ದೊಡ್ಡಬಳ್ಳಾಪುರ, ಜುಲೈ04 : 17ನೇ ಮೊಹರಂ ಅಂಗವಾಗಿ ದೊಡ್ಡಬಳ್ಳಾಪುರದ ಐತಿಹಾಸಿಕ ಶಿಯಾ ಅಶುಖಾನದಲ್ಲಿ ಹಜರತ್ ಇಮಾಮ್ ಹುಸೇನ್ (ಅ.ಸ.) ಅವರ ತ್ಯಾಗ, ಬಲಿದಾನ, ನ್ಯಾಯ ಹಾಗೂ ಸತ್ಯದ ಸಂದೇಶವನ್ನು ಸ್ಮರಿಸಿ ಭಕ್ತಿಭಾವದಿಂದ ಶೋಕಾಚರಣೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಶಿಯಾ ಅಶುಖಾನಕ್ಕೆ ಆಗಮಿಸಿ, ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ವಿಧಿವಿಧಾನಗಳು ಶಿಸ್ತಿನಿಂದ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನಡೆದವು.
ಕಾರ್ಯಕ್ರಮದಲ್ಲಿ ಮಿರ್ ಶಭಹತ್ ಹುಸೇನ್, ಅಂಜುಮನ್-ಎ-ಜಾಫರಿಯಾ ಅಲಿಪುರ ಅಧ್ಯಕ್ಷರು, ಸೈಯದ್ ಮುರ್ತುಜಾ ಹುಸೇನ್ ಕಾರ್ಯದರ್ಶಿ , ಮಾಜಿ ಅಧ್ಯಕ್ಷರು ಅಂಜುಮನ್-ಎ-ಹೈದರಿಯಾ ದೊಡ್ಡಬಳ್ಳಾಪುರದ ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಇದೇ ವೇಳೆ ಅಘಾ ಸುಲ್ತಾನ್ ಅವರ ತಂದೆ ಶ್ರೀ ಮಿರ್ಜಾ ಅಬ್ಬಾಸ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ದೇಶದಲ್ಲಿ ಶಾಂತಿ, ಸೌಹಾರ್ದತೆ, ರಾಜ್ಯದ ಅಭಿವೃದ್ಧಿ ಹಾಗೂ ಸಮಸ್ತ ಜನರ ಸುಖ-ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು.ಧಾರ್ಮಿಕ ಮುಖಂಡರು, ಸಮಾಜದ ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊಹರಂ ಶೋಕಾಚರಣೆಯನ್ನು ಭಕ್ತಿಭಾವದಿಂದ ಆಚರಿಸಿದರು. ಕಾರ್ಯಕ್ರಮವು ಶಾಂತಿಯುತ ಹಾಗೂ ಶಿಸ್ತಿನ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.






