ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಏನೆಲ್ಲಾ ಮಾಡಲು ಸಾಧ್ಯ?
ಒಂದು ಉತ್ತಮ ಕ್ರೀಡಾಪಟುವಾಗಬಹುದು,
ಮತ್ತೊಬ್ಬ ವಿದ್ಯಾರ್ಥಿ ಶೈಕ್ಷಣಿಕವಾಗಿ
ಮುಂದುವರಿಯಬಹುದು, ಮತ್ತೊಬ್ಬರು ಕಲೆ, ಸಾಹಿತ್ಯ ,ಇನ್ನು ಮುಂತಾದ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಬಹುದು ,ಆದರೆ ಇವೆಲ್ಲವೂ ಒಬ್ಬನೇ ವ್ಯಕ್ತಿ ಅತ್ಯಂತ ಚಿಕ್ಕ ವಯಸ್ಸಿಗೆ ಸಾಧಿಸುತ್ತಾರೆಂದರೆ ನಂಬಲು ಸಾಧ್ಯವೇ ಇಲ್ಲ
ಆದರೆ ಇದು ಸತ್ಯ..
ಹೈದರಾಬಾದಿನ ನಯನ ಜೈಸ್ವಾಲ್ ಎಂಬ ಹುಡುಗಿ ಈ ಸಾಧನೆಗೆ ಶಿಖರ ಪ್ರಾಯವಾಗಿದ್ದಾಳೆ. ಈಕೆ ತನ್ನ ಎಂಟನೇ ವರ್ಷಕ್ಕೆ ಹತ್ತನೇ ತರಗತಿ ಉತ್ತೀರ್ಣಳಾಗುತ್ತಾಳೆ. ಹದಿಮೂರನೇ ವಯಸ್ಸಿಗೆ ತನ್ನ ಡಿಗ್ರಿಯನ್ನು ಪೂರ್ಣಗೊಳಿಸುತ್ತಾಳೆ ಹದನೈದನೇ ವಯಸ್ಸಿಗೆ ಆಕೆ ತನ್ನ ಪೋಸ್ಟ್ ಗ್ರಾಜುಯೇಷನ್ ಮುಗಿಸುತ್ತಾಳೆ ಕೇವಲ ಇಪ್ಪತ್ತರ ಪ್ರಾಯದಲ್ಲಿ ಇಡೀ ಏಷ್ಯಾದಲ್ಲಿಯೇ ಅತಿ ಕಿರಿಯ ವಯಸ್ಸಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಟಿ ಎಚ್ ಡಿ ಪಡೆದ ಸಂಶೋಧನಾ ರ್ತಿಯಾಗಿದ್ದಾಳೆ. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಟೇಬಲ್ ಟೆನಿಸ್ ಸಬ್ ಜೂನಿಯರ್ಸ್ ಗರ್ಲ್ಸ್ ನ್ಯಾಷನಲ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕಗಳು, ಹಲವು ನ್ಯಾಷನಲ್ ಇಂಟರ್ನ್ಯಾಷನಲ್ ಚಾಂಪಿಯನ್ಶಿಪ್ಗಳಲ್ಲಿ ಸತತವಾಗಿ ಗೆಲುವು 2000 ದಿಂದ 2018 ರ ತನಕ ಹಲವು ಪದಕಗಳು ಈಕೆಯ ಮೂಡಿ ಸೇರಿವೆ. ಒಬ್ಬಳೇ ವ್ಯಕ್ತಿ ಈ ಎಲ್ಲಾ ಕ್ಷೇತ್ರಗಳಲ್ಲಿ ಹೇಗೆ ತಾನು ಪ್ರಾವೀಣ್ಯ ಪಡೆದಳು ಎನ್ನುವ ಪ್ರಶ್ನೆಗೆ ಆಕೆ ಉತ್ತರ ತಾನು ಯಾವುದೇ ಸಾಮಾಜಿಕ ಮಾಧ್ಯಮವನ್ನು ಬಳಸದೆ ಇರುವುದು ಉತ್ತಮವಾದ, ಆರೋಗ್ಯಕರ ಅಭ್ಯಾಸಗಳು, ಯೋಜನೆ, ಪ್ರಾಮಾಣಿಕ ಪ್ರಯತ್ನ,, ಹಾಗೂ ಶಿಸ್ತು ಅಪಾರವಾದಂತಹ ಶ್ರದ್ಧೆ ತನ್ನ ಎಲ್ಲಾ ಯಶಸ್ಸಿಗೂ ಕಾರಣಗಳು ಎನ್ನುತ್ತಾಳೆ,,,
