ಮೇ30 ಸಿರಿಗೇರಿ ; ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುವುದು ಸಾಮಾನ್ಯವಾದ ವಿಷಯವಲ್ಲ. ಈ ಹಿಂದಿನ ಕಾಲಘಟ್ಟದಲ್ಲಿ ಇಂತಹ ಅಧಿಕಾರಿ ನಿವೃತ್ತಿ ಹೊಂದುತ್ತಿರುವುದು ಎಸ್ ಬಿ ಐ ಬ್ಯಾಂಕಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಿರಿಗೇರಿ ಎಸ್ ಬಿ ಐ ಬ್ಯಾಂಕಿನ ವ್ಯವಸ್ಥಾಪಕ ನವೀನ್ ಕುಮಾರ್ ಸಜ್ಜೆ ಗೌಡ ತಿಳಿಸಿದರು. ನಾಗನಾಥಪ್ಪ ಇವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು 1986ರಲ್ಲಿ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸಿ 1996 ರಿಂದ ಕಾಯಂ ನೌಕರರಾಗಿ ಸುಮಾರು 39 ವರ್ಷಗಳ ಕಾಲ ಬಡ ಬಗ್ಗರ ರೈತಾಪಿ ವರ್ಗದ ಹಿತಕ್ಕಾಗಿ ಹಗಲು ರಾತ್ರಿ ಎನ್ನದೆ ನಿರಂತರ ಸೇವೆ ಸಲ್ಲಿಸಿದ್ದಾರೆ.ಇಂತಹ ಅಧಿಕಾರಿಯನ್ನು ಪಡೆಯುವುದು ನಮ್ಮ ಪುಣ್ಯ ಭಾಗ್ಯ ಎಂದರು.
ತದ ನಂತರ ಕೊಂಚಿಗೇರಿಯ ಕರ್ಣಂ ಬಸವರಾಜ ಗೌಡ ಮಾತನಾಡಿ ಯಾವುದೇ ಬ್ಯಾಂಕ್ ಆಗಿರಲಿ ಸಹಕಾರಿ ಬ್ಯಾಂಕ್ ಆಗಿರಲಿ ರೈತರ ಉಳಿವಿಗಾಗಿ
ನ ಡೆಯುತ್ತದೆ. ರೈತರ ಉಳಿವಿಗಾಗಿ ಕರ್ತವ್ಯ ನಿರ್ವಹಿಸುವುದು ಕಷ್ಟ ಸಾಧ್ಯ ಕೆಲಸ. ಆದರೆ ರೈತರಿಗೆ ಯಾವುದೇ ರೀತಿಯಲ್ಲಿ ಅಸಹಾಯಕಾರ ತೋರದೆ ಸಹಾಯ ಹಸ್ತ ನೀಡಿ ಮಾನವಿಯತೆ ಮೆರೆಯುವುದು ಪ್ರತಿಯೊಬ್ಬ ಅಧಿಕಾರಿಯ ಪ್ರಮುಖ ಆದ್ಯ ಕರ್ತವ್ಯ.
