ಸಿರುಗುಪ್ಪ : ಬಳ್ಳಾರಿ ರಸ್ತೆಯಲ್ಲಿರುವ ಹನಿ ವೆಲ್ ಇನ್ಫೋಟೆಕ್ ಕಂಪ್ಯೂಟರ್ ತರಬೇತಿಯಲ್ಲಿ ಮುಸ್ಲಿಂ ಸಮುದಾಯದ ಮಕ್ಕಳಿಗೆ ತರಬೇತಿ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಮೆಹಬೂಬ್ ಭಾಷ ಜಿ.ಎಮ್. ರವರು ಮುಸ್ಲಿಂ ಸಮುದಾಯದ 10 ನೇ ತರಗತಿ ಮತ್ತು 1PUC 50 ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿಯನ್ನು ನೀಡಲಾಯಿತು. ಹನಿ ವೆಲ್ ಕಂಪ್ಯೂಟರ್ ತರಬೇತಿಯ ಮಾಲೀಕರಾದ ಎ.ಅನ್ವರ್ ಭಾಷ ನೇತ್ರತ್ವದಲ್ಲಿ ಕಂಪ್ಯೂಟರ್ ತರಬೇತಿಯನ್ನು ನಡೆಸಿಕೊಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಹಸೆನ್ ಬಸರಿ ಸಾಹೇಬ್ ಇತ್ತೀಚಿನ ವಿದ್ಯಮಾನಗಳು ಕಂಪ್ಯೂಟರ್ ಯುಗವನ್ನೇ ಅವಲಂಬಿಸಿವೆ.
ಈ ವಿದ್ಯಮಾನಗಳಲ್ಲಿ ಜಾಗತಿಕವಾಗಿ ಎಲ್ಲಾ ಬೆಳವಣಿಗೆಗಳನ್ನು ಅರ್ಥೈಸಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯಾದ ಸೈಯದ್ ಬುಶ್ರ , ತೋಫಿಯಾ ರಾಜ,ಗೌಸಿಯ,ಮೆಹಬೂಬ್ ಭಾಷ ಇವರಿಗೆ ಧನ್ಯವಾದ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಗುರುಗಳಾದ ಹಸೇನ್ ಭಶ್ರಿ ಸಾಹೇಬ್ , ಪರವೀನ್ ಭಾಷು ಜಿ.ಎಮ್, ತರಭೇತಿಯ ಕಾರಣಿಭೂತರಾದ ಮೆಹಬೂಬ್ ಭಾಷ, ಹನಿ ವೇಲ್ ಇನ್ಫೋಟೇಕ್ ಮಾಲೀಕಾರದ ಅನ್ವರ್ ಭಾಷ ಕೆ.ಎ. ಸನಾ ಸದೀಯಾ ಮತ್ತು ಯಲ್ಲಮ್ಮ ಹಾಗೂ ವಿಧ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.






