ಗೌರಿಬಿದನೂರು.ತಾಲೂಕಿನ ಉರ್ದು ಶಾಲೆಗಳ ಪುನರಾರಂಭಕ್ಕೆ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ನಿಂದ ಪೋಷಕರಲ್ಲಿ ಮನವಿ
ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಇರುವ ಉರ್ದು ಶಾಲೆ ಶಿಕ್ಷಕರ ಕೊರತೆಯಿಂದ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದವು. ಈ ಶಾಲೆಗಳನ್ನು ಪುನರಾರಂಭಿಸಲು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮೊಹಮದ್ ನಾಸಿರ್ ನೇತೃತ್ವದಲ್ಲಿ ಜಾಮಿಯಾ ಮಸೀದಿ ಯಲ್ಲಿಕಾರ್ಯಕ್ರಮವನ್ನು ಆಯೋಜಿಸಿ, ಪೋಷಕರಲ್ಲಿ ಮನವಿ ಮಾಡಲಾಗಿದೆ.
ಕಳೆದ ವರ್ಷ ಈ ಶಾಲೆ ಮುಚ್ಚಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಮೊಹಮದ್ ನಾಸಿರ್ ಹೇಳಿದ್ದಾರೆ. ಸರ್ಕಾರದಿಂದ ಶಾಲೆಗಳಿಗೆ ಎಲ್ಲಾ ಸವಲತ್ತುಗಳು ಒದಗಿಸಲಾಗಿದ್ದರೂ, ಶಿಕ್ಷಕರ ಕೊರತೆಯಿಂದಾಗಿ ಈ ಶಾಲೆಗಳು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಹೊಸೂರು ಗ್ರಾಮದ ಮಸೀದಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಮಾತನಾಡಿದ ಅವರು, “ನಮ್ಮ ಮಕ್ಕಳಿಗೆ ಕನ್ನಡ, ಉರ್ದು, ಮತ್ತು ಇಂಗ್ಲೀಷ್ ಭಾಷೆಗಳ ಶಿಕ್ಷಣ ಕಡ್ಡಾಯವಾಗಿ ಒದಗಿಸಬೇಕು. ಇದಕ್ಕಾಗಿ ಖಾಯಂ ಶಿಕ್ಷಕರ ನೇಮಕಾತಿಗೆ ಹೋರಾಟ ನಡೆಸುತ್ತೇವೆ. ಒಂದು ವೇಳೆ ಖಾಯಂ ಶಿಕ್ಷಕರು ಸಿಗದಿದ್ದರೆ, ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ನಿಂದ ಅತಿಥಿ ಶಿಕ್ಷಕರನ್ನು ಒದಗಿಸಿ ಶಾಲೆಗಳನ್ನು ನಡೆಸುತ್ತೇವೆ,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಭಾಗವಾಗಿ, ಪರಿಷತ್‌ನಿಂದ ಮಕ್ಕಳಿಗೆ ನೋಟ್‌ಬುಕ್, ಐಡಿ ಕಾರ್ಡ್, ಮತ್ತು ಇತರ ಅಗತ್ಯ ಶೈಕ್ಷಣಿಕ ವಸ್ತುಗಳನ್ನು ಒದಗಿಸುವ ಯೋಜನೆಯನ್ನು ಘೋಷಿಸಲಾಗಿದೆ. ಹೊಸೂರು ಗ್ರಾಮದಲ್ಲಿ ಸುಮಾರು 18 ರಿಂದ 20 ಮಕ್ಕಳು ಉರ್ದು ಶಾಲೆಗಳಲ್ಲಿ ದಾಖಲಾಗಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ಪೋಷಕರು ಶಾಲೆಗಳನ್ನು ಉಳಿಸಿಕೊಳ್ಳಲು ಶಿಕ್ಷಕರ ನೇಮಕಾತಿ ಕಡ್ಡಾಯ ಎಂದು ಒತ್ತಾಯಿಸಿದ್ದಾರೆ. “ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಿದೆ. ಆದರೆ ಶಿಕ್ಷಕರ ಕೊರತೆಯಿಂದ ಈ ಪರಿಸ್ಥಿತಿ ಉಂಟಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕು,” ಎಂದು ಹೊಸೂರು ಪೋಷಕರು ತಿಳಿಸಿದ್ದಾರೆ.
ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ನಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗದು “ಹೊಸೂರು ಶಾಲೆಗಳನ್ನು ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಶಾಲೆಗಳ ಉಳಿವಿಗೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ,” ಎಂದು ಮೊಹಮದ್ ನಾಸಿರ್ ವಿನಂತಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷರು. ಸಾರ್ವಜನಿಕರು ಉರ್ದು ಸಾಹಿತ್ಯ ಪರಿಷತ್ತಿನ ಸದಸ್ಯರು . ಊರಿನ ಯುವಕರು ಹಾಜರಿದ್ದರು.






