ಬೆಂಗಳೂರು ನಗರದ ಯಶವಂತಪುರ ಹಾಗೂ ಟಿ.ದಾಸರಹಳ್ಳಿ ಭಾಗಗಳಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಜ್ಯೋತಿಷ್ಯ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಡಾ. ಅಂಬರೀಶ್ ಜಿ. ಅವರು ಬಹುಮುಖ ವ್ಯಕ್ತಿತ್ವದ ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಜ್ಯೋತಿಷ್ಯ ಜ್ಞಾನ, ಸಹಕಾರ ಕ್ಷೇತ್ರದ ನಾಯಕತ್ವ ಹಾಗೂ ಧಾರ್ಮಿಕ ಸೇವೆಗಳ ಮೂಲಕ ಜನಮನ ಗೆದ್ದಿರುವ ಅವರು, ಸರಳ ಜೀವನ ಮತ್ತು ಸೇವಾ ಮನೋಭಾವದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೈಯಕ್ತಿಕ ಹಿನ್ನೆಲೆ



ಗೊಂಧಾಳ ಅನಂತಮೂರ್ತಿ ಮತ್ತು ಗಿರಿಜಮ್ಮ ದಂಪತಿಗಳ ಪುತ್ರರಾದ ಡಾ. ಅಂಬರೀಶ್ ಜಿ. ಅವರು ಟಿ.ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ವಾಸವಾಗಿದ್ದಾರೆ. ಯಶವಂತಪುರ ಸರ್ಕಲ್ ನಲ್ಲಿ ಅವರ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಜ್ಯೋತಿಷ್ಯ ಸಲಹೆ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿವೆ.
ಶಿಕ್ಷಣ ಮತ್ತು ಅಂತರಾಷ್ಟ್ರೀಯ ಸಾಧನೆ


