ಬೆಂಗಳೂರು: ಡಾ. ಬಿಆರ್ ಅಂಬೇಡ್ಕರ್ ಕರುನಾಡ ಸೇನಾ ಮತ್ತು ಅನಂತ ಫೌಂಡೇಶನ್ ಸಂಯುಕ್ತವಾಗಿ ಆಯೋಜಿಸಿದ ಅಂಬೇಡ್ಕರ್ ಜಯಂತಿ ಉತ್ಸವ ಹಾಗೂ ಉಚಿತ ಆರೋಗ್ಯ ಶಿಬಿರವು ನಗರದ ಸುತ್ತಮುತ್ತಲ ಗ್ರಾಮಸ್ಥರ ಭಾಗವಹಿಸುವಿಕೆಯಿಂದ ಭರ್ಜರಿಯಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು,ಯುವಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮದ ಅಂಗವಾಗಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳು ನಡೆಯಿತು. ಅಮೂಲ್ಯ ವಾಲಂಟರಿ ಬ್ಲಡ್ ಸೆಂಟರ್ ಹಾಗೂ ವಾಸನ್ ಐ ಕೇರ್ ಸಂಸ್ಥೆಗಳ ಸಹಕಾರದಿಂದ ಜನರಿಗೆ ಆರೋಗ್ಯ ಸೇವೆಗಳು ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಎಮ್ ಎ ಚೆನ್ನಕೃಷ್ಣ ಡಾ.ಬಿಆರ್ ಅಂಬೇಡ್ಕರ್ ಕರುನಾಡ ಸೇನಾ ಮತ್ತು ಅನಂತ ಫೌಂಡೇಶನ್ ಸಂಸ್ಥಾಪಕರು ಮತ್ತು ಅಧ್ಯಕ್ಷರು, ವೆಂಕಟರಮಣಪ್ಪ ಮೂರ್ತಿ,ನಂಜುಂಡಪ್ಪ ಹಾಗೂ ಸಿಂಗಾಪುರ ರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮದ ಮಹತ್ವವನ್ನು ಹೊಗಳಿದರು.
ಈ ಸಂದರ್ಭದಲ್ಲಿ ಸಮಾಜದ ಸೇವೆಯಲ್ಲಿ ತೊಡಗಿರುವ ಮಹಾಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದ ಎಲ್ಲಾ ಗ್ರಾಮಸ್ಥರು, ಸಂಘಟನೆಗಳು ಹಾಗೂ ಸಹಕಾರ ನೀಡಿದ ಎಲ್ಲರಿಗೂ ಅನಂತ ಫೌಂಡೇಶನ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು.






