ಸಿರಿಗೇರಿ,ಜು07:ಸಮೀಪದ ದಾಸಾಪುರ ಗ್ರಾಮದ ರೈತರ ಪುರಾತನ ಕಾಲದ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಯಾವುದೇ ಮೂಲ ದಾಖಲಾತಿಗಳು ಇಲ್ಲದೆ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಅಡ್ಡಗಟ್ಟಿ ಅತಿಕ್ರಮಣಕ್ಕೆ ಮುಂದಾಗಿರುವುದನ್ನು ಖಂಡಿಸಿದ ಇಲ್ಲಿನ ರೈತರು ಸಿರಿಗೇರಿ ಪೊಲೀಸ್ ಠಾಣಾ ಹಾಗೂ ಕೊಂಚಿಗೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿರುವುದರ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಂಚನಾಮೆ ನಡೆಸಿದ ಗ್ರಾಪಂ ಪಿಡಿಒ ಲೀಲಾವತಿ ಬಂಡೂರಿ ರಘುಪತಿ ಇವರ ಹೆಸರಿನಲ್ಲಿ ಸರ್ಕಾರಿ ಜಾಗ 20 /30 ಅಡಿ ಪಡೆದುಕೊಂಡಿದ್ದಾರೆ.ಅಲ್ಲದೆ ಮುಖ್ಯ ರಸ್ತೆ ಮೂಲಕ ಜಾಗವನ್ನು ಅತಿಕ್ರಮಣ ಮಾಡಿರುತ್ತಾರೆ. ಅಲ್ಲದೆ ಅನಾದಿಕಾಲದ ರೈತರ ರಸ್ತೆಯನ್ನು ಹೊಲಗಳಿಗೆ
ತೆರಳದಂತೆ ಯಾವುದೇ ಮೂಲ ದಾಖಲಾತಿಗಳು ಇಲ್ಲದೆ ಕಲ್ಲುಗಳನ್ನು ಅಡ್ಡವಾಗಿ ರಸ್ತೆಗೆ ಹಾಕಿರುವುದು ಕಾನೂನು ಬಾಹಿರ.
ಈ ಬಗ್ಗೆ ರೈತರ ರಸ್ತೆಯನ್ನು ಬಿಡುವಂತೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಈ ಬಾರಿ ಕಲ್ಲುಗಳನ್ನು ತೆರವುಗೊಳಿಸದಿದ್ದಲ್ಲಿ ತಪ್ಪಿತಸ್ಥರ ಮೇಲೆ ಕೇಸು ದಾಖಲಾತಿಸ ಲಾಗುವುದೆಂದು ಎಚ್ಚರಿಕೆ ನೀಡಿದರು. ಆನಂತರ ಸಿರಿಗೇರಿ ಪಿಎಸ್ಐ ಶಶಿಧರ ನಾಯಕ್ ಗ್ರಾಮ ಪಂಚಾಯಿತಿಯ ಪಿಡಿಓ ರವರು ನಿಯಮಾನುಸಾರ ಕ್ರಮ ವಹಿಸಿದ್ದಾರೆ.
ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಯಾಗಿ ಗಲಾಟೆ ಸಂಭವಿಸಿದಲ್ಲಿ ಮುಲಾಜಿಲ್ಲದೆ ಕೇಸು ದಾಖಲಿಸುವುದಾಗಿ ಫಲಾನುಭವಿಗೆ ತಿಳಿಸಿದರು. ಆನಂತರ ಅಧಿಕಾರಿಗಳ ಸಮ್ಮುಖದಲ್ಲಿ ರಸ್ತೆಗೆ ಅಡ್ಡವಾದ ಕಲ್ಲುಗಳು ಹಾಗೂ ಒತ್ತುವರಿಯನ್ನು ರೈತರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಮಾಜಿ ಗ್ರಾಫಂ ಅಧ್ಯಕ್ಷ ಬಸವರಾಜ, ಮಾಜಿ ಉಪಾಧ್ಯಕ್ಷ ಚಂದ್ರಪ್ಪ, ಸಿದ್ದನಗೌಡ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಇದ್ದರು.






