒಗಳು ಹಾಗೂ ಪೌರಕಾರ್ಮಿಕರಿಗೆ ಊಟ ಮತ್ತು ಸಿಹಿ ವಿತರಿಸುವ ಮೂಲಕ ವಿಶೇಷವಾಗಿ ಗೌರವಿಸಲಾಯಿತು. ಸಮಾಜದ ಸ್ವಚ್ಛತೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರು ಮತ್ತು ಚುನಾವಣಾ ಕರ್ತವ್ಯ ನಿರ್ವಹಿಸುವ ಬಿಎಲ್‌ಒಗಳ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ನಾಸೀರ್ ಅಹಮದ್, ಖಾದ್ರಿಯಾ ಮಸೀದಿಯ ಇಮಾಮ್ ಹಾರೂನ್ ಸಾಬ್, ಸೈಯದ್ ಮುಬಾರಕ್ ಮತೀನ್ – ಪ್ರಧಾನ ಕಾರ್ಯದರ್ಶಿ, ಮೊಹಮ್ಮದ್ ಖಾನ್ – ಎಂ.ಕೆ.ಕೆ. ಇ-ವೇಸ್ಟ್ ರೀಸೈಕ್ಲರ್ಸ್ ಸಂಸ್ಥಾಪಕರು, ಸುಹೈಲ್ ಅಹಮದ್ – ಪ್ರಧಾನ ಕಾರ್ಯದರ್ಶಿ, ಡಿಸಿಸಿ, ಮೊಹಮ್ಮದ್ ಇಫ್ತಿಖಾರ್ ಉಲ್ಲಾ – ಪ್ರಧಾನ ಕಾರ್ಯದರ್ಶಿ, ಡಿಸಿಸಿ, ಫಾಹಿಮ್, ಜುಬೇರ್ ಅಹಮದ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ಸ್ಮರಿಸಲಾಯಿತು. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಹಾಗೂ ಸಮಾಜಮುಖಿ ಸೇವೆಯ ಅಗತ್ಯತೆಯ ಕುರಿತು ಗಣ್ಯರು ಮಾತನಾಡಿದರು. ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.






