ಮಂಗಳೂರು:ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಕೊಡಿಪಾಡಿ ಗ್ರಾಮದ ಪಲ್ಲತಾರ್ ಅಂಗನವಾಡಿ ಬಳಿ, ಕಳೆದ 16 ವರ್ಷಗಳಿಂದ ಆರೋಗ್ಯ ರಕ್ಷಣಾಧಿಕಾರಿ (A.N.M.)ಯಾಗಿ ಪ್ರಾಮಾಣಿಕತೆ, ಕಾಳಜಿ ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ತೇಜಾಕ್ಷಿ ಹರಿಶ್ಚಂದ್ರ ಅವರನ್ನು ಕಳೆಂಬಿ–ಪಲ್ಲತಾರ್ ಪರಿಸರದ ನಾಗರಿಕರ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಳೆದ 16 ವರ್ಷಗಳಿಂದ ಗ್ರಾಮದ ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಕಷ್ಟ–ಸುಖಗಳಲ್ಲಿ ಸದಾ ಜೊತೆಯಾಗಿ ನಿಂತು, ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿರುವ ತೇಜಾಕ್ಷಿ ಹರಿಶ್ಚಂದ್ರ ಅವರ ಸೇವೆ ಶ್ಲಾಘನೀಯ ಹಾಗೂ ಸ್ಮರಣೀಯವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಸಲ್ಲಿಸುವುದು ಸವಾಲಿನ ಕೆಲಸವಾಗಿದ್ದರೂ, ಜನರ ಆರೋಗ್ಯ ಮತ್ತು ಕ್ಷೇಮವನ್ನು ಸದಾ ಮೊದಲ ಆದ್ಯತೆಯಾಗಿ ಪರಿಗಣಿಸಿ ಸೇವೆ ಸಲ್ಲಿಸಿರುವ ಅವರ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಆತ್ಮೀಯ ಅಭಿನಂದನಾ ಕಾರ್ಯಕ್ರಮವು ಬಾಲಕೃಷ್ಣ ಪೂಜಾರಿ ಪಲ್ಲತಾರ್, ಅಬ್ದುಲ್ ಲತೀಫ್ ಕಳೆಂಬಿ ಬೆಂಗಳೂರು, ಅಶ್ರಫ್ ಕಳೆಂಬಿ, ಫಾರೂಕ್ ಪಲ್ಲತಾರ್, ಲತೀಫ್ ಪಲ್ಲತಾರ್, ಇಕ್ಕು ದುಬೈ ಹಾಗೂ ಗೆಳೆಯರ ಉಸ್ತುವಾರಿಯಲ್ಲಿ ಅದ್ದೂರಿಯಾಗಿ ನಡೆಯಿತು.
“ಜನರ ಸೇವೆಯೇ ನಿಜವಾದ ಗೌರವ” ಎಂಬ ಸಂದೇಶದೊಂದಿಗೆ 16 ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿರುವ ಶ್ರೀಮತಿ ತೇಜಾಕ್ಷಿ ಹರಿಶ್ಚಂದ್ರ ಅವರಿಗೆ ನಾಗರಿಕರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.






