ಗುಡಿಬಂಡೆ :- ಭವ್ಯ ಭಾರತದ ದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಕೋಮುವಾದಿ ಪಕ್ಷ ಎಂದು ಬಿಂಬಿಸಿದ್ದಲ್ಲದೆ ರಾಜಕೀಯವಾಗಿ ಮಹಿಳೆಯರಿಗೆ ಸಂವಿಧಾನತ್ಮಕವಾಗಿ ಸಿಗಬೇಕಾದ ಹಕ್ಕುಗಳು ಸಿಗದಂತೆ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ. ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದೆ ಎಂದು ತಾ.ಪಂ.ಮಾಜಿ ಅಧ್ಯಕ್ಷೆ ಆಶಾಜಯಪ್ಪ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ಪಟ್ಟಣದ ಮುಖ್ಯ ರಸ್ತೆ ತಾಲ್ಲೂಕು ಆಡಳಿತ ಸೌಧ ಮುಂಭಾಗದಲ್ಲಿ ಮಾನವ ಸರಪಳಿ ಮಾಡಿ ರಸ್ತೆತಡೆ ಮಾಡಿ ಪ್ರತಿಭಟಿಸಿ ಕಿಡಿಕಾರಿದರು.
ಅವರು ಇಂದು ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ
ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ.ಆರ್ . ಅಂಬೇಡ್ಕರ್ ರಚಿಸಿಕೋಟ್ಟಂತ. ಸಂವಿಧಾನದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ತಿಳಿಸಿದ್ದಾರೆ. ಆದರೆ ದೇಶದಲ್ಲಿ ಅರವತ್ತೈದು ವರ್ಷಗಳು ಸುದೀರ್ಘವಾಗಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಈ ಮೀಸಲಾತಿ. ಮಸೂದೆಯ ವಿದೆಯಕವನ್ನು ಜಾರಿಗೋಳಿಸದೆ ಮಹಿಳೆಯರನ್ನು ಕೇವಲ ಮತ ಬ್ಯಾಂಕ್ ಗೆ ಸಿಮಿತಗೋಳಿಸಿಕೊಂಡು ಬಂದಿದ್ದಾರೆ.
ಇದರಿಂದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವತ್ತು ಬಿಜೆಪಿ ಅಲ್ಲ ಕೋಮುವಾದಿ ಪಕ್ಷ ಕಾಂಗ್ರೆಸ್ ಪಕ್ಷ ಇವತ್ತು ಕೋಮುವಾದಿ, ಜಾತಿವಾದಿ ಮತ್ತು ಅದರ ಮಿತ್ರ ಪಕ್ಷಗಳು ಕೂಡ ದುರಾಡಳಿತಕ್ಕೆ ಬೆಂಬಲ ಸೂಚಿಸಿರುವುದು ದುರ್ದೈವ ಎಂದು ಕಿಡಿಕಾರಿದರು.
ಬಳಿಕ ರಾಜ್ಯ ಬಿಜೆಪಿ ನೇಕಾರರ ಪ್ರಕೋಷ್ಟ ಸಂಚಾಲಕ ಜಿ.ಎಸ್.ನಾಗರಾಜು ಎನ್ ಡಿ.ಎ ಕೂಟದ ಕೇಂದ್ರ ಸರ್ಕಾರ ಕಳೆದ ಲೋಕಸಭಾ ಅಧಿವೇಶನದಲ್ಲಿ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ರಾಜಕೀಯವಾಗಿ ಶೇ 33ರಷ್ಟು ರಾಜಕೀಯ ಮೀಸಲಾತಿಯನ್ನು ಜಾರಗೋಳಿಸಲು ಈ ಮಸೂದೆಯನ್ನು ನರೇಂದ್ರ ಮೋದಿ ಅಧಿವೇಶನದಲ್ಲಿ ಮಂಡಿಸಿದ ಮಸೂದೆಯನ್ನು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮೀಸಲಾತಿ ಅಂಗಿಕಾರಕ್ಕೆ ಅಡ್ಡಿಪಡಿಸಿ ರಾಜಕೀಯವಾಗಿ ಮಹಿಳೆಯರಿಗೆ ಸಿಂಗಬೇಕಾದ ಅವಕಾಶಗಳಿಗೆ ಕೋಡಲಿ ಪೆಟ್ಟು ನೀಡಿದೆ.
ಕಾಂಗ್ರೆಸ್ ಪಕ್ಷ ಇಷ್ಟು ವರ್ಷಗಳು ಬಿಜೆಪಿ ಅಲ್ಪಸಂಖ್ಯಾತರ, ದಲಿತರ, ಬಹುಜನರ ವಿರೋಧಿ ಎಂದು ಹಣೆಪಟ್ಟಿಯನ್ನು ಕಟ್ಟಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಇವತ್ತು ಮಹಿಳೆಯರ ಮೀಸಲಾತಿ ಮಸೂದೆಗೆ ವಿರೋಧ ಮಾಡಿದ್ದು ಸಂವಿಧಾನತ್ಮಕವಾಗಿ ಇಂದು ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ವಂಚಿತರಾಗುತ್ತಿದ್ದಾರೆ ಹೋರಾಟಗಳ ಮೂಲಕ ನಮ್ಮ ಹಕ್ಕುಗಳನ್ನು ರಕ್ಷಿಸಿಕೋಳ್ಳ ಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗಂಗರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿ ಎ ಅಮರೇಶ, ಮದನ ಮೋಹನ ರೆಡ್ಡಿ, ಬಿಜೆಪಿ ಮಹಿಳಾ ಮುಖಂಡರಾದ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸಿಂಗ್, ಪ್ರಧಾನ ಕಾರ್ಯದರ್ಶಿ ಅರುಣ, ಜ್ಯೋತಿ, ಯುವ ಮೋರ್ಚಾ ಅಧ್ಯಕ್ಷ, ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಗಗನ, ಗಜೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬೀಚಗಾನಹಳ್ಳಿ ಸುರೇಶ್, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬೀಚಗಾನಹಳ್ಳಿ ನರಸಿಂಹಮೂರ್ತಿ, ಬಿಜೆಪಿ ಮುಖಂಡ ಪ್ರೆಸ್ ಶಿವಪ್ಪ, ಪದ್ಮಾವತಿ, ಈಶ್ವರ್ ರೆಡ್ಡಿ, ಚೇತನ್, ವಿಜಯ ರಾಘವರೆಡ್ಡಿ, ಮುಂತಾದವರು ಭಾಗವಹಿಸಿದ್ದರು.






