ಬೆಂಗಳೂರು, ಸೆ.25: ನಗರದ ಗಾನಪಲ್ಲವಿ ಆಡಿಟೋರಿಯಂನಲ್ಲಿ ಗುರುವಾರ ಸಂಜೆ ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ವತಿಯಿಂದ ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀ ಕೃಷ್ಣ ಗುರೂಜಿ ಅವರ 55ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಖ್ಯಾತ ಗಾಯಕ ಶಶಿಧರ್ ಕೋಟೆ ಅವರು ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗಣ್ಯರು ಕೃಷ್ಣ ಗುರೂಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿ, ಅವರ ಸಮಾಜಮುಖಿ ಸೇವೆ ಹಾಗೂ ಮಾನವ ಹಕ್ಕುಗಳ ರಕ್ಷಣೆಯ ಕಾರ್ಯವನ್ನು ಶ್ಲಾಘಿಸಿದರು.
ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ರಾಜ್ಯಾಧ್ಯಕ್ಷ ಸಿಎಂ ಗಣೇಶ್ ಗೌಡ, ಉಪಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಚನ್ನಕೇಶವ, ಖ್ಯಾತ ಗಾಯಕ ಶಶಿಧರ್ ಕೋಟೆ, ಸಹಕಾರ ಚುನಾವಣಾ ಪ್ರಾಧಿಕಾರದ ಕಾರ್ಯದರ್ಶಿ ಲಕ್ಷ್ಮೀಪತಯ್ಯ, ನಿರ್ದೇಶಕರಾದ ಆರೂರು ಜಗದೀಶ್, ಡಾ. ಎಸ್.ಪಿ. ಆಚಾರ್ಯ, ನಟ ಸೂಚನ್ ಶೆಟ್ಟಿ, ಗಾಡ್ ಪ್ರಾಮಿಸ್ ಚಲನಚಿತ್ರದ ನಿರ್ಮಾಪಕ ಮಹೇಂದ್ರ ಶೆಟ್ಟಿ, ಚಿತ್ರನಟ ಹಾಗೂ ನಿರ್ದೇಶಕ ಸೂಚನ್ ಶೆಟ್ಟಿ, ಕಾಮಿಡಿ ಕಿಂಗ್ ಪ್ರಶಾಂತ್, ಖಳನಾಯಕ ಪ್ರಸಿದ್ಧಿ ನಾಗ, ಕರುಣ ಕುಂದರ್, ಎಡಿಟರ್ ನವೀನ್ ಶೆಟ್ಟಿ, ಗುರುಸಾವನ್ ವೀರೇಶ್ ಪ್ರಣೇಕಲ್ ಮಠ್, ಡಾ. ಶಾಂತಕುಮಾರ್ ಗುರುಜಿ, ಅಜೇಶ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷ್ಣ ಗುರೂಜಿ ಅವರ 55ನೇ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಶುಭಾಶಯ ಕೋರಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಸೇವೆ, ಮಾನವ ಹಕ್ಕುಗಳ ರಕ್ಷಣೆ ಹಾಗೂ ಜನಪರ ಕಾರ್ಯಗಳ ಕುರಿತು ಗಣ್ಯರು ಮಾತನಾಡಿದರು.ಕಾರ್ಯಕ್ರಮವು ಗಣ್ಯರ ಉಪಸ್ಥಿತಿ, ಶುಭಾಶಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.






