ಗುಡಿಬಂಡೆ ಫೆಬ್ರವರಿ 12ರಂದು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಎದುರು ಮುಖ್ಯ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು ತಾಲೂಕು ಅಧ್ಯಕ್ಷ ಮಂಜುಳಾ ಮಾತನಾಡಿ ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಅನೇಕ ಇಲಾಖೆಗಳ ಖಾಸಗಿಕರಣಕ್ಕೆ ಮುಂದಾಗಿ ದೊಡ್ಡ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಸರ್ಕಾರದ ನೀತಿಗಳಿಂದ ಬಡ ಮತ್ತು ಮಾಧ್ಯಮ ವರ್ಗದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಕಾರ್ಮಿಕರ ಬದುಕಿನ ಭದ್ರತೆ ಉದ್ಯೋಗದ ಸುರಕ್ಷತೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು ಹದಗಟ್ಟಿದೆ ಎಂದು ಆರೋಪಿಸಿ ಕೇಂದ್ರದಲ್ಲಿ ಜಾರಿಗೆ ತಂದಿರುವ ಹೊಸ ಕಾರ್ಮಿಕ ಕಾಯ್ದೆಗಳು ಕಾರ್ಮಿಕ ವಿರೋಧಿಯಾಗಿದ್ದು ಇವುಗಳನ್ನು ತಕ್ಷಣವೇ ರದ್ದು ಪಡಿಸಬೇಕು ಅತಿ ಹೆಚ್ಚು ಗಂಟೆಗಳ ಕಾಲ ದುಡಿಸಿಕೊಳ್ಳುವ ವ್ಯವಸ್ಥೆ ನಿಲ್ಲಿಸಬೇಕು ಹೆಣ್ಣು ಮಕ್ಕಳಿಗೆ ರಾತ್ರಿ ಪಾಳಿ ಕೆಲಸ ಮಾಡುವ ನಿಯಮ ಹಿಂಪಡೆಯಬೇಕು ಎಂದು ಆಗ್ರಹಿಸಿದರು ತಾಲೂಕು ಕಾರ್ಯದರ್ಶಿ ಭಾಗ್ಯಮ್ಮ ಮಾತನಾಡಿ ಸರಕಾರ ಗೌರವಧನ ನೀಡುವಲ್ಲಿ ವಿಫಲವಾಗಿದೆ ಬಿಸಿಊಟ ನೌಕರರು ಸೇರಿದಂತೆ ಅನೇಕ ಯೋಜನಾ ಕಾರ್ಮಿಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಅವರಿಗೆ ಯಾವುದೇ ಅವರಿಗೆ ಯಾವುದೇ ಶಾಶ್ವಿತ ನಿವೃತ್ತಿ ವೇತನ ಅಥವಾ ಸಾಮಾಜಿಕ ಬದ್ರತ ಸೌಲಭ್ಯಗಳನ್ನು ನೀಡಿಲ್ಲ ಸರ್ಕಾರ ಕಾರ್ಮಿಕರ ಪರವಾಗಿ ಬಜೆಟ್ ನಲ್ಲಿ ಈಡೇರಿಸಲಿದ್ದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ಜಯರಾಮರೆಡ್ಡಿ ವೆಂಕಟರಾಜು ಪದ್ಮ ಗೀತಾ ಸುಜಾತ ಆದಿನಾರಾಯಣ ದೇವರಾಜ್ ಆದಿನಾರಾಯಣ ಸ್ವಾಮಿ ಶಿವಪ್ಪ ಇನ್ನಿತರ ಮುಖಂಡರು ಭಾಗವಹಿಸಿದ್ದರು.






