ಕದಂಬ ಪಿ ಯು ಕಾಲೇಜಿನ ಘನತೆಯನ್ನು ಎತ್ತಿ ಹಿಡಿದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀ ನಾರಾಯಣ ರವರು…
ನಮ್ಮ ೨ ನೇ ವರ್ಷದ ಪಿಯುಸಿ ವಿದ್ಯಾರ್ಥಿಗಳು JEE Mains ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುವುದು ನಮಗೆ ಅಪಾರ ಸಂತೋಷ ಹಾಗೂ ಹೆಮ್ಮೆಯನ್ನು ತಂದಿದೆ.
ಅಷ್ಟೇ ಅಲ್ಲ, ನಮ್ಮ ಕಾಲೇಜಿನ ಘನತೆಯನ್ನು ಹೆಚ್ಚಿಸಿದೆ, ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ,
ಕದಂಬ ಕಾಲೇಜಿನಲ್ಲಿ ೨ ನೇ ವರ್ಷದ ಪಿಯುಸಿ ವಿದ್ಯಾರ್ಥಿಗಳು JEE Mains ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಸಂದರ್ಭದಲ್ಲಿ ಅಭಿನಂದನೆಯ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಕುರಿತು ಮಾತನಾಡಿದರು.
ನಮ್ಮದು ಈಗ ತಾನೇ ಆರಂಭವಾದ ಕಾಲೇಜು.
ಇದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಕೂಡ ಹೌದು.
ಹೀಗಾಗಿ ನಮಗೆ, ನಮ್ಮ ಸಂಸ್ಥೆಗೆ ಸಂದ ಗೌರವ.
ವಿದ್ಯಾರ್ಥಿಗಳು ಇನ್ನೂ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಲಿ ಎಂಬುದು ನಮ್ಮ ಆಶಯ.
ಅದೇ ರೀತಿಯಲ್ಲಿ ಕದಂಬ ಪಿ ಯು ಕಾಲೇಜಿನ ಕಾರ್ಯದರ್ಶಿ ಗಳಾದ..
ಶ್ರೀ ಶಿವಶಂಕರ್ ರವರು ಮಾತನಾಡಿ…
ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಾ..
ಇದು ವಿದ್ಯಾರ್ಥಿಗಳ ಪರಿಶ್ರಮ, ನಿರಂತರ ಪ್ರಯತ್ನ,ಅವರ ವಿಶೇಷ ಸಂಕಲ್ಪ ಕೂಡ ಹೌದು.
ಅದೇ ರೀತಿಯಲ್ಲಿ ಉಪನ್ಯಾಸಕರ ವಿಶೇಷ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಕೂಡ ಈ ಯಶಸ್ಸಿಗೆ ಕಾರಣ.
ಅವರೆಲ್ಲರ ಶುಭ ಹಾರೈಕೆಗಳು ಕೂಡ ಫಲವನ್ನು ನೀಡಿದೆ.
ಇದೊಂದು ದೊಡ್ಡ ಯಶಸ್ಸು ಮತ್ತು ಸಾಧನೆ.
ಸಂಸ್ಥೆಯ ವಿಶೇಷ ಗೌರವ ಘನತೆ ಹೆಚ್ಚಾಗಲು ಕಾರಣವಾಗಿದೆ, ಎಲ್ಲರಿಗೂ ಮನದಾಳದ ಅಭಿನಂದನೆಗಳು.
ಅದೇ ರೀತಿಯಲ್ಲಿ,
ಪ್ರತೀಕ್ಷಾ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿಗಳಾದ..
ಶ್ರೀ ಕೃಷ್ಣಮುನಿಯವರು ಮಾತನಾಡಿ…
ಈ ಪರೀಕ್ಷೆಯ ಫಲಿತಾಂಶ ನಮಗೆ ಅಪಾರ ಸಂತೋಷವನ್ನು ನೀಡಿದೆ. ಈ ಯಶಸ್ಸು ಕೇವಲ ನಮಗೆ ಮಾತ್ರವಲ್ಲ,ನಮ್ಮ ಕಾಲೇಜಿನ ಘನತೆಯನ್ನು ಎತ್ತಿ ಹಿಡಿದ ವಿದ್ಯಾರ್ಥಿಗಳ ಪೋಷಕರಿಗೆ, ಉಪನ್ಯಾಸಕರಿಗೆ ಸಲ್ಲಬೇಕು. ಎಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳು ಎಂದು ಅಭಿಪ್ರಾಯಪಟ್ಟರು.
JEE Mains ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ *ವಿದ್ಯಾರ್ಥಿಗಳಾದ..
*ಚಂದನಾ ಎಂ
*ಯಶಸ್ವಿನಿ ಎಚ್
*ನಿಖಿಲ್ ಸಿ
*ಪುನೀತ್ ಗೌಡ ಬಿ ಎಸ್
ಎಲ್ಲರಿಗೂ ಕಾಲೇಜಿನ ವಿದ್ಯಾರ್ಥಿಗಳಿಗೆ
ಕದಂಬ ಪಿ ಯು ಕಾಲೇಜಿನ ನಿರ್ವಹಣಾ ಸದಸ್ಯರಾದ ಶ್ರೀಮತಿ ಸುಮಲತಾ ಹಾಗೂ ಪ್ರತೀಕ್ಷಾ ಇಂಟರ್ನ್ಯಾಷನಲ್ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಮಂಜುಳಾರವರು,
ಪ್ರಾಂಶುಪಾಲರು, ಕಾರ್ಯದರ್ಶಿಗಳು, ಸಿಬ್ಬಂದಿಗಳು ಹಾಗೂ ಪೋಷಕರು ಶುಭ ಹಾರೈಕೆಗಳನ್ನು ತಿಳಿಸಿದರು.
ಕಾಲೇಜಿನ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಕೂಡ ಶುಭ ಹಾರೈಕೆಗಳನ್ನು ತಿಳಿಸಿದರು.







