ಬೆಂಗಳೂರು, ಸೆ.21: ಶಿವಾಜಿನಗರದ ಜೆಡಿಎಸ್ ವಾರ್ಡ್ ಅಧ್ಯಕ್ಷರಾದ ಆಶ್ವಾಕ್ ಹುಸೇನ್ ತೌಸೀಫ್ ಹಾಗೂ ಅವರ ತಂಡದ ವತಿಯಿಂದ ಭಾನುವಾರ ಸಂಜೆ ಶಿವಾಜಿನಗರದ ಹಜರತ್ ಕಂಬಲ್ ಪೋಷ್ ದರ್ಗಾದಲ್ಲಿ ಹೂವಿನ ಚಾದರ್ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ನಾರ್ತ್ ಹಾಗೂ ನಗರ ಜೆಡಿಎಸ್ ಅಧ್ಯಕ್ಷರಾದ ಮೊಹಮ್ಮದ್ ಅಮ್ಜದ್, ಬೆಂಗಳೂರು ನಗರ ಅಧ್ಯಕ್ಷರಾದ ಅಫ್ರೋಜ್ ಬೇಗ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.ದರ್ಗಾದಲ್ಲಿ ಚಾದರ್ ಅರ್ಪಿಸಿ ನಾಡಿನ ಶಾಂತಿ, ಸೌಹಾರ್ದತೆ ಹಾಗೂ ಜನರ ಸುಖ-ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಧಾರ್ಮಿಕ ಸೌಹಾರ್ದತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂದೇಶವನ್ನು ಸಾರಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಮುಂದಿನ ದಿನಗಳಲ್ಲಿ ಜನಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕುರಿತು ಚರ್ಚಿಸಿದರು.






