ಕರುನಾಡ ನಿಧಿ ಕನ್ನಡ ವಾರಪತ್ರಿಕೆಯ 2ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ಬಾಂಬೆ ಡೈಯಿಂಗ್ ರಸ್ತೆಯಲ್ಲಿರುವ ಲಲಿತಕಲಾ ಅಡಿಟೋರಿಯಂನಲ್ಲಿ ಅದ್ದೂರಿಯಾಗಿ ನೆರವೇರಿತು. ಸಾಹಿತ್ಯ–ಸಾಂಸ್ಕೃತಿಕ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಗಣ್ಯರ ಉಪಸ್ಥಿತಿ ವಿಶೇಷ ಮೆರುಗು ನೀಡಿತು.
ಈ ಸಂದರ್ಭದಲ್ಲಿ ಸಮಾಜಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಶ್ರೀ ಸ್ವರೂಪ್ ರಾಜ್ ಸಿ.ಕೆ ಅವರಿಗೆ ಜಯ ವಿಜಯ ಹಾಗೂ ಕರುನಾಡ ಕಿರಣ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಗೌರವ ಸ್ವೀಕಾರ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ–ಸಾಹಿತ್ಯದ ಬೆಳವಣಿಗೆಗೆ ಸದಾ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹಾಲಕ್ಷ್ಮಿ ಎನ್.ಎಸ್., ಡಾ. ಗೀತಾ ಹೆಚ್. ಕೈವಾರ, ಪುರೋಹಿತರಾದ ಪಂಡಿತ್ ಡಾ. ಬಿ.ಡಿ. ಶಾಸ್ತ್ರಿ ಉಪಸ್ಥಿತರಿದ್ದು, ಕ್ಯಾಲೆಂಡರ್ ಬಿಡುಗಡೆಗೆ ಶುಭ ಹಾರೈಸಿದರು. ಕನ್ನಡ ಚಲನಚಿತ್ರ ನಟ ಹಾಗೂ ಚಾರ್ಮಿಂಗ್ ಸ್ಟಾರ್ ಪ್ರತಾಪ್ ಸಿಂಹ, ರತ್ನ ವೆಂಕಟೇಶ್, ವಕೀಲರಾದ ಡಾ. ಕರ್ಣ, ಕೊಡಗಿನ ಸಮಾಜಸೇವಕಿ ಅಮೀನ ಎಂ.ಎಂ, ಡಾ. ಕೃಷ್ಣ ಟಿ. ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಾಶಯ ಕೋರಿದರು.
ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಂಪಾದಕ ಮಂಡಳಿಯವರು ಮಾತನಾಡಿ, ಕರುನಾಡ ನಿಧಿ ಪತ್ರಿಕೆಯು ಕನ್ನಡ ನಾಡಿನ ಸುದ್ದಿಗಳು, ಸಂಸ್ಕೃತಿ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವ ಧ್ಯೇಯ ಹೊಂದಿದೆ ಎಂದು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆತ್ಮೀಯ ಸಂವಾದಗಳೊಂದಿಗೆ ಸಮಾರಂಭ ಯಶಸ್ವಿಯಾಗಿ ನಡೆಯಿತು.






