ಸಿರಿಗೇರಿ ಸುದ್ದಿ ಏ, 16: ಸಿರಿಗೇರಿ ಗ್ರಾಪಂ ಸಭಾಂಗಣದಲ್ಲಿ 2025-26ನೇ ಸಾಲಿನ ಗ್ರಾಪಂ ಸದಸ್ಯರ ಸಾಮಾನ್ಯ ಸಭೆ ನಡೆಸಲಾಯಿತು. ಪ್ರಾರಂಭದಲ್ಲಿ ಮಹಿಳಾ ಸದಸ್ಯರು ಕಳೆದ ನಾಲ್ಕು ಐದು ತಿಂಗಳಿಂದ ಸದಸ್ಯರ ಗೌರವಧನ ಬಾಕಿ ಉಳಿದಿದೆ. ಕೆಲವೇ ದಿನಗಳಲ್ಲಿ ಯಾವುದೇ ಮುಕ್ತಾಯಗೊಳ್ಳುತ್ತದೆ. ಗೌರವದನ ನೀಡಿ ಸಭೆ ನಡೆಸಿ ಎಂದು ಪಟ್ಟು ಹಿಡಿದರು.
ಪ್ರತಿಕ್ರಿಸಿದ ಪಿಡಿಒ ಹಸನ್
ಪೀರಸಾಬ್ ವಾರದ ಒಳಗೆ ಎಲ್ಲಾ ಸದಸ್ಯರ ಗೌರವದಾನ ನೀಡಲಾಗುವುದು ಎಂಬ ಭರವಸೆ ನೀಡಿದರು. ಮುಂದುವರೆದ ಸಭೆಯಲ್ಲಿ ಮಾತನಾಡಿದ ಪಿಡಿಒ ತೇರು ನಿಲುಗೊಡೆ ಜಾಗವನ್ನು ಸ್ಥಳಾಂತರಿಸುವ ಬಗ್ಗೆ, ಗ್ರಾಮದ ದ್ವಾರಕಾ ನಗರಕ್ಕೆ ಮೂಲ ರಸ್ತೆಯನ್ನು ನೀಡುವುದರ ಬಗ್ಗೆ, ದಾಸ ಪತ್ರಿಕೆಯಲ್ಲಿ ನೀರು ಸಂಗ್ರಹಣೆ ಬಗ್ಗೆ, 7ನೇ ವಾರ್ಡಿನ ಮೌಲಾಲಿ ದರ್ಗಾ ಹತ್ತಿರ ಕುಡಿಯುವ ನೀರಿನ ಸಮಸ್ಯೆ ಬಗ್ಗೆ, ಅದೇ ರೀತಿ ಅಮೃತ ಸರೋವರ ಅಕ್ಕತಂಗಿ ಕೆರೆಗೆ ರಸ್ತೆ ಕಲ್ಪಿಸುವ ಬಗ್ಗೆ ಮುಖ್ಯ ಬಜಾರ ಗಣೇಶ ಗುಡಿ ಹತ್ತಿರವಿರುವ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ತಕರಾರು ಅರ್ಜಿ ಬಂದಿರುವ ಬಗ್ಗೆ ಸದಸ್ಯರ ಗಮನ ಸೆಳೆದರು.
ಈ ಬಗ್ಗೆ ಚರ್ಚಿಸಿದ ಸದಸ್ಯರು ಯಾವುದೇ ಬೇಡಿಕೆಗಳನ್ನು ಕಾನೂನಾತ್ಮಕ ರೀತಿಯಲ್ಲಿ ಬಗೆಹರಿಸಿ ಕೊಡಿ ಎಂದು ಒಪ್ಪಿಗೆ ಸೂಚಿಸಿದರು. ಪ್ರಮುಖವಾಗಿ ಬೇಸಿಗೆ ಹಂಗಾಮಿನ ಹಿನ್ನೆಲೆಯಲ್ಲಿ ಯಾವುದೇ ಕೇರಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಪಿಡಿಒ ಗೆ ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ದ್ಯಾವಣ್ಣ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕಾರ್ಯದರ್ಶಿ ಸಿದ್ದರಾಮಪ್ಪ, ಸದಸ್ಯರಾದ ಅಡಿವೆಯ್ಯ ಸ್ವಾಮಿ, ರಮೇಶ್ ಭಜಂತ್ರಿ, ಗು ಡಟ್ಟಿ ಈರಣ್ಣ, ರಮೇಶ, ಲಕ್ಷ್ಮಿ,ಶಾಂತಮ್ಮ, ಹನುಮೇಶ ಸೇರಿದಂತೆ ಬಹುತೇಕ ಎಲ್ಲಾ ಸದಸ್ಯರು ಭಾಗವಹಿಸಿದ್ದರು.






