ಗುಡಿಬಂಡೆ ಜೂನ್ 6 ರಂದು ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೇತೃತ್ವದಲ್ಲಿ ಪತ್ರಕರ್ತರ ಭವನಕ್ಕೆ ಮತ್ತು ಸಂಘಟನೆಯ ಸದಸ್ಯರಿಗೆ ನಿವೇಶನಗಳಿಗಾಗಿ ಜಮೀನು ಮಂಜೂರಾತಿ ಮಾಡಬೇಕೆಂದು ತಾಸಿಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರ ಧ್ವನಿಯ ಸಂಘಟನೆಯ ಪತ್ರಿಕಾಗೋಷ್ಠಿ ಅಥವಾ ಸುದ್ದಿಗೋಷ್ಠಿ ನಡೆಸಲು ವಿವಿಧ ಪತ್ರಿಕೆಗಳಿಗೆ ದಿನನಿತ್ಯ ಸುದ್ದಿಗಳನ್ನು ಕಳುಹಿಸಲು ಅವಕಾಶವನ್ನು ಹಾಗೂ ಪತ್ರಕರ್ತರ ಧ್ವನಿ ಸಂಘಟನೆಯ ಸಭೆ ಸಮಾರಂಭಗಳನ್ನು ಮಾಡಲು ಪತ್ರಕರ್ತರ ಭವನ ಅವಶ್ಯಕತೆವಾಗಿದ್ದು ಜೊತೆಗೆ ಸಂಘಟನೆಯ ಪ್ರತಿ ಸದಸ್ಯನಿಗೆ ನಿವೇಶನ ಮಂಜೂರು ಮಾಡಲು ಮನವಿ ಪತ್ರ ಸಲ್ಲಿಸಲಾಯಿತು ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ನಾಸಿರ್ ಮೊಹಮ್ಮದ್ ಅಂಜಿನಪ್ಪ ಸತೀಶ್ ಬಾಬು ವೆಂಕಟೇಶಪ್ಪ ಹಾಜರಿದ್ದರು