ಇಂತಹ ಮಾನವೀಯ ಮೌಲ್ಯತೆಯನ್ನು ಕಲ್ಪಿಸಿಕೊಟ್ಟ ನೂರಾರು ಜನ ಒಬ್ಬರಲ್ಲಿ ಸಿರಿಗೇರಿಯ ಎಸ್ ಬಿ ಐ ಬ್ಯಾಂಕಿನ ಅಧಿಕಾರಿ ನಾಗನಾಥಪ್ಪ ಮುಂಚೂಣಿಯಲ್ಲಿರುವುದು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರ ಮೆಚ್ಚುಗೆಗೆ ಪಾತ್ರರಾಗಿರುವುದು ಮೆಚ್ಚುಗೆಯ ಸಂಗತಿ, ತದನಂತರ ನೆನೆಕ್ಕಿ ವಿರುಪಾಕ್ಷಿ ಮಾತನಾಡಿ ಕಳೆದ 39 ವರ್ಷಗಳ ಹಿಂದೆ ಜೋತು ಬಿದ್ದ ಕೊಠಡಿಯಲ್ಲಿ ನಾಗನಾಥಪ್ಪ ಒಬ್ಬರೇ ಖಜಾಂಚಿಯಾಗಿ ಕರ್ತವ್ಯ ನಿರ್ವಹಿಸಿ ರೈತಾಪಿ ವರ್ಗಕ್ಕೆ ಬೇಕಾದ ಎಲ್ಲಾ ಸಾಲ ಸೌಲಭ್ಯ ಕಲ್ಪಿಸಿ ಕೊಡುತ್ತಿದ್ದರು ಇಂದಿನವರೆಗೂ ಕೂಡ ಇವರು ತಮ್ಮ ಗುಣಾತ್ಮಕತೆಯನ್ನು ಹೀಗೆಯೇ ಕಾಪಾಡಿಕೊಂಡು ಬಂದಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಇದೇ ಸಂದರ್ಭದಲ್ಲಿ ವಯೋ ನಿವೃತ್ತಿ ಅಧಿಕಾರಿ ಎಸ್‌ಬಿಐ ಬ್ಯಾಂಕಿನ ನಾಗನಾಥಪ್ಪ ಹಾಗೂ ಪತ್ನಿ ಅನಸೂಯ ಇವರಿಗೆ ಎಲ್ಲಾ ಸಾರ್ವಜನಿಕರು ಸನ್ಮಾನ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗನಾಥಪ್ಪ ಸಿರಿಗೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಗ್ರಾಹಕರು ಇಂದಿನವರೆಗೂ ಸಹ ಸಹೋದರ ಸಮಾನತೆಯಿಂದ ಬಾಳುತ್ತಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಅದೇನು ಉಪಕಾರ ಮಾಡಿದ್ದೇನು ಅದನ್ನು ಜನರೇ ನನಗೆ ಕಲ್ಪಿಸಿ ಕೊಟ್ಟಂತಹ ಋಣ ಎಂದರು.
ಕಾರ್ಯಕ್ರಮದಲ್ಲಿ ಕುಟುಂಬ ವರ್ಗದವರಾದ ಅಂಜಿ ನಮ್ಮ ಕಲ್ಲಪ್ಪ, ಗಂಗಮ್ಮ ದುರ್ಗಪ್ಪ, ಶೇಖಪ್ಪ ಸೋಮಕ್ಕ, ಗೆಜ್ಜಲಿ ಈರಣ್ಣ ಪಾರ್ವತಮ್ಮ, ನಾಗರಾಜ ನೀಲಮ್ಮ, ಸಿದ್ದಮ್ಮ ಹನುಮಂತಪ್ಪ, ಗ್ರಾಮದ ಪ್ರಮುಖರಾದ ಸಿಎಂ ನಾಗರಾಜ ಸ್ವಾಮಿ, ಅಂಬರೀಶ್ ಗೌಡ, ಬಿ ಸೋಮಶೇಖರಪ್ಪ, ಶೇಖರಪ್ಪ ಗೌಡ, ಬಿಚುಗತ್ತಿ ಮಲ್ಲಯ್ಯ, ಡ್ರೈವರ್ ಹುಲುಗಪ್ಪ ಜಗದೀಶ, ಬಾಲಕೃಷ್ಣ, ನಾಗರಾಜ್, ಜೆ ಎನ್. ವಿರೂಪಾಕ್ಷಪ್ಪ, ಬಕಾಡೆ ನಾಗೇಂದ್ರಪ್ಪ, ಜೀನ್ಸ್ ಬಸವರಾಜ, ಹೂಗಾರ್ ಬಸವರಾಜ, ಮಲ್ಲಿಕಾರ್ಜುನ್ ಗೌಡ, ಶಶಿಧರ ಗೌಡ, ರಾರಾವಿ ವೆಂಕಟೇಶ, ದಾನಪ್ಪ ಸೇರಿದಂತೆ ನೂರಾರು ಜನ ಇದ್ದರು.






