ಶ್ರೀದೇವಿ ಓಂಕಾರ್
ಬೆಂಗಳೂರು 32
ನಮ್ಮ ಸಮಾಜ ಎತ್ತ ಹೊರಟಿದೆ, ಮನುಷ್ಯತ್ವ ಮಾನವೀಯತೆ ಇಲ್ಲದಾಗಿದೆ, ಎಲ್ಲೆಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ, ಕ್ರೂರತೆ ಅಟ್ಟಹಾಸದಿ ನಗುತಿದೆ, ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ, ಎಲ್ಲೆಡೆ ಮೋಸ, ವಂಚನೆ, ಕೊಲೆ ತಲೆ ಎತ್ತಿದೆ, ಕ್ರಿಮಿ ಕೀಟಾಣುಗಳನ್ನು ಕೊಲ್ಲುವ ಹಾಗೆ, ಯಾವುದೇ ಭಯವಿಲ್ಲದೆ ಮನುಷ್ಯನ ಜೀವ ಹೊಸಕಿ ಹಾಕ್ತಾ ಇದ್ದಾರೆ, ಹುಚ್ಚು ಪ್ರೇಮಕ್ಕಾಗಿ, ಮುಗ್ಧ ಜನರ ಬಲಿ ಆಗುತ್ತಿದೆ, ಇದಕ್ಕೆ ಕೊನೆ ಇಲ್ಲವೇ, ಇವರಿಗೆ ಭಯ, ಭೀತಿ ಇಲ್ಲದಂತಾಗಿದೆ.ತಮ್ಮ ಹುಚ್ಚು ಪ್ರೀತಿಗಾಗಿ, ಒಂದು ಜೀವವನ್ನು ಬಲಿ ತೆಗೆದುಕೊಂಡು,ಹೆತ್ತವರ ಹೊಟ್ಟೆ ಉರಿಸಲು ಇವರಿಗೆ ಏನು ಹಕ್ಕು ಇದೆ,ತಮ್ಮ ಸ್ವಾರ್ಥಕ್ಕೆ ಒಂದು ಜೀವವನ್ನು ತೆಗೆದುಕೊಳ್ಳಲು ಮನುಷ್ಯನಾದವನಿಗೆ ಹೇಗೆ ಮನಸ್ಸು ಬರುತ್ತದೆ, ಇವರೆಲ್ಲ ರಾಕ್ಷಸರೇ ಇರಬಹುದು, ಈಗಿನ ಕಾಲದಲ್ಲಿ ಯಾರನ್ನು ನಂಬುವುದು ಎಂದು ತಿಳಿಯುವುದಿಲ್ಲ.ನಂಬಿಸಿ ಒಂದು ಜೀವವನ್ನು ಕೊನೆಗಾಣಿಸಲು ಹೇಗೆ ಸಾಧ್ಯ, ಮುಂದೆ ತಾವು ಸಿಕ್ಕು ಬೀಳುತ್ತೇವೆ ಎಂದು ಯಾಕೆ ಇವರಿಗೆ ಅರಿವಾಗುವುದಿಲ್ಲ.ಮದುವೆ ಎರಡು ಜೀವಿಗಳ ಪವಿತ್ರ ಬಂಧನ, ಅದಕ್ಕೂ ಕುತ್ತು ಬಂದರೆ, ಜನರನ್ನು ಜನರು ಹೇಗೆ ನಂಬುವುದು. ಪೇಪರ ಓದಲು ಹೋದರೆ, ಸಮಾಚಾರ ನೋಡಿದರೆ, ಎಲ್ಲೆಲ್ಲೂ ಬರೀ ಹಿಂಸಾಚಾರ, ಭ್ರಷ್ಟಾಚಾರ, ಇದೆ ಕಾಣಲು ಸಿಗುತ್ತದೆ.ಸುಂದರ ಜೀವನ ಗಗನಕುಸುಮ ಆಗ್ತಾ ಇದೆ.ಮುಂದೆ ಹರೆಯದ ಹುಡುಗ ಹುಡುಗಿ ಮದುವೆ ಎಂದರೆ ಭಯ ಬೀಳುತ್ತಾರೆ, ಯಾರನ್ನು ನಂಬುವುದು, ಯಾರನ್ನು ಬಿಡುವುದು.ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಹೂವಿನ ಹಾಗೆ ಕೋಮಲೆ, ಹೆಣ್ಣು ಮಮತೆಯ ಕಡಲು ಹೀಗೆ ಹೆಣ್ಣನ್ನು ಹೋಲಿಸುತ್ತಾರೆ.ಆದರೆ ಅದೇ ಹೆಣ್ಣು ಅಮಾನುಷ ಕೃತ್ಯ ಮಾಡಿದರೆ,ಹೆತ್ತ ತಂದೆ ತಾಯಿ ಕೂಡಾ ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.ಮನುಷ್ಯನಿಂದ ಮನುಷ್ಯನ ಮೇಲೆ ನಂಬಿಕೆ ಹೋಗ್ತಾ ಇದೆ.ಇದಕ್ಕೆ ಕೊನೆ ಇಲ್ಲವೇ,