ಕೇವಲ 8ನೇ ವರ್ಷದಲ್ಲಿಯೇ ವರ್ಡ್ಸ್ ಯೂತ್ ಚೆಸ್ ಚಾಂಪಿಯನ್ಶಿಪ್ ನಲ್ಲಿ ಪ್ರಶಸ್ತಿ ಪಡೆದು ಪ್ರಪಂಚದ ಚೆಸ್ ಚಾಂಪಿಯನ್ಶಿಪ್ ನಲ್ಲಿ ಹೆಸರುವಾಸಿಯಾದಂತಹ ನೋರ್ವಿಯ ಚೆಸ್ ಗ್ರಾಂಡ್ ಮಾಸ್ಟರ್ ಚಾಂಪಿಯನ್ ಕಾರ್ಲ್ ಸನ್ ಅನ್ನ ಸತತವಾಗಿ ಮೂರು ಬಾರಿ ಸೋಲಿಸಿ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಚಸ್ ಮಾಂತ್ರಿಕ ಪುಟಾಣಿ ಆರ್ ಪ್ರಜ್ಞಾನ ಂದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದಿರಬೇಕಾದದ್ದು ಅವಶ್ಯಕ ಕೇವಲ ಹತ್ತೇ ವರ್ಷದ ಈ ಸೂಪರ್ ಕಂಪ್ಯೂಟರ್ ಪ್ರಪಂಚದ ಚೆಸ್ ನ ಚದುರಂಗದಲ್ಲಿ ಸೋಲಿಸಿದ ತನ್ನ ಅತ್ಯದ್ಭುತವಾದ ಶಕ್ತಿಗೆ ತಾನು ಹೇಳುವ ಕಾರಣ ತಾನು ವಿವಿಧ ಸಾಮಾಜಿಕ ಜಾಲತಾಣಗಳಿಂದ ದೂರವಿರುವುದು….
ತುಂಬಿ ತುಳುಕುವಷ್ಟು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಇರುವುದರಿಂದ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ ಅದು ಮನವೇರಿ ಮುಧ ನೀಡಿ ಮನಸಿನಲ್ಲಿ ಗೋಡೆ ಕಟ್ಟಿರುತ್ತದೆ ಅದನ್ನ ತೆಗೆದುಹಾಕಲು ಹಿರಿಯರು ತುಂಬಾ ಗಮನಿಸಬೇಕಾಗುತ್ತದೆ
ಹೆಚ್ಚಿನ ಶ್ರಮ ಪಡಬೇಕಾಗುತ್ತದೆ ಹಾಗಾಗಿ ಕಲಿಯುವಾಗ ಎಚ್ಚರದಿಂದಿರಬೇಕಾಗುತ್ತದೆ. ಕಲಿಕಾರ್ಥಿ ವಿದ್ಯಾರ್ಥಿಯ ಆರಂಭಿಕ ಪ್ರಾರಂಭದ ವರ್ಷಗಳು ಮುಂದಿನ ಅವನ ಜೀವನದ ದೈಹಿಕ ಸಾಮಾಜಿಕ ಭಾವನಾತ್ಮಕ ವಿಚಾರದ ಮೇಲೆ ಅತಿ ಪ್ರಭಾವ ಬೀರುತ್ತದೆ ಸಕಾರಾತ್ಮಕ ಕಲಿಕೆ ಹಾಗೂ ಅನುಭವಗಳು ಹೇಗೆ ಸುಗಮ ದಾರಿಗೆ ಎಳೆಯಬಲ್ಲವೋ..
ಈ ದಿನಗಳಲ್ಲಿ ನಡೆದ ಆಘಾತಕಾರಿ ಅನುಭವಗಳು ಹಾಗೂ ತಪ್ಪು ತಿಳುವಳಿಕೆಗಳು ನಿರ್ದಿಷ್ಟ ಕಲಿಕೆ ಇಲ್ಲದಿರುವುದು ಮುಂದಿನ ಜೀವನದಲ್ಲಿ ದೀರ್ಘಕಾಲೀನ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ ಒಟ್ಟಿನಲ್ಲಿ ವಿದ್ಯಾರ್ಥಿಯ ಈ ಹಂತ ಜೀವನದಲ್ಲಿ ಭವಿಷ್ಯದ ಯಶಸ್ಸಿಗೆ ಅಡಿಪಾಯ ಹಾಕುವ ಪ್ರಮುಖ ಹಂತವಾಗಿದೆ ಹೀಗಾಗಿ ಈ ಹಂತವನ್ನು ಬಹಳ ಎಚ್ಚರಿಕೆಯಿಂದ ದಾಟುವುದು, ಬಹಳ ಮುಖ್ಯವಾದದ್ದು ಹಾಗೂ ಈ ವಿಷಯದಲ್ಲಿ ಪೋಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಯ ನಿರ್ಮಾಣ ಕ್ರಿಯೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಯು ಮಣಗಾಣಬೇಕಾದದು ಸದ್ಯದ ಜವಾಬ್ದಾರಿ.
ಅಮರಲತಾ






