ಗುಡಿಬಂಡೆ ಜ- 16 ರಂದು ಪಡಿತರ ಚೀಟಿಗಳನ್ನು ರದ್ದುಗೊಳಿಸಿರುವುದು ಹಾಗೂ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಗೆ ಬದಲಾಯಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸಿಪಿಐಎಂ ಪಕ್ಷದ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಲಾಯಿತು ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಜಯರಾಮರೆಡ್ಡಿ ಮಾತನಾಡಿ ಬಡ ಕುಟುಂಬಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದ್ದಾರೆ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆ ವೆಚ್ಚವು ಹೆಚ್ಚಾಗಿದೆ ಇಂತಹ ಸಂದರ್ಭದಲ್ಲಿ ಸರ್ಕಾರ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಗೆ ಬದಲಾಯಿಸಿದರೆ ಅನೇಕ ಬಡ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ತಿಳಿಸಿದರು ಆದರೆ ಬಡ ಕುಟುಂಬಕ್ಕೆ ವರ್ಷಕ್ಕೆ 1.20.000 ಆದಾಯ ಬಂದರೆ ಅವರ ಪಡಿತರ ಚೀಟಿಯನ್ನು ಎಪಿಎಲ್ ಗೆ ಬದಲಾಯಿಸಲಾಗುತ್ತಿದೆ ಸರ್ಕಾರ ಯಾವ ಮಾನದಂಡದ ಆಧಾರದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತಿದೆ ಎಂದು ಪ್ರಶ್ನಿಸಿದರು ಗುಡಿಬಂಡೆ ತಾಲೂಕು ಇಡೀ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಈ ತಾಲೂಕಿನಲ್ಲಿ ಅನೇಕ ಕುಟುಂಬಗಳು ಕೂಲಿ ಹಾಗೂ ಹೈನುಗಾರಿಕೆಯಿಂದ ಜೀವನ ಸಾಗಿಸುತ್ತೇವೆ ಶಿಕ್ಷಣ ಕೃಷಿ ಹಾಗು ಆರೋಗ್ಯ ಇಲಾಖೆ ಸೇರಿದಂತೆ ಕುಟುಂಬದ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಬಿಪಿಎಲ್ ಕಾರ್ಡ್ ಅವಶ್ಯಕ ವಾಗಿದೆ ಆದರೆ ಸರ್ಕಾರ ಬಡವರ ಬೆನ್ನಿಗೆ ಚೂರಿ ಹಾಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಉಪ್ಪಾರಹಳ್ಳಿ ಶ್ರೀನಿವಾಸ್ ಮಾತನಾಡಿ ತಾಲೂಕು ನಲ್ಲಿ 669 ಪಡಿತರ ಚೀಟಿಗಳು ರದ್ದಾಗಿವೆ ಎಂದು ತಿಳಿಸಿದರು ಆಹಾರ ನಿರೀಕ್ಷಕರು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ತಾಲೂಕು ಕಚೇರಿಗೆ ಬರುತ್ತಿದ್ದು ಇದರಿಂದ ದಳ್ಳಾಳಿಗಳ ಹಾವಳಿ ಹೆಚ್ಚಾಗಿದೆ ಒಂದು ಪಡಿತರ ಚೀಟಿ ಮಾಡಿಸಿಕೊಳ್ಳಲು ಬಡವರಿಂದ 4000 ರಿಂದ5000 ವರೆಗೆ ಹಣ ವಸೂಲಿ ಮಾಡಲಾಗುತ್ತದೆ ಎಂದು ಆರೋಪಿಸಿದರು ತಾಲೂಕಿಗೆ ಶಾಶ್ವತ ಆಹಾರ ನಿರೀಕ್ಷಕರನ್ನು ನೇಮಕ ಮಾಡಬೇಕು ಹಾಗೂ ಶಾಸಕರು ಈ ವಿಷಯದ ಬಗ್ಗೆ ಸಭೆ ಸಮಾರಂಭಗಳಲ್ಲಿ ಚರ್ಚೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ರದ್ದಾದ 669 ಪಡಿತರ ಚೀಟಿಗಳಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು ನಂತರ ಆಹಾರ ನಿರೀಕ್ಷಕರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತಿಳಿಸುವುದಾಗಿ ಹೇಳಿದರು ಇದೇ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಆದಿನಾರಾಯಣಪ್ಪ ಶಿವಪ್ಪ ರಮಣ ಆದಿನಾರಾಯಣ ಇನ್ನು ಇತರೆ ಮುಖಂಡರು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






