ಚೆಲುವರಾಯಸ್ವಾಮಿಗೆ ಕೃಷಿ, ಬಾಲಕೃಷ್ಣಗೆ ಸಣ್ಣ ನೀರಾವರಿ; ಸವದಿಗೆ ಸಹಕಾರ
ಬೆಂಗಳೂರು: ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಪ್ರಕ್ರಿಯೆ ಚುರುಕುಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಜೊತೆ ಚರ್ಚಿಸಿ ಇಲಾಖೆಗಳ ಜವಾಬ್ದಾರಿಗಳನ್ನು ಅಂತಿಮಗೊಳಿಸಿದ್ದಾರೆ.
ಸಚಿವರಿಗೆ ಹಂಚಿಕೆಯಾಗಿರುವ ಪ್ರಮುಖ ಖಾತೆಗಳ ವಿವರ ಹೀಗಿದೆ:
ಕೃಷಿ – ಎನ್. ಚೆಲುವರಾಯಸ್ವಾಮಿ
ಸಣ್ಣ ನೀರಾವರಿ
ಎಚ್.ಸಿ. ಬಾಲಕೃಷ್ಣ
ಬಂದರು ಮತ್ತು ಮೀನುಗಾರಿಕೆ- ಕೆ.ಎಸ್. ಬಸವಂತಪ್ಪ
ಉನ್ನತ ಶಿಕ್ಷಣ – ಬಸವರಾಜ ರಾಯರೆಡ್ಡಿ
ವಸತಿ – ಜಮೀರ್ ಅಹ್ಮದ್ ಖಾನ್
ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ – ಯು.ಟಿ. ಖಾದರ್
ಸಮಾಜ ಕಲ್ಯಾಣ – ಕೆ.ಎಚ್. ಮುನಿಯಪ್ಪ
ಕಾರ್ಮಿಕ – ಸಂತೋಷ್ ಲಾಡ್
ಸಹಕಾರ – ಲಕ್ಷ್ಮಣ ಸವದಿ
ಗಣಿ ಮತ್ತು ಭೂವಿಜ್ಞಾನ – ಎಸ್.ಎಸ್. ಮಲ್ಲಿಕಾರ್ಜುನ
ಪಶುಸಂಗೋಪನೆ – ಪುಟ್ಟರಂಗಶೆಟ್ಟಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ – ಮಧು ಬಂಗಾರಪ್ಪ
ಆಹಾರ ಮತ್ತು ನಾಗರಿಕ ಸರಬರಾಜು – ರಿಜ್ವಾನ್ ಅರ್ಷದ್
ಅರಣ್ಯ – ಡಾ.ಅಜಯ್ ಸಿಂಗ್
ಖಾತೆ ಹಂಚಿಕೆ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ನೂತನ ಸಚಿವರು ತಮ್ಮ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು ಆಡಳಿತ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಸಚಿವರಿಗೆ ನೀಡಲಾಗಿರುವ ಖಾತೆಗಳ ಮೂಲಕ ಸರ್ಕಾರದ ಮುಂದಿನ ಆಡಳಿತಾತ್ಮಕ ಆದ್ಯತೆಗಳು ಯಾವ ದಿಕ್ಕಿನಲ್ಲಿ ಸಾಗಲಿವೆ ಎಂಬುದರ ಮೇಲೂ ಇದೀಗ ಗಮನ ನೆಟ್ಟಿದೆ.






