ಚನ್ನಪಟ್ಟಣ: ನಗರದ ಹಜರತ್ ಸೈಯದ್ ಮೊಹಮ್ಮದ್ ಅಖಿಲ್ ಶಾ ಖಾದ್ರಿ ದರ್ಗಾದಲ್ಲಿ 287ನೇ ಸಂದಲ್ ಉರುಸ್ ಶರೀಫ್ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಕೆ.ಅಲ್‌ಹಾಜ್ ಸೈಯದ್ ಸಾದತುಲ್ಲಾ ಹಾಗೂ ಸಹೋದರರು,ಮಾಜಿ ಕೌನ್ಸಿಲರ್ ಲಿಯಾಕತ್ ಅಲಿ,ಸೈಯದ್ ಹಸ್ನುಲ್ ಮುಸನ್ನಶಾ ಖಾದ್ರಿ ಸೇರಿದಂತೆ ಅಖಿಲ್ ಶಾ ಖಾದ್ರಿ ಅವರ ಭಕ್ತರು ಹಾಗೂ ಸದಸ್ಯರು ಭಾಗವಹಿಸಿದ್ದರು.
ಉರುಸ್ ಶರೀಫ್ ಅಂಗವಾಗಿ ವಿಶೇಷ ಪ್ರಾರ್ಥನೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ದುವಾ ಕಾರ್ಯಕ್ರಮಗಳು ನೆರವೇರಿದವು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಜಮಾಲ್ ಶಾ ಖಾದ್ರಿ ಸೇರಿದಂತೆ ಅಖಿಲ್ ಶಾಹಿ ಕುಟುಂಬದ ಸದಸ್ಯರು ಹಾಗೂ ಆಶಿಖಾನೆ ಅಖಿಲ್ ಶಾ ಖಾದ್ರಿ ಸಂಘದ ಭಕ್ತರು ಉಪಸ್ಥಿತರಿದ್ದರು. ಉರುಸ್ ಅಂಗವಾಗಿ ಭಕ್ತರಿಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.