ಮಲ್ಲೇಶ್ವರಂನ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ಅವರು, ಆರ್.ಟಿ.ನಗರದ ರವೀಂದ್ರನಾಥ ಟಾಗೋರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ನಂತರ ಬಿ.ಕಾಂ ಪದವಿ ಶಿಕ್ಷಣ
ಹಾಗೂ ಡಿಪ್ಲೊಮಾ ಇನ್ journalism.
ಜ್ಯೋತಿಷ್ಯದಲ್ಲಿ ಆಳವಾದ ಅಧ್ಯಯನ ಮಾಡಿ ಅಮೇರಿಕಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ವೇದಾಂಗ ಜ್ಯೋತಿಷ್ಯದಲ್ಲಿ ಪಿ.ಜಿ. ಡಿಪ್ಲೊಮಾ ಪಡೆದಿದ್ದಾರೆ. ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್, ಯುಎಸ್ಎ ಸಂಸ್ಥೆಯಿಂದ ಪಿಎಚ್.ಡಿ. ಹಾಗೂ ಡಾಕ್ಟರೇಟ್ ಪದವಿಯನ್ನು ಸಂಪಾದಿಸಿದ್ದಾರೆ. ಕಿಂಗ್ಸ್ ಯೂನಿವರ್ಸಿಟಿಯಿಂದ ಸಮಾಜಸೇವೆಗೆ ಗೌರವ ಡಾಕ್ಟರೇಟ್‌ನ್ನೂ ಪಡೆದಿದ್ದಾರೆ.
ಸಂಘಟನೆಗಳಲ್ಲಿ ಸಕ್ರಿಯ ಪಾತ್ರ
ಡಾ. ಜಿ ಅಂಬರೀಶ್ ಅವರು ಹಲವಾರು ಪ್ರತಿಷ್ಠಿತ ಸಂಘಟನೆಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಸದಸ್ಯತ್ವಗಳು: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ
ರಾಷ್ಟ್ರೀಯ ಜ್ಯೋತಿಷ್ಯ ಪರಿಷತ್
ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್
ಬಿ-ಕ್ಲಿಪ್ (ಸಿವಿಕ್ ಲೀಡರ್)
ಕನ್ನಡ ಸಾಹಿತ್ಯ ಪರಿಷತ್
ಉಪಾಧ್ಯಕ್ಷರು ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ (ಕಾವೇರಿ, ಬೆಂಗಳೂರು)
ಅಧ್ಯಕ್ಷರು
ಎಸ್.ಡಿ.ಎ.ಎಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ರಿಜಿ)
ಹಂಸ ಜ್ಯೋತಿಷ್ಯ ವಿದ್ಯಾ ಕೇಂದ್ರ
ಸಂತೃಪ್ತಿ ಪ್ರತಿಷ್ಠಾನ, ಯಶವಂತಪುರ
ಶ್ರೀ ಧಾರಿ ಆಂಜನೇಯ ಸ್ವಾಮಿ ದೇವಸ್ಥಾನ(ಅಧ್ಯಕ್ಷರು)
ಧಾರ್ಮಿಕ ಮತ್ತು ಟ್ರಸ್ಟ್ ಸೇವೆ
ಯಶವಂತಪುರ ಹಾಗೂ ಟಿ.ದಾಸರಹಳ್ಳಿಯ ಶ್ರೀ ಭವಾನಿ ಕ್ಷೇತ್ರದ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ದೇವಸ್ಥಾನಗಳ ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಮುಂತಾದ ಸೇವೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಹನುಮ ಸೇನೆಯ ಚಟುವಟಿಕೆಗಳಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದಾರೆ.
ಕರೋನಾ ಸಂಕಷ್ಟದಲ್ಲಿ ಮಿಡಿದ ಹೃದಯ
ಕೊರೋನಾ ಮಹಾಮಾರಿ ಸಮಯದಲ್ಲಿ ಅಗತ್ಯವಿರುವವರಿಗೆ ಆಹಾರ ವಿತರಣೆ, ಔಷಧ ಸಹಾಯ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಂಕಷ್ಟದ ಹೊತ್ತಿನಲ್ಲಿ ಅವರ ಸೇವೆ ಅನೇಕ ಕುಟುಂಬಗಳಿಗೆ ಆಶಾಕಿರಣವಾಗಿತ್ತು.
ಪ್ರಶಸ್ತಿಗಳು ಮತ್ತು ಗೌರವಗಳು
ಸಾಮಾಜಿಕ ಹಾಗೂ ಜ್ಯೋತಿಷ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ 50ಕ್ಕೂ ಹೆಚ್ಚು ಪ್ರಶಸ್ತಿಗಳು ಹಾಗೂ 10ಕ್ಕೂ ಹೆಚ್ಚು ಬಿರುದುಗಳನ್ನು ಪಡೆದಿದ್ದಾರೆ. ಪ್ರಮುಖವಾಗಿ
ಬೆಂಗಳೂರು ರತ್ನ
ಮಲ್ಲೇಶ್ವರಂ ರತ್ನ
ಭಾರತ ಅಭಿವೃದ್ಧಿ ರತ್ನ
ಭಾರತ ಜ್ಯೋತಿ
ರಾಷ್ಟ್ರೀಯ ವಿಭೂಷಣ
ಕರ್ನಾಟಕ ಸಹಕಾರ ರತ್ನ
ಸಮಾಜ ಸೇವಾ ರತ್ನ – ಕರುನಾಡ ತಿಲಕ
ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ
ಕರುನಾಡ ಕನ್ಮಣಿ – ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹಲವು ಪ್ರಶಸ್ತಿಗಳ ಸರದಾರ ಇವರು
ಪತ್ರಿಕಾ ಕ್ಷೇತ್ರದಲ್ಲಿ ಕೊಡುಗೆ
“ಆಪ್ತ ಬಂಧು” ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಜ್ಯೋತಿಷ್ಯ ಹಾಗೂ ಸಮಾಜಮುಖಿ ಲೇಖನಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

ಜ್ಯೋತಿಷ್ಯ ವಿದ್ಯೆ, ಸಮಾಜಸೇವೆ, ಧಾರ್ಮಿಕ ಸೇವೆ ಹಾಗೂ ಸಹಕಾರ ಸಂಘಟನೆಗಳ ಮೂಲಕ ಜನರ ಬದುಕಿನಲ್ಲಿ ಬೆಳಕು ಹಚ್ಚುವ ಪ್ರಯತ್ನ ಮಾಡುತ್ತಿರುವ ಡಾ. ಅಂಬರೀಶ್ ಜಿ. ಅವರು ತಮ್ಮ ಸೇವಾ ಮನೋಭಾವ, ಸರಳತೆ ಮತ್ತು ನಾಯಕತ್ವದಿಂದ ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಪ್ರಶಸ್ತಿಗಳ ಮಹಾಪೂರ ಬಂದರೂ ಯಾವುದೇ ಅಹಂಕಾರವಿಲ್ಲದೆ ಜನರ ನಡುವೆ ಬೆರೆತು ಬದುಕುತ್ತಿರುವ ಅವರ ಸೇವಾ ಪಯಣ ಹಲವರಿಗೆ ಸ್ಫೂರ್ತಿಯಾಗಿದೆ.






