ಬೆಂಗಳೂರು:ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದ್ದ ಹದಿನಾರನೇ ವಿಧಾನಸಭೆಯ ಒಂಭತ್ತನೇ ಅಧಿವೇಶನದ ಮುಂದುವರೆದ ಉಪವೇಶನವು ಮರುಾರಂಭಗೊಳ್ಳಲಿದೆ. ರಾಜ್ಯ ಸರ್ಕಾರದ ಪ್ರಕಟಣೆ ಪ್ರಕಾರ, ಈ ಅಧಿವೇಶನವು ಶುಕ್ರವಾರ, ಮಾರ್ಚ್ 06, 2026ರಂದು ಬೆಳಿಗ್ಗೆ 10.15 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನಸಭಾ ಸಭಾಂಗಣದಲ್ಲಿ ನಡೆಯಲಿದೆ.ಆಯವ್ಯಯ ಮಂಡನೆ ಪ್ರಮುಖ ಅಂಶ
ಮಾರ್ಚ್ 6ರಂದು ನಡೆಯುವ ಮೊದಲ ದಿನದ ಕಾರ್ಯಚಟುವಟಿಕೆಯಲ್ಲಿ 2026-27ನೇ ಸಾಲಿನ ರಾಜ್ಯ ಆಯವ್ಯಯ (ಬಜೆಟ್) ಮಂಡನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗಳು ಗರಿಗೆದರಿವೆ. ರಾಜ್ಯದ ಅಭಿವೃದ್ಧಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು ಹಾಗೂ ಆರ್ಥಿಕ ಪ್ರಾಥಮ್ಯಗಳ ಬಗ್ಗೆ ಈ ಬಜೆಟ್ನಲ್ಲಿ ಮಹತ್ವದ ಘೋಷಣೆಗಳು ನಿರೀಕ್ಷಿಸಲ್ಪಟ್ಟಿವೆ.
ದಿನವಾರು ಕಾರ್ಯಚಟುವಟಿಕೆ ವಿವರ
ಮಾರ್ಚ್ 06 (ಶುಕ್ರವಾರ): ಬೆಳಿಗ್ಗೆ 10.15ಕ್ಕೆ ಆಯವ್ಯಯ ಮಂಡನೆ
ಮಾರ್ಚ್ 07 (ಶನಿವಾರ): ಕಾರ್ಯಕಲಾಪಗಳು ಇರುವುದಿಲ್ಲ
ಮಾರ್ಚ್ 08 (ಭಾನುವಾರ): ಸಾರ್ವತ್ರಿಕ ರಜೆ
ಮಾರ್ಚ್ 09 (ಸೋಮವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 10 (ಮಂಗಳವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 11 (ಬುಧವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 12 (ಗುರುವಾರ): ಸರ್ಕಾರಿ/ಖಾಸಗಿ ಕಾರ್ಯಕಲಾಪಗಳು
ಮಾರ್ಚ್ 13 (ಶುಕ್ರವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 14 (ಶನಿವಾರ): ಸಾರ್ವತ್ರಿಕ ರಜೆ
ಮಾರ್ಚ್ 15 (ಭಾನುವಾರ): ಸಾರ್ವತ್ರಿಕ ರಜೆ
ಮಾರ್ಚ್ 16 (ಸೋಮವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 17 (ಮಂಗಳವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 18 (ಬುಧವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 19 (ಗುರುವಾರ): ಸಾರ್ವತ್ರಿಕ ರಜೆ
ಮಾರ್ಚ್ 20 (ಶುಕ್ರವಾರ): ಕಾರ್ಯಕಲಾಪಗಳು ಇರುವುದಿಲ್ಲ
ಮಾರ್ಚ್ 21 (ಶನಿವಾರ): ಸಾರ್ವತ್ರಿಕ ರಜೆ
ಮಾರ್ಚ್ 22 (ಭಾನುವಾರ): ಸಾರ್ವತ್ರಿಕ ರಜೆ
ಮಾರ್ಚ್ 23 (ಸೋಮವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 24 (ಮಂಗಳವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 25 (ಬುಧವಾರ): ಸರ್ಕಾರಿ ಕಾರ್ಯಕಲಾಪಗಳು
ಮಾರ್ಚ್ 26 (ಗುರುವಾರ): ಸರ್ಕಾರಿ/ಖಾಸಗಿ ಕಾರ್ಯಕಲಾಪಗಳು
ಮಾರ್ಚ್ 27 (ಶುಕ್ರವಾರ): ಸರ್ಕಾರಿ ಕಾರ್ಯಕಲಾಪಗಳು
ರಾಜ್ಯ ಸರ್ಕಾರದ ಪ್ರಕಟಣೆಯ ಪ್ರಕಾರ, ಮುಂದಿನ ಕಾರ್ಯಕ್ರಮಗಳ ಬಗ್ಗೆ ಅಗತ್ಯವಿದ್ದಲ್ಲಿ ನಂತರ ಮಾಹಿತಿ ನೀಡಲಾಗುವುದು.
ರಾಜಕೀಯ ಚಟುವಟಿಕೆಗಳಿಗೆ ವೇದಿಕೆ
ಈ ಅಧಿವೇಶನದಲ್ಲಿ ಬಜೆಟ್ ಚರ್ಚೆ, ವಿವಿಧ ಇಲಾಖೆಗಳ ಅನುದಾನ ಬೇಡಿಕೆಗಳ ಕುರಿತು ಚರ್ಚೆಗಳು ಹಾಗೂ ಸರ್ಕಾರದ ನೀತಿಗಳ ಬಗ್ಗೆ ಸದನದಲ್ಲಿ ತೀವ್ರವಾದ ವಾದ-ಪ್ರತಿವಾದಗಳು ನಡೆಯುವ ಸಾಧ್ಯತೆ ಇದೆ. ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ರಾಜಕೀಯ ಚರ್ಚೆಗಳು ಗಮನ ಸೆಳೆಯಲಿವೆ.
ರಾಜ್ಯದ ಆಡಳಿತ, ಅಭಿವೃದ್ಧಿ ಹಾಗೂ ಜನಹಿತ ಯೋಜನೆಗಳ ಭವಿಷ್ಯ ರೂಪರೇಷೆಗಳನ್ನು ನಿರ್ಧರಿಸುವ ಈ ಅಧಿವೇಶನ ರಾಜ್ಯ ರಾಜಕೀಯದಲ್ಲಿ ಮಹತ್ವದ ಘಟ್ಟವಾಗಲಿದೆ.










