ಕರ್ನಾಟಕ ಸರ್ಕಾರ ಮಾನ್ಯತೆ ಪಡೆದಿರುವ ಒರಿಯಂಟಲ್ ಫೌಂಡೇಶನ್ (ರಿ) ವತಿಯಿಂದ 2025–2026ನೇ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯ ಸಾಧಕರಿಗೆ ‘ನೋಬೆಲ್ ಕನ್ನಡಿಗ, ಪದ್ಮಶ್ರೀ ಗ್ಲೋಬಲ್ ಅವಾರ್ಡ್, ಧಾರ್ಮಿಕ ರತ್ನ, ಶಿಕ್ಷಣ ರತ್ನ’ ಪ್ರಶಸ್ತಿಗಳನ್ನು ಪ್ರಧಾನ ಮಾಡುವ ಭವ್ಯ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವಾಗಿ ಡಾ. ಕುಮಾರ್ ವಸಿಷ್ಠ (ಸಾಮುದ್ರಿಕ ರತ್ನ, ಜ್ಯೋತಿಷ್ಯ ರತ್ನ) ಆಗಮಿಸಿ ಆಶೀರ್ವಚನ ನೀಡಿದರು. ಉದ್ಘಾಟನೆಯನ್ನು ಡಾ. ವಿಜಯ್ ಕುಮಾರ್ ನೆರವೇರಿಸಿದರು. ಧಾರ್ಮಿಕ ಚಿಂತಕರು ಹಾಗೂ ಹಿಂದೂಸಭಾ ಅಧ್ಯಕ್ಷರಾದ ಡಾ. ಪ್ರಹಲ್ಲಾದ್ ತಮನ್ನಕರ್ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷತೆಯನ್ನು ಡಾ. ಗೀತಾ ಹೆಚ್ ಕೈವಾರ ವಹಿಸಿ, ಸಾಧಕರನ್ನು ಗೌರವಿಸುವ ಪರಂಪರೆ ಸಮಾಜಕ್ಕೆ ದಿಕ್ಕು ತೋರಿಸುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಡಾ. ರಾಜು ಗಸ್ತಿ, ಚಂದನ್ ಗೌಡ, ಶ್ರೀಮತಿ ಡಾ. ಸ್ಮಿತಾ ಟಿ, ಶ್ರೀ ಅಪ್ಪರ್ ಹಿಂದುಸ್ಥಾನಿ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಕನ್ನಡ ಕಿರುತೆರೆ ಜನಪ್ರಿಯ ನಟಿ ಶ್ರೀಮತಿ ಅಭಿನಯ, ಹಾಸ್ಯ ಕಲಾವಿದ ಹಾಗೂ ರಂಗಭೂಮಿ ನಿರ್ದೇಶಕ ಮೈಸೂರ್ ರಮಾನಂದ್ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಇನ್ನಿತರ ಗಣ್ಯರಲ್ಲಿ ಡಾ. ಗೋವಿಂದರಾಜು ಟಿ, ಡಾ. ಸಿ.ಎಂ. ರಾಜಶೇಖರ್, ಡಾ. ಹೆಚ್ ಪುಷ್ಪಲತಾ, ಶ್ರೀಮತಿ ಪಾರ್ವತಿ ಬಿ ಎ, ಹಾಗೂ ರೈತ ಸಂಘದ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರು ಡಾ. ರುದ್ರೇಶ್ ಕೆ ಜಿ ಉಪಸ್ಥಿತರಿದ್ದರು. ರಂಗಭೂಮಿ ಕಲಾವಿದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ವೈ ಕೆ ಹನುಮಂತಯ್ಯ ಸಹ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿದ ಡಾ ಗೀತಾ ಹೆಚ್ ಕೈವಾರ ಅವರಿಗೆ ‘ನೋಬೆಲ್ ಕನ್ನಡಿಗ’ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಲ್ಲಿಸಿ, ಸಮಾಜಮುಖಿ ಸೇವೆಯನ್ನು ಪ್ರೋತ್ಸಾಹಿಸುವ ಸಂದೇಶ ನೀಡಲಾಯಿತು. ಉಪಸ್ಥಿತರಿದ್ದ ಗಣ್ಯರು ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಪ್ರೇರಣೆಯ ಬೆಳಕು ಹಚ್ಚುತ್ತವೆ ಎಂದು ಅಭಿಪ್ರಾಯಪಟ್ಟರು.





